ಬೆಂಗಳೂರು: ಮಹಿಳಾ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ವಿವಿಧ ಪದವಿ, ಸ್ನಾತಕೋತ್ತರ ಪದವಿ ಪ್ರವೇಶದ ಶುಲ್ಕದಲ್ಲಿ ಶೇ.15ರಷ್ಟು ವಿನಾಯಿತಿ ನೀಡಿದೆ.
ಈ ಬಗ್ಗೆ ಕೆ ಎಸ್ ಒ ಯುನ ಪ್ರಾದೇಶಿಕ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದು, ವಿವಿಧ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವಂತ ಮಹಿಳಾ ಅಭ್ಯರ್ಥಿಗಳಿಗೆ ಶೇ.15ರಷ್ಟು ಬೋಧನಾ ಶುಲ್ಕದಲ್ಲಿ ವಿನಾಯ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ದ್ವಿತೀಯ ಬಿಎಸ್ಸಿ, ತೃತೀಯ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ ಹಾಗೂ ಅಂತಿಮ ಸ್ನಾತಕೋತ್ತರ ಪದವಿಗಳಾದಂತ ಎಂ.ಎ, ಎಂಸಿಜೆ, ಎಂಕಾಂ, ಎಂಬಿಎ, ಎಂಎಸ್ಸಿ ಸೇರಿದಂತೆ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ದಂಡ ಶುಲ್ಕವಿಲ್ಲದೇ ಜನವರಿ 15ರೊಳಗಾಗಿ ಪ್ರವೇಶ ಪಡೆಯುವಂತೆ ಕೋರಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ದೂರವಾಣಿ ಸಂಖ್ಯೆ 080-23448811ಗೆ ಕರೆ ಮಾಡಿ, ಮಾಹಿತಿ ಪಡೆಯಬಹುದಾಗಿದೆ.
ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು: ಯಾಕೆ ಅಂತ ಈ ಸುದ್ದಿ ಓದಿ
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಮ್ಮೆಗೆ ಟಿಕೆಟ್ ಖರೀದಿಗೆ ಅವಕಾಶ