ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಬಿಬಿಎಂಪಿಯಿಂದ ಶೀಘ್ರದಲ್ಲೇ ಟಾಟಾ ಸ್ಟಾರ್ ಬಸ್ ಗಳ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು,ಸಿಲಿಕಾನ್ ಸಿ.ಟಿ.ಬೆಂಗಳೂರಿನಲ್ಲಿ ಈಗಾಗಲೇ ಆರಂಭವಾಗಿರುವ ಎಲೆಕ್ಟ್ರಿಕಲ್ ಬಸ್ ಗಳ ಜೊತೆಗೆ ಇದೀಗ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಗಮದ ವತಿಯಿಂದ ಅತೀ ಶೀಘ್ರದಲ್ಲೇ ಟಾಟಾ ಸ್ಟಾರ್ ಬಸ್ ಗಳ ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಲೋ ಪ್ಲೋರ್ 12 ಮೀಟರ್ ನ 921 ಬಸ್ ಗಳನ್ನು ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಟಾಟಾ ಮೋಟಾರ್ಸ್ ನ ಅಂಗ ಸಂಸ್ಥೆಯಾದ ಟಿಎಂಎಲ್ ಸ್ಮಾಟ್೯ ಸಿಟಿ ಮೊಬಿಲಿಟಿ ಸಲ್ಯೂಶನ್ ಜೊತೆಗೆ ನಮ್ಮ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಉತ್ಕೃಷ್ಟ ವಿನ್ಯಾಸ ,ಪರಿಸರ ಸ್ನೇಹಿ,ಮಾಲಿನ್ಯರಹಿತ , ಆರಾಮದಾಯಕ ಪ್ರಯಾಣ ದೀರ್ಘಕಾಲದ ಬಾಳಿಕೆ ಸೇರಿದಂತೆ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಟಾಟಾ ಸ್ಟಾರ್ ಎಲೆಕ್ಟ್ರಿಕ್ ಬಸ್ ಗಳ ಸಂಚಾರದಿಂದ ಬೆಂಗಳೂರಿನ ಸಾರಿಗೆ ನಿಗಮದ ಪ್ರತಿಷ್ಟೆಗೆ ಮತ್ತೊಂದು ಮುಕುಟ ಸಿಕ್ಕಾಂತಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಉತ್ತಮ ಸಾರಿಗೆ ಸೇವೆ ಒದಗಿಸಲು ನಾವು ಸದಾ ಬದ್ದವಾಗಿದ್ದೇವೆ.ನಮ್ಮ ಬಿಎಂಟಿಸಿ, ನಮ್ಮ ಹೆಮ್ಮೆ ಎಂದು ತಿಳಿಸಿದ್ದಾರೆ.