ಬೆಳಗಾವಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಿಎಂ ಕುಸುಮ್-ಬಿ ಯೋಜನೆಯಡಿ ರಾಜ್ಯದಾದ್ಯಂತ 1 ಲಕ್ಷ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ಸೆಟ್ ವಿತರಿಸಲು ಸಿದ್ದತೆ ನಡೆಸಿದೆ.
BIGG NEWS : ಶೀಘ್ರವೇ `: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ದ 25 ಅಭ್ಯರ್ಥಿಗಳ ಘೋಷಣೆ
ಕೇಂದ್ರ ಸರ್ಕಾರದ ಪಿಎಂ ಕುಸುಮ್-ಬಿ ಯೋಜನೆಯಡಿ ರಾಜ್ಯಾದ್ಯಂತ 1 ಲಕ್ಷ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ ಸೆಟ್ ವಿತರಣೆಗೆ ಮುಂದಾಗಿದೆ. ರೈತರಿಗೆ ನೀಡುವ ಪ್ರತಿ ಸೋಲಾರ್ ಪಂಪ್ ಸೆಟ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.30 ರಷ್ಟು ಹಣ ಒದಗಿಸಲಾಗುತ್ತದೆ. ರೈತರಿಗೆ ರಾಜ್ಯ ಸರ್ಕಾರವು 7 ಅಶ್ವಶಕ್ತಿ (HP) ವರೆಗಿನ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲಿದೆ.
ಪಿಎಂ ಕುಸುಮ್ ಯೋಜನೆ ಮೊಒದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಲು ಸರ್ಕಾರ ಬಯಸಿದ್ದು, ಒಂದು ಲಕ್ಷ ಫಲಾನುಭವಿ ರೈತರನ್ನು ಸೇರಿಸುವ ಚಿಂತನೆ ನಡೆಸಿದೆ.
ಪಿಎಂ ಕುಸುಮ್ ಎ,ಬಿ,ಸಿ ವಿಭಾಗಳನ್ನು ಅನುಷ್ಠಾನಕ್ಕೆ ತರಲಾಗಿದದು, ಎ ಯಡಿ ವಿದ್ಯುತ್ ಉತ್ಪಾದನಗೆ ರೈತರ ಸಹಕಾರ ಸಂಘಗಳು, ಡೆವಲಪರ್ ಗಳಿಗೆ ಸಬ್ಸಿಡಿ ನೆರವು ಲಭಿಸಲಿದೆ. ಬಿ ಯಡಿ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಗಳಿಗೆ ಸೌರಫಲಕ ಅಳವಡಿಸಿಕೊಳ್ಳಲು ರೈತರಿಗೆ ಆರ್ಥಿಕ, ಪರಿಕರಗಳ ಸಹಾಯ ಸಿಗಲಿದ್ದು, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಮಾಡಿಕೊಳ್ಳಬಹುದಾಗಿದೆ. ಹೊಸದಾಗಿ ಬಾವಿ/ಕೊಳವೆ ಬಾವಿ ಕೊರೆದುಉ ಪಂಪ್ ಸೆಟ್ ಅಳವಡಿಸಿರುವ ಅರ್ಹ ರೈತರಿಗೆ ವಿತರಿಸಲಿದೆ.