ಬೆಂಗಳೂರು: ಹೊಸ ವರ್ಷಕ್ಕೆ ನೇಕಾರರಿಗೆ ರಾಜ್ಯ ಸರ್ಕಾರದಿಂದ ಸುದ್ದಿ ಸಿಕ್ಕಿದೆ. 2 ಲಕ್ಷದ ತನಕ ಸಿಗಲಿದೆ ಬಡ್ಡಿ ರಹಿತ ಸಾಲ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಇಂದು ನೇಕಾರರ ಜೊತೆಗೆ ಸಭೆ ಬಳಿಕ ಮಾತನಾಡಿದ ಅವರು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಮಾಧ್ಯಮಗಳ ಜೊತೆಗೆ ತಿಳಿಸಿದರು. ಇದೇ ವೇಳೇ ಅವರು ಇಂದು ನಡೆದ ಸಭೆಯಲ್ಲಿ ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಇದಲ್ಲದೇ ಪವರ್ ಲೂಮ್ ನಲ್ಲಿ ಕೆಲಸಮಾಡುವ ನೌಕರರಿಗೆ ನೆರವು, ಸಂಘಟಿತ ಕಾರ್ಮಿಕರರಿಗೆ ರಾಜ್ಯ ಸರ್ಕಾರದಿಂದ ನೆರವು ನೀಡುವ ಬಗ್ಗೆ ಮುಂದಿನ ಬಜೆಟ್ನಲ್ಲಿ ಮಂಡನೆ ಮಂಡನೆ ಮಾಡಲಾಗುವುದು ಅಂತ ಅವರು ತಿಳಿಸಿದರು. ಇದೇ ವೇಳೇ ಅವರು ಮಾತನಾಡಿ ವಿದ್ಯಾನಿಧಿ ಯೋಜನೆಯನ್ನು ನೇಕಾರರ ಮಕ್ಕಳಿಗೆ ಕೂಡ ವಿಸ್ತರಣೆ ಮಾಡಲಾಗುವುದು ಅಂತ ಹೇಳಿದರು. ಇನ್ನೂ ನೇಕಾರರ ಉತ್ಪಾದಿತ ಬಟ್ಟೆಗಳನ್ನು ನೇರವಾಗಿ ಅವರಿಂದಲೇ ಮಾಡುವ ಬಗ್ಗೆ ಕೂಡ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಅಂತ ತಿಳಿಸಿದರು. 5 ಎಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್ ನೀಡಲು ನಿರ್ಧಾರ ಮಾಡಲಾಗಿದೆ.