Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಟಾ ಬಾಸ್‌ಗೆ ಸಂಕಷ್ಟ: ಯುವಜನರ ಮೇಲೆ ಇನ್‌ಸ್ಟಾಗ್ರಾಮ್ ಪ್ರಭಾವದ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಸಾಕ್ಷ್ಯ ನುಡಿದಿದ್ದೇನು?

19/02/2026 7:33 AM

ಪೋಷಕರೇ ಗಮನಿಸಿ : ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

19/02/2026 7:31 AM

ಗಂಡ ಸತ್ತರೆ, ಅತ್ತೆ-ಮಾವನ ಸಂಪೂರ್ಣ ಆಸ್ತಿ ಹೆಂಡತಿಗೆ ಹೋಗುತ್ತದೆಯೇ? 90% ಜನರಿಗೆ ಸತ್ಯ ತಿಳಿದಿಲ್ಲ!

19/02/2026 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ರಾಜಹಂಸ’ ಬಸ್ ಟಿಕೆಟ್ ದರ ಇಳಿಕೆ
KARNATAKA

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : `ರಾಜಹಂಸ’ ಬಸ್ ಟಿಕೆಟ್ ದರ ಇಳಿಕೆ

By kannadanewsnow5707/01/2026 8:18 AM

ಬೆಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಎನ್ನುವಂತೆ ನಿಗಮದ ಪ್ರತಿಷ್ಠಿತ ಸಾರಿಗೆ ಬಸ್ಸುಗಳ ಪ್ರಯಾಣದ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಕರಾರಸಾ ನಿಗಮವು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುತ್ತಿದ್ದು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಆಯ್ದ ಮಾರ್ಗಗಳಾದ ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡ 5 ರಿಂದ 15 ರವರೆಗೆ ರಿಯಾಯಿತಿ ನೀಡಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 2026 ರ ಜನವರಿ, 05 ರಿಂದ ಜಾರಿಗೆ ಬರುವಂತೆ ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಕಾರ್ಯಾಚರಿಸುವ ರಾಜಹಂಸ ಹಾಗೂ ನಾನ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ ಎಂದು ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಅವರು ತಿಳಿಸಿದ್ದಾರೆ.

ವಿವರ ಇಂತಿದೆ: ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.780, ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ ರೂ.700, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.680, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550, ಕುಶಾಲನಗರ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.620, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.500,

ವಿರಾಜಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.620, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550, ಗೋಣಿಕೊಪ್ಪ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.620,ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550, ಸೋಮವಾರಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.630, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550, ಮಡಿಕೇರಿ-ಮೈಸೂರು ಮಾರ್ಗ ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.570, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.450, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.430, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.280 ಆಗಿದೆ.

ಸಾರ್ವಜನಿಕ ಪ್ರಯಾಣಿಕರು ಈ ರಿಯಾಯಿತಿ ಪ್ರಯಾಣದರದ ಸದುಪಯೋಗವನ್ನು ಪಡೆದುಕೊಂಡು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವಂತೆ ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಅವರು ಕೋರಿದ್ದಾರೆ.

GOOD NEWS: Good news for the people of the state: `Rajahamsa` bus ticket prices reduced
Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

19/02/2026 7:31 AM1 Min Read

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

19/02/2026 7:27 AM3 Mins Read

ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

19/02/2026 7:25 AM6 Mins Read
Recent News

ಮೆಟಾ ಬಾಸ್‌ಗೆ ಸಂಕಷ್ಟ: ಯುವಜನರ ಮೇಲೆ ಇನ್‌ಸ್ಟಾಗ್ರಾಮ್ ಪ್ರಭಾವದ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಸಾಕ್ಷ್ಯ ನುಡಿದಿದ್ದೇನು?

19/02/2026 7:33 AM

ಪೋಷಕರೇ ಗಮನಿಸಿ : ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

19/02/2026 7:31 AM

ಗಂಡ ಸತ್ತರೆ, ಅತ್ತೆ-ಮಾವನ ಸಂಪೂರ್ಣ ಆಸ್ತಿ ಹೆಂಡತಿಗೆ ಹೋಗುತ್ತದೆಯೇ? 90% ಜನರಿಗೆ ಸತ್ಯ ತಿಳಿದಿಲ್ಲ!

19/02/2026 7:28 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

19/02/2026 7:27 AM
State News
KARNATAKA

ಪೋಷಕರೇ ಗಮನಿಸಿ : ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

By kannadanewsnow5719/02/2026 7:31 AM KARNATAKA 1 Min Read

ಜನವರಿ 2027ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ರಾಜ್ಯದ…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

19/02/2026 7:27 AM

ಇನ್ಮುಂದೆ ‘ಶಾಲಾ ಶಿಕ್ಷಕರ ಹಾಜರಾತಿ’ಗೆ ‘ಫೇಸ್ ರೆಕಾಗ್ನಿಷನ್’ ಕಡ್ಡಾಯ: ‘ಶಿಕ್ಷಕರ ಕಳ್ಳಾಟ’ಕ್ಕೆ ಸರ್ಕಾರ ಬ್ರೇಕ್

19/02/2026 7:25 AM

ಮೊಣಕಾಲು ನೋವಿಗೆ ಇದು ಸಂಜೀವಿನಿಯಂತೆ : 60 ವರ್ಷ ಮೇಲ್ಪಟ್ಟವರು ಪ್ರತಿದಿನ ತಪ್ಪದೇ ಈ ಹಾಲು ಕುಡಿಯಿರಿ !

19/02/2026 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.