ಹಾವೇರಿ : ಇತ್ತೀಚಿಗೆ ಹಾಲು ಉತ್ಪಾದಕರಿಂದ ಹಾಲು ಪಡೆಯುವ ಹಾವೇರಿಯ ಹಾವೆಮುಲ್ 3.50 ರೂ. ಅನ್ನು ಇಳಿಕೆ ಮಾಡಿತ್ತು. ಇದಕ್ಕೆ ಹಾಲು ಉತ್ಪಾದಕರು ವಿರೋಧಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಇದೀಗ ಹಾವೆಮುಲ್ ಪ್ರತಿ ಲೀಟರ್ ಗೆ 2.50 ಏರಿಕೆ ಮಾಡಲು ನಿರ್ಧರಿಸಿದೆ.
ಹೌದು ಹಸುವಿನ ಹಾಲಿಗೆ 33 ರೂ. ಹಾಗು ಎಮ್ಮೆಯ ಹಾಲಿಗೆ 45.50 ಗೆ ಹೆಚ್ಚಳಕ್ಕೆ ನಿರ್ಧಾರ ಮಾಡಿದೆ. ಕಳೆದ ಮಾರ್ಚ್ 27 ರಂದು ಲೀಟರ್ ಗೆ 3.50 ಕಡಿತಗೊಳಿಸಲಾಗಿತ್ತು. ಈ ವೇಳೆ ಹಾವೆಮುಲ್ ವಿರುದ್ಧ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಹಾವೆಮುಲ್ ಅಧ್ಯಕ್ಷ ಮತ್ತು ನಿರ್ದೇಶಕರ ಜೊತೆ ಸಭೆ ನಡೆಸಿ ಸಚಿವ ಶಿವಾನಂದ್ ಪಾಟೀಲ್ ಸೂಚನೆ ನೀಡಿದ್ದರು. ಸಚಿವರ ಸಲಹೆ ಹಿನ್ನೆಲೆಯಲ್ಲಿ ಇದೀಗ 2.50 ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.