ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಧಿಕಾರವು (KEA) ಸಿಹಿ ಸುದ್ದಿ ನೀಡಿದ್ದು, ಮಾಸ್ಟರ್ ಆಫ್ ಆರ್ಕಿಟೆಕ್ಚರ್ ಗೆ ಪ್ರವೇಶ ಪಡೆಯಲು, ಯಾವುದೇ ಪ್ರತ್ಯೇಕವಾಗಿ ಪರೀಕ್ಷೆ ಇಲ್ಲ. ರಾಷ್ಟ್ರಮಟ್ಟದಲ್ಲಿ ನಡೆಸುವ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಸ್ನಾತಕೋತರ ಆರ್ಕಿಟೆಕ್ಚರ್ ಪದವಿಗೆ ಪ್ರವೇಶ ಒಡೆಯಬಹುದು ಎಂದು ತಿಳಿಸಿದೆ.
ಹೌದು ಇದುವರೆಗೂ ಪ್ರಾಧಿಕಾ ರವೇ ಪ್ರವೇಶ ಪರೀಕ್ಷೆ (PG CET) ಮಾಡಿ, ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಿಂದ ನಿಯಮ ಬದಲಿಸಿದ್ದು, ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದುಕೊಂಡು, ಇಲ್ಲಿನ ಸೀಟುಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಾಧಿಕಾರ ಯಾವುದೇ ಪ್ರವೇಶ ಪರೀಕ್ಷೆ ನಡೆಸು ವುದಿಲ್ಲ. ಹೀಗಾಗಿ ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದು ಕೊಳ್ಳಲು ಕೋರಲಾಗಿದೆ ಎಂದು ಅವರು ವಿವರಿಸಿದ್ದಾರೆ. ಕಳೆದ ವರ್ಷ ಈ ಕೋರ್ಸ್ ನಲ್ಲಿ 136 ಸೀಟು ಲಭ್ಯ ಇದ್ದವು. ಅವುಗಳಿಗಾಗಿ 127 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರವೇಶ ಪಡೆದಿದ್ದು ಕೇವಲ 28 ಮಂದಿ ಎಂದು ಅವರು ವಿವರಿಸಿದ್ದಾರೆ.