ನವದೆಹಲಿ : ದೇಶದ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಜನವರಿ ಮೊದಲ ವಾರದಲ್ಲಿಯೇ 8 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದೆ. ಇದುವರೆಗೆ 12 ಕಂತುಗಳ ಹಣವನ್ನ ಕೇಂದ್ರ ಸರ್ಕಾರ ವರ್ಗಾಯಿಸಿದೆ.
ಕೋಟಿಗಟ್ಟಲೆ ರೈತರು.!
ಇಲ್ಲಿಯವರೆಗೆ 8.42 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಲಾಭ ಪಡೆದಿದ್ದಾರೆ. ಪ್ರಸ್ತುತ, ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಸರ್ಕಾರದ ಈ ಯೋಜನೆಯ ಪ್ರಯೋಜನವನ್ನ ಪಡೆಯುತ್ತಿದ್ದಾರೆ.
ಕಳೆದ ವರ್ಷ ಜನವರಿ 1ರಂದು ಹಣ ವರ್ಗಾವಣೆ.!
ಹಿಂದಿನ ಮಾದರಿಯನ್ನ ನೋಡಿದಾಗ, ಜನವರಿ 1, 2022 ರಂದು, ಪ್ರಧಾನಿ ಮೋದಿಯವರು ಮಧ್ಯಾಹ್ನ 12:30 ಕ್ಕೆ ರೈತರ ಖಾತೆಗೆ ಹಣವನ್ನು ವರ್ಗಾಯಿಸಿದರು. ಕಳೆದ ವರ್ಷ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಇದರ ಅಡಿಯಲ್ಲಿ ಸುಮಾರು 10 ಕೋಟಿ ರೈತರಿಗೆ 20,000 ಕೋಟಿ ರೂಪಾಯಿ ನೀಡಿದರು.
ನಿಮ್ಮ ಕಂತಿನ ಸ್ಥಿತಿಯನ್ನು ಪರಿಶೀಲಿಸಿ.!
>> ನೀವು ಮೊದಲು ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಹೋಗಬೇಕು .
>> ಇದರ ನಂತರ ಫಾರ್ಮರ್ ಕಾರ್ನರ್ ಕ್ಲಿಕ್ ಮಾಡಿ.
>> ಈಗ ನೀವು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಲ್ಲಿ ಪರಿಶೀಲಿಸಬಹುದು.
>> ನೀವು ಇ-ಕೆವೈಸಿ ಮತ್ತು ಭೂಮಿಯ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಬೇಕು.
>> ಸ್ಥಿತಿಯ ಪಕ್ಕದಲ್ಲಿ ಹೌದು ಎಂದು ಬರೆದರೆ, 13 ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ
ನಂತರ ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೇ, pmkisan-ict@gov.in ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನ ನೀವು ಹೇಳಬಹುದು.
BREAKING NEWS : ‘ಸಿದ್ದೇಶ್ವರ ಶ್ರೀ’ಗಳ ಆರೋಗ್ಯದಲ್ಲಿ ಏರುಪೇರು : ಆಶ್ರಮದಲ್ಲಿ ಪೊಲೀಸರು ಅಲರ್ಟ್ , ಬಿಗಿ ಭದ್ರತೆ
ಜ.9 ಮತ್ತು 10ರಂದು ನಡೆಯಬೇಕಿದ್ದ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಮುಂದೂಡಿಕೆ
BIGG UPDATE : ‘ಸಿದ್ದೇಶ್ವರ ಸ್ವಾಮೀಜಿ’ ಆರೋಗ್ಯ ಸ್ಥಿತಿ ಗಂಭೀರ : ಆಶ್ರಮದ ಮುಂದೆ ಸಾವಿರಾರು ಭಕ್ತರ ಜಮಾವಣೆ