ಬೆಂಗಳೂರು : ಎಲ್ಲಾ ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶಗಳನ್ನು ಒಳಗೊಂಡ ಪದಾರ್ಥಗಳಿರುವ ‘ಇಂದಿರಾ ಆಹಾರ ಕಿಟ್’ಗಳನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ ಹಂಚಿಕೆ ಮಾಡುತ್ತಿರುವ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ ಈ ಕಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.
ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಈ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಆಹಾರ ಕಿಟ್ ನಲ್ಲಿ ಏನೇನು ಸಿಗಲಿದೆ?
ಸಕ್ಕರೆ 1 ಕಿಲೋ
ಕಾಫಿ ಪುಡಿ 50 ಗ್ರಾಂ
ಉಪ್ಪು 1 ಕೆಜಿ
ಅಡುಗೆ ಎಣ್ಣೆ 1 ಲೀಟರ್
ಗೋಧಿ 2 ಕಿಲೋ
ಚಹಾ ಪುಡಿ 100 ಗ್ರಾಂ
ಹೊಟ್ಟು ಭತ್ತ 1 ಕೆ.ಜಿ