ಹಾವೇರಿ: ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ 33 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ಪ್ರತಿ ಹಳ್ಳಿಗಳಲ್ಲಿಯೇ ಒಂದು ಸಂಘಕ್ಕೆ 1.5 ಲಕ್ಷ ರೂ. ಸಾಲ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಣಿಬೆನ್ನೂರಿನಲ್ಲಿ ಮಾತನಾಡಿದ ಅವರು, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆಯ ಜೊತೆಗೆ ಸ್ತ್ರೀಯರ ಆರ್ಥಿಕ ಸ್ವಾವಲಂಬನೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿನ ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೂ ರೈತ ನಿಧಿಯೋಜನೆಯಂತೆ ವಿದ್ಯಾನಿಧಿ ಜಾರಿ ಮಾಡಲಾಗುವುದು.
ಕುಶಲ ಕಾರ್ಮಿಕರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಜೊತೆಗೆ ಕುರಿಗಾರರಿಗೆ ವಿಶೇಷ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಈ ಯೋಜನೆಯಲ್ಲಿ ಪ್ರತಿ ಸಂಘಕ್ಕೆ 20 ಕುರಿ, 1 ಟಗರು ನೀಡಲಾಗುವುದು ಎಂದರು.