ಬೆಂಗಳೂರು : ರಾಜ್ಯ ಸರ್ಕಾರವು ನೇಕಾರ ಸಮುದಾಯದ ಏಳಿಗೆಗಾಗಿ ರೂ.5,000 ನೇರ ನಗದು ವರ್ಗಾವಣೆ, 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರಯವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಹಾಗೂ 10 ರಿಂದ 20 ಹೆಚ್.ಪಿ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.
ಸರ್ಕಾರವು ನೇಕಾರರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು ಕೈಗೊಂಡಿದೆ.
ನೇಕಾರ ಸಮ್ಮಾನ್ ಯೋಜನೆ
2023-24 ನೇ ಸಾಲಿನಲ್ಲಿ ಕೈಮಗ್ಗನೇಕಾರರು ಹಾಗೂ ವಿದ್ಯುತ್ ಮಗ್ಗ ನೇಕಾರರು/ಮಗ್ಗ ಪೂರ್ವ ಘಟಕಗಳ ಕೆಲಸಗಾರರು ಸೇರಿದಂತೆ ಒಟ್ಟು 141109 ಫಲಾನುಭವಿಗಳಿಗೆ ತಲಾ 5000 ರೂ. ನೇರ ನಗದು ವರ್ಗಾವಣೆ ಮಾಡುವ ಮೂಲಕ ಒಟ್ಟು ರೂ.70.55 ಕೋಟಿ ಆರ್ಥಿಕ ನೆರವು.
ವಿದ್ಯುತ್ ಮಗ್ಗ ಖರೀದಿ ಹಾಗೂ ಎಲೆಕ್ಟ್ರಾನಿಕ್ ಜಕಾರ್ಡ್ ಗಳ ಖರೀದಿ ಯೋಜನೆ
ವಿದ್ಯುತ್ ಮಗ್ಗ ಘಟಕಗಳ ಸ್ಥಾಪನೆಗೆ 94 ನೇಕಾರರಿಗೆ ರೂ.230 ಲಕ್ಷಗಳು ಹಾಗೂ ಉತ್ತಮ ವಿನ್ಯಾಸಗಳ ಅಳವಡಿಕೆಗೆ 128 ವಿದ್ಯುತ್ ಮಗ್ಗ ನೇಕಾರರಿಗೆ ಎಲೆಕ್ಟ್ರಾನಿಕ್ ಜಕಾರ್ಡ್ಗಳನ್ನು ಅಳವಡಿಸಲು ರೂ.352 ಲಕ್ಷಗಳ ಸಹಾಯಧನ ಬಿಡುಗಡೆ.
ವಿದ್ಯುತ್ ಮಗ್ಗ ನೇಕಾರರು/ಮಗ್ಗ ಪೂರ್ವ ಘಟಕಗಳ ಕೆಲಸಗಾರರಿಗೆ ಒಟ್ಟು 117,040 ಸ್ಮಾರ್ಟ್ ಕಾರ್ಡ್ ವಿತರಣೆ
SCSP/TSP SME ಜವಳಿ ಘಟಕ ಸ್ಥಾಪನೆ ಯೋಜನೆ
2023-24ನೇ ಸಾಲಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ಜವಳಿ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ಯಮಶೀಲರನ್ನು ಪ್ರೋತ್ಸಾಹಿಸಲು SCSP/TSP SME ಜವಳಿ ಘಟಕಗಳಿಗೆ ರೂ.35 ಕೋಟಿ ಸಹಾಯಧನ ಬಿಡುಗಡೆ ಹಾಗೂ ಉದ್ಯಮಶೀಲರನ್ನು ಪ್ರೋತ್ಸಾಹಿಸಲು ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಒಟ್ಟು 65 ಘಟಕಗಳ ಸ್ಥಾಪನೆಗೆ ಮಂಜೂರಾತಿ.
ವಿದ್ಯುತ್ ಸಹಾಯಧನ ಯೋಜನೆ
2023-24ನೇ ಸಾಲಿನಲ್ಲಿ 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ 29919 ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ರೂ.132 ಕೋಟಿ ರೂ. ವಾರ್ಷಿಕ ವೆಚ್ಚದಲ್ಲಿ ಉಚಿತ ವಿದ್ಯುತ್ ಸೌಲಭ್ಯ ಹಾಗೂ 10 ರಿಂದ 20 ಹೆಚ್.ಪಿ. ಹೊಂದಿರುವವರಿಗೆ ಪ್ರತಿ ಯೂನಿಟ್ಗೆ ರೂ.1.25 ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲು ಪ್ರಸ್ತಾವನೆ.
ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ
ನೇಕಾರರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 4457 ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ರೂ.2.23 ಕೋಟಿಗಳ ವಿದ್ಯಾರ್ಥಿವೇತನದ ಬಿಡುಗಡೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ 1000 ಎಕರೆ ಪ್ರದೇಶದಲ್ಲಿ PM-MITRA Park ಸ್ಥಾಪನೆ ಹಾಗೂ ಕೇಂದ್ರ, ರಾಜ್ಯ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ರೂ.1500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಸುಮಾರು ಒಂದು ಲಕ್ಷ ನೇರ ಉದ್ಯೋಗ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ
ಕೈಮಗ್ಗನೇಕಾರರಿಗೆ ರಿಬೇಟ್ನ್ನು ಶೇ.20 ರಿಂದ ಶೇ.40ಕ್ಕೆ ಹೆಚ್ಚಿಸಲು ಚಿಂತನೆ.
ಶಿಕ್ಷಣ ಇಲಾಖೆಯಿಂದ ಕೆ.ಹೆಚ್.ಡಿ.ಸಿ.ಗೆ ಪಾವತಿಸಲು ಬಾಕಿ ಇದ್ದ ರೂ.14.28
ಕೆ.ಹೆಚ್.ಡಿ.ಸಿ.ಯಲ್ಲಿ ನೋಂದಣಿಯಾಗಿರುವ ನೇಕಾರರಿಗೆ ವರ್ಷಪೂರ್ತಿ ಕಚ್ಚಾ ಸಾಮಗ್ರಿ ಮತ್ತು ಮಜೂರಿ ನೀಡಲು ಅನುಕೂಲವಾಗುವಂತೆ ನೇಕಾರರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ರೂ.12 ಕೋಟಿ ಹಣ ಪೂರೈಕೆ.
"ನೇಕಾರರ ಸಮೃದ್ಧ ಬದುಕಿಗೆ ಹೊಂಬೆಳಕು"
ನಾಡಿನ ನೇಕಾರ ಸಮುದಾಯದ ಏಳಿಗೆಗಾಗಿ ರೂ.5,000 ನೇರ ನಗದು ವರ್ಗಾವಣೆ, 10 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರಯವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಹಾಗೂ 10 ರಿಂದ 20 ಹೆಚ್.ಪಿ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ… pic.twitter.com/ux0CCOmJ42
— Siddaramaiah (@siddaramaiah) March 12, 2024