Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಲಬುರಗಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಾರ್ & ರೆಸ್ಟೋರೆಂಟ್ : ತಪ್ಪಿದ ಭಾರಿ ಅನಾಹುತ!

BREAKING: ಸಾಗರದಲ್ಲಿ ಅಕ್ರಮ ಜಂಬಿಟ್ಟಿಗೆ ಕ್ವಾರಿ, ಮರಳು ಅಡ್ಡೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ದಾಳಿ: ಲಾರಿಗಳು ಜಪ್ತಿ!

BREAKING : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರಿಗೆ ಗುಡ್ ನ್ಯೂಸ್ : `ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ
KARNATAKA

ಮಹಿಳೆಯರಿಗೆ ಗುಡ್ ನ್ಯೂಸ್ : `ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

By kannadanewsnow57

ಕೇಂದ್ರ ಸರ್ಕಾರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಇಲಾಖೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಕೊಪ್ಪಳ ಜಿಲ್ಲೆಯ 14 ಗ್ಯಾಸ್ ಏಜೆನ್ಸಿಗಳಿಂದ ಉಜ್ವಲ-3 ಅಡಿಯಲ್ಲಿ ಹೊಸ ಗ್ಯಾಸ್ ಸಂಪರ್ಕ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳು ಏಜೆನ್ಸಿಗಳಿಗೆ ನೇರವಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ.

ಅರ್ಹತೆಗಳು: ಈಗಾಗಲೇ ಗ್ಯಾಸ್ ಕನೆಕ್ಷನ್ ಹೊಂದಿರದ ವಯಸ್ಕ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಪ್ರತಿ ತಿಂಗಳಿಗೆ 10,000 ಆದಾಯ ಹೊಂದಿರಬಾರದು. ಕೃಷಿಯೇತರ ಚಟುವಟಿಕೆ ನಡೆಸಲು ವ್ಯಾಪಾರ ಅಥವಾ ವ್ಯವಹಾರ ಮಾಡುವ ಎಂಟರ್‌ಪ್ರೆöÊಸಸ್, ಸರ್ಕಾರದಲ್ಲಿ ನೋಂದಣಿಯಾಗಿರಬಾರದು. 2.5 ಎಕರೆ ನೀರಾವರಿ ಹಾಗೂ 7.5 ಎಕರೆ 1 ಬೆಳೆ ಬೆಳೆಯುವ ಭೂಮಿ ಹೊಂದಿರಬಾರದು. ಮನೆಯ ಸದಸ್ಯರು 3 ಮತ್ತು 4 ಚಕ್ರದ ಕೃಷಿ ವಾಹನ, ಟ್ರಾಕ್ಟರ್, 3 ಅಥವಾ 4 ಚಕ್ರದ ಮೀನುಗಾರಿಕೆ ದೋಣಿ ಹೊಂದಿರಬಾರದು. 5 ಎಕರೆ ಅದಕ್ಕಿಂತ ಹೆಚ್ಚು 2 ಬೆಳೆ ಬೆಳೆಯುವ ಕೃಷಿ ಜಮೀನು ಹೊಂದಿರಬಾರದು. “ಕಿಸಾನ್ ಕ್ರೆಡಿಟ್ ಕಾರ್ಡ್” ನಲ್ಲಿ 50,000 ಕ್ಕಿಂತ ಹೆಚ್ಚು ಸಾಲ ಹೊಂದಿರಬಾರದು. 30 ಚದರ ಅಡಿ ಸ್ಥಳದ ಮನೆ ಹೊಂದಿರಬಾರದು (ಸರ್ಕಾರದ ಯಾವುದೇ ಯೋಜನೆಯಲ್ಲಿ ಸೈಟ್ ಪಡೆದಿರಬಾರದು). ಸರ್ಕಾರಿ ನೌಕರ ಸದಸ್ಯರನ್ನು ಹೊಂದಿದ್ದಲ್ಲಿ ಆ ಕುಟುಂಬ ಅರ್ಹರಲ್ಲ. ಕುಟುಂಬದಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರುವವರು ಸಹ ಅರ್ಹರಲ್ಲ.

ಕೆ.ವೈ.ಸಿ ಅರ್ಜಿ, ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಘೋಷಣಾ ಪ್ರಮಾಣ ಪತ್ರ, ಈ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲೆಯಲ್ಲಿ ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಅರ್ಹ ಮಹಿಳಾ ಫಲಾನುಭವಿಗಳು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಜ್ವಲ್ ಸಮಿತಿ (ಡಿವಿಸಿ) ಅಧ್ಯಕ್ಷರಾದ ಡಾ. ಸುರೇಶ ಬಿ. ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ಬಿಪಿಎಲ್ ಕಾರ್ಡ್

ಆಧಾರ್ ಕಾರ್ಡ್

ವಯಸ್ಸಿನ ಪ್ರಮಾಣಪತ್ರ

ಮೊಬೈಲ್ ಸಂಖ್ಯೆ

ಪಾಸ್‌ಪೋರ್ಟ್ ಗಾತ್ರದ ಫೋಟೋ

ಬಿಪಿಎಲ್ ಪಟ್ಟಿಯಲ್ಲಿ ಹೆಸರಿನ ಮುದ್ರಣ

ಬ್ಯಾಂಕ್ ಪಾಸ್‌ಬುಕ್‌ನ ಫೋಟೋ ಪ್ರತಿ

ಪಡಿತರ ಚೀಟಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭವನ್ನು ಮಹಿಳೆಯರು ಮಾತ್ರ ಪಡೆಯಬಹುದು. ಪುರುಷರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ನೀವು ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ, ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

Good news for women: Applications invited to get new gas connections under the 'Pradhan Mantri Ujjwala Yojana'
Share. Facebook Twitter LinkedIn WhatsApp Email

Related Posts

ಕಲಬುರಗಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಾರ್ & ರೆಸ್ಟೋರೆಂಟ್ : ತಪ್ಪಿದ ಭಾರಿ ಅನಾಹುತ!

1 Min Read

BREAKING: ಸಾಗರದಲ್ಲಿ ಅಕ್ರಮ ಜಂಬಿಟ್ಟಿಗೆ ಕ್ವಾರಿ, ಮರಳು ಅಡ್ಡೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ದಾಳಿ: ಲಾರಿಗಳು ಜಪ್ತಿ!

2 Mins Read

BREAKING : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

3 Mins Read
Recent News

ಕಲಬುರಗಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಾರ್ & ರೆಸ್ಟೋರೆಂಟ್ : ತಪ್ಪಿದ ಭಾರಿ ಅನಾಹುತ!

BREAKING: ಸಾಗರದಲ್ಲಿ ಅಕ್ರಮ ಜಂಬಿಟ್ಟಿಗೆ ಕ್ವಾರಿ, ಮರಳು ಅಡ್ಡೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ದಾಳಿ: ಲಾರಿಗಳು ಜಪ್ತಿ!

BREAKING : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರ ಸಚಿವರಿಗೆ ಎಂ.ಬಿ. ಪಾಟೀಲ ಪತ್ರ

State News
KARNATAKA

ಕಲಬುರಗಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಾರ್ & ರೆಸ್ಟೋರೆಂಟ್ : ತಪ್ಪಿದ ಭಾರಿ ಅನಾಹುತ!

By ಸುರೇಶ್‌ KARNATAKA 1 Min Read

ಕಲಬುರಗಿ: ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್‌ (ಎಸ್‌ವಿಪಿ) ವೃತ್ತದಲ್ಲಿರುವ ವಿಂಟೆಜ್ ದಿ ರೆಸ್ಟೋ ಬಾರ್ & ರೆಸ್ಟೋರೆಂಟ್ ಕಟ್ಟಡದಲ್ಲಿ ಗುರುವಾರ…

BREAKING: ಸಾಗರದಲ್ಲಿ ಅಕ್ರಮ ಜಂಬಿಟ್ಟಿಗೆ ಕ್ವಾರಿ, ಮರಳು ಅಡ್ಡೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ದಾಳಿ: ಲಾರಿಗಳು ಜಪ್ತಿ!

BREAKING : ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: 3.89 ಲಕ್ಷ ಅನರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಸ್ಥಗಿತ

ಉಡಾನ್ ಯೋಜನೆಯಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗ ಸೇರಿಸಿ: ಕೇಂದ್ರ ಸಚಿವರಿಗೆ ಎಂ.ಬಿ. ಪಾಟೀಲ ಪತ್ರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.