Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇತಿಹಾಸ ಸೃಷ್ಟಿಸಿದ ನರೇಂದ್ರ ಮೋದಿ: ಪವನ್ ಕುಮಾರ್ ಚಾಮ್ಲಿಂಗ್ ದಾಖಲೆ ಮುರಿದು ಅತಿ ಹೆಚ್ಚು ಕಾಲ ಸರ್ಕಾರ ಮುನ್ನಡೆಸಿದ ಭಾರತದ ನಾಯಕ!

22/03/2026 12:18 PM

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM

​’ಕಾಂತಾರ’ ವಿವಾದದ ಬಳಿಕ ರಣವೀರ್ ಸಿಂಗ್ ಬೆನ್ನುತಟ್ಟಿದ ರಿಷಬ್ ಶೆಟ್ಟಿ: ‘ಧುರಂಧರ್ 2’ ಬಗ್ಗೆ ಹೇಳಿದ್ದೇನು?

22/03/2026 12:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : `ಶಕ್ತಿ ಯೋಜನೆಯಡಿ’ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ‘ಆಧಾರ್ ಕಾರ್ಡ್’ ಫೋಟೋ ಇದ್ರೆ ಸಾಕು.!
KARNATAKA

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : `ಶಕ್ತಿ ಯೋಜನೆಯಡಿ’ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ‘ಆಧಾರ್ ಕಾರ್ಡ್’ ಫೋಟೋ ಇದ್ರೆ ಸಾಕು.!

By kannadanewsnow5705/09/2025 3:24 PM

ಆಧಾರ್ ಕಾರ್ಡ್ನ ಭೌತಿಕ ಪ್ರತಿಯನ್ನು ಕೊಂಡೊಯ್ಯಬೇಕಂತಿಲ್ಲ. ಮಹಿಳೆಯರ ಮೊಬೈಲ್ ಫೋನ್ ನಲ್ಲಿ ಆಧಾರ್ನ ಡಿಜಿಟಲ್ ನಕಲು ಅಥವಾ ಆಧಾರ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿದ ಆಧಾರ್ ಪಿಡಿಎಫ್ನ್ನು ಕಂಡಕ್ಟರ್ಗೆ ತೋರಿಸಬಹುದು. ಇದು ಮಹಿಳೆಯರಿಗೆ ಮತ್ತಷ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶದಿಂದಾಗಿ ಹಿಂದೆ ದ್ವಿಚಕ್ರ ವಾಹನ ಅಥವಾ ಇತರೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಅನೇಕ ಮಹಿಳೆಯರು ಈಗ ಬಸ್ಸುಗಳನ್ನು ಆಶ್ರಯಿಸಿದ್ದಾರೆ. ಇದರ ಜೊತೆಗೆ, ತಮ್ಮ ಕುಟುಂಬದ ಮಹಿಳೆಯರೊಂದಿಗೆ ತೆರಳುವ ಪುರುಷರೂ ಸಹ ಬಸ್ ಪ್ರಯಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದು ಒಟ್ಟಾರೆ ಬಸ್ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿದ್ದು, ಪುರುಷರಿಂದ ಟಿಕೆಟ್ ದರದಿಂದ ಆದಾಯ ಸಂಗ್ರಹವಾಗಿ ಸರ್ಕಾರದ ಬೊಕ್ಕಸಕ್ಕೆ ಲಾಭ ತಂದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಮತ್ತು ಯುವ ನಿಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಗಮನಿಸಿ, ಯಾವುದೇ ಅರ್ಹ ಪಲಾನುಭವಿ ಸರಕಾರದ ಯೋಜನೆಗಳಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳ ಸದಸ್ಯ ಸುಧೀರ ಎಸ್. ಬೋಳಾರ ಅವರು ಮಾನತಾಡಿ, ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ನ್ನು ತಮ್ಮ ಮೊಬೈಲ್ ಫೆÇೀನ್ನಲ್ಲಿ ತೋರಿಸುವುದು ಪರಿಗಣಿಸಬೇಕು ಎಂದು ಹೇಳಿದರು. ಕೆಲವು ಮಹಿಳೆಯರು ಆಧಾರ್ ಕಾರ್ಡ್ ಪ್ರತಿಯನ್ನು ತಂದಿರುವುದಿಲ್ಲ ಮತ್ತು ಹಣವನ್ನು ಇಟ್ಟು ಕೊಂಡಿರುವುದಿಲ್ಲ ಆದ್ದರಿಂದ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ತೊಂದರೆಯಾಗುತ್ತಿದೆ ಎಂದುರು.

ಸದಸ್ಯರಾದ ಅರವಿಂದ ಏಗನಗೌಡರ ಮಾತನಾಡಿ, ತಡಕೋಡ ಗ್ರಾಮದ ಫಲಾನುಭವಿಗಳು ಪಡಿತರ ಪಡೆಯಲು ಹತ್ತಿರದ ಗ್ರಾಮಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ವೃದ್ಧರು, ಮಹಿಳೆಯರು ಮತ್ತು ಅಶಕ್ತರಿಗೆ ತೀವ್ರ ತೊಂದರೆಯಾಗುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳ ಪಡಿತರ ಚೀಟಿಗಳಿವೆ. ಗ್ರಾಮದಲ್ಲಿಯೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ವಸ್ತಿ ಉಳಿಯುವ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿಕೊಡಬೇಕೆಂಬುದು ಸಾರಿಗೆ ಇಲಾಖೆ ಅಧಿಕಾರಿಗಳು ಬೇಡಿಕೆ ಇದೆ. ಅನೇಕ ಮಾರ್ಗಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ರಾತ್ರಿ ವೇಳೆ ಗ್ರಾಮಗಳಲ್ಲಿ ಉಳಿಯಬೇಕಾಗುತ್ತದೆ. ಅವರಿಗೆ ಸೂಕ್ತ ವಸತಿ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳು ವಿನಂತಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಭುವನೇಶ ಪಾಟೀಲ ಅವರು ಮಾತನಾಡಿ, ಗ್ರಾಮಗಳಲ್ಲಿರುವ ಪಂಚಾಯಿತಿಗಳಲ್ಲಿ ವ್ಯವಸ್ಥೆಯನ್ನು ರೂಪಿಸಿಕೊಡುವುದಾಗಿ ತಿಳಿಸಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಉತ್ತಮವಾಗಿ ಅನುಷ್ಠಾನಗೊಳಿಸುತ್ತಿವೆ. ಗ್ರಾಮೀಣ ಮಟ್ಟದಲ್ಲಿ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ಸುಧೀರ. ಎಸ್. ಬೋಳಾರ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಶಾಂತಪ್ಪ ಎಸ್. ಅಕ್ಕಿ ಅವರು ವೇದಿಕೆಯಲ್ಲಿದ್ದರು.ಜಿಲ್ಲಾ ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ವಿನಾಯಕ ಕುರುಬರ, ಬಸಪ್ಪ ಮಹಾಬಳೇಶ್ವರ ಬಾವಕಾರ, ಶಿವಾನಂದ ಭೂಮಣ್ಣವರ, ಸಾವಿತ್ರಿ ಬಸವರಾಜ ಭಗವತಿ, ಗೀತಾ ಥಾವಂಶಿ ಹಾಗೂ ಇತರ ಸದಸ್ಯರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Good news for women in the state: A photo of an 'Aadhaar card' is enough to travel free on buses under the 'Shakti Yojana'!
Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM1 Min Read

SHOCKING : ಸ್ವಿಮ್ಮಿಂಗ್ ಮಾಡುವಾಗಲೇ ಘೋರ ದುರಂತ : ಬೆಳಗಾವಿಲಿ ‘ಹೃದಯಾಘಾತದಿಂದ’ ಸೇನಾಧಿಕಾರಿ ಸಾವು!

22/03/2026 11:57 AM1 Min Read

BREAKING : ಬಾಗಲಕೋಟೆಗೆ ಉಮೇಶ್ ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 11:39 AM1 Min Read
Recent News

ಇತಿಹಾಸ ಸೃಷ್ಟಿಸಿದ ನರೇಂದ್ರ ಮೋದಿ: ಪವನ್ ಕುಮಾರ್ ಚಾಮ್ಲಿಂಗ್ ದಾಖಲೆ ಮುರಿದು ಅತಿ ಹೆಚ್ಚು ಕಾಲ ಸರ್ಕಾರ ಮುನ್ನಡೆಸಿದ ಭಾರತದ ನಾಯಕ!

22/03/2026 12:18 PM

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM

​’ಕಾಂತಾರ’ ವಿವಾದದ ಬಳಿಕ ರಣವೀರ್ ಸಿಂಗ್ ಬೆನ್ನುತಟ್ಟಿದ ರಿಷಬ್ ಶೆಟ್ಟಿ: ‘ಧುರಂಧರ್ 2’ ಬಗ್ಗೆ ಹೇಳಿದ್ದೇನು?

22/03/2026 12:02 PM

SHOCKING : ಸ್ವಿಮ್ಮಿಂಗ್ ಮಾಡುವಾಗಲೇ ಘೋರ ದುರಂತ : ಬೆಳಗಾವಿಲಿ ‘ಹೃದಯಾಘಾತದಿಂದ’ ಸೇನಾಧಿಕಾರಿ ಸಾವು!

22/03/2026 11:57 AM
State News
KARNATAKA

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

By kannadanewsnow0522/03/2026 12:09 PM KARNATAKA 1 Min Read

ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಜಟಾಪಟಿ ನಡೆಯುತ್ತಿದ್ದು,…

SHOCKING : ಸ್ವಿಮ್ಮಿಂಗ್ ಮಾಡುವಾಗಲೇ ಘೋರ ದುರಂತ : ಬೆಳಗಾವಿಲಿ ‘ಹೃದಯಾಘಾತದಿಂದ’ ಸೇನಾಧಿಕಾರಿ ಸಾವು!

22/03/2026 11:57 AM

BREAKING : ಬಾಗಲಕೋಟೆಗೆ ಉಮೇಶ್ ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 11:39 AM

ಬೆಂಗಳೂರಲ್ಲಿ ಸಿಲಿಂಡರ್ ಕೊರತೆಯಿಂದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು!

22/03/2026 11:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.