ನವದೆಹಲಿ : ಚಿನ್ನದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕಳೆದೊಂದು ವಾರದಿಂದ ಏರಿಕೆಯಾಗುತ್ತಿದ್ದ ಚಿನ್ನದ ದರವನ್ನ ಇಳಿಕೆಯಾಗಿದೆ. ಅದ್ರಂತೆ, ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಚಿನ್ನ ಪ್ರಿಯರಿಗೆ ಕೊಂಚ ರಿಲೀಫ್ ಸಿಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದರೂ, ದೇಶಿಯವಾಗಿ ಇದರ ಪರಿಣಾಮ ಕಂಡುಬರದಿರುವುದು ಗಮನಾರ್ಹ. ಆದರೆ ಹಬ್ಬದ ಸೀಸನ್ ಬರುತ್ತಿದ್ದಂತೆಯೇ ಮತ್ತೊಮ್ಮೆ ಬಂಗಾರದ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಚಿನ್ನದ ದರ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 600 ರೂಪಾಯಿ ಕಡಿಮೆಯಾಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 550 ಇಳಿಕೆಯಾಗಿದೆ. ಈ ಕ್ರಮದಲ್ಲಿ ಜುಲೈ 10ರಂದು ಮಾರುಕಟ್ಟೆಯಲ್ಲಿ ಬೆಳ್ಳಿ ಮತ್ತು ಬೆಳ್ಳಿಯ ಬೆಲೆಗಳನ್ನ ತಿಳಿಯೋಣ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,000 ರೂಪಾಯಿ ಇದ್ದು, ಅಪರಂಜಿ 10 ಗ್ರಾಂಗೆ 48,000 ರೂಪಾಯಿ ಆಗಿದೆ. ಮತ್ತೊಂದೆಡೆ, ದೆಹಲಿ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ದರ 67 ಸಾವಿರದ 250 ಇದೆ. ಇನ್ನು 24 ಕ್ಯಾರೆಟ್ ಚಿನ್ನದ ದರ 73 ಸಾವಿರದ 350 ಇದೆ.
ಬೆಳ್ಳಿ ಬೆಲೆ.!
ಬೆಳ್ಳಿ ಕೂಡ ಚಿನ್ನದ ಹಾದಿಯಲ್ಲಿ ಸಾಗುತ್ತಿದೆ. ಕಳೆದೊಂದು ವಾರದಿಂದ ಏರುಗತಿಯಲ್ಲಿದ್ದ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ 2 ದಿನಗಳಲ್ಲಿ 1000 ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಒಂದು ಕಿಲೋ ಬೆಳ್ಳಿ 99,000 ಆಗಿದೆ.
BREAKING : ಅಬಕಾರಿ ನೀತಿ ಹಗರಣ : ‘ED’ ಹೊಸ ಚಾರ್ಜ್ ಶೀಟ್, ‘ಕಿಂಗ್ ಪಿನ್’ ಅರವಿಂದ್ ಕೇಜ್ರಿವಾಲ್ 37ನೇ ಆರೋಪಿ
BIG NEWS : ಮಹಿಳೆ ಅಪಹರಣ ಕೇಸ್ : ಭವಾನಿ ರೇವಣ್ಣಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
BREAKING : ಸಲಿಂಗ ವಿವಾಹ ; ವಿಚಾರಣೆಯಿಂದ ಹಿಂದೆ ಸರಿದ ‘ನ್ಯಾಯಮೂರ್ತಿ ಸಂಜೀವ್ ಖನ್ನಾ’