ಬೆಂಗಳೂರು: ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್ ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಮರು ಪಾವತಿಸಲು ಸರ್ಕಾರ ಆದೇಶಿಸಿದೆ. ಈ ಮೂಲಕ ಕಾಫಿ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ರಾಜ್ಯ ಸರ್ಕಾರ ನಡವಳಿಯನ್ನು ಹೊರಡಿಸಿದ್ದು, ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್ ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷರತ್ತು, ನಿಬಂಧನಗಳಿಗೊಳಪಟ್ಟು ಫಲಾನುಭವಿಗಳಿಗೆ ಡಿಬಿಟಿ ಯೋಜನೆಯ ವ್ಯಸ್ಥೆಯಡಿ ಸರ್ಕಾರದಿಂದ ಮರುಪಾವತಿಸಲು ಆದೇಶಿಸಿದೆ.
BIG NEWS : ಆರೋಗ್ಯ ಇಲಾಖೆಯ ‘ಗುತ್ತಿಗೆ ನೌಕರ’ರಿಗೆ ಗುಡ್ ನ್ಯೂಸ್: ‘ವಾರದ ರಜೆ’ ಮಂಜೂರು
ದಿನಾಂಕ 01-07-2022ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಗ್ರಾಹಕರುಗಳಿಗೆ ಮರುಪಾವತಿಸಲಾಗುವುದು. ಈ ಪ್ರವರ್ಗದ ಫಲಾನುಭವಿ, ಗ್ರಾಹಕರು ಸಂಬಂಧಪಟ್ಟ ಇಲಾಖೆಯಿಂದ ದೃಢೀಕರಣ ಪ್ರತ್ರವನ್ನು ಒದಗಿಸಬೇಕು.
ಸಣ್ಣ, ಮಧ್ಯಮ ಕಾಫಿ ಬೆಳೆಗಾರರು ಈ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಇತರೆ ಮಾಹಿತಿಗಳ ದೃಢೀಕೃತ ದಾಖಲೆಯನ್ನು ಒದಗಿಸುವುದು ಕಡ್ಡಾಯವಾಗಿದೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ವಿದ್ಯುತ್ ಬಿಲ್ಲನ್ನು ಸಿದ್ದಪಡಿಸಿ ನೀಡಲಾಗುವುದು ಎಂದು ತಿಳಿಸಿದೆ.
BIGG NEWS : ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕ ಬಿಡುಗಡೆ : 3 ನೇ ವರ್ಷವೂ ಕರ್ನಾಟಕ ನಂ.1