ಬೆಂಗಳೂರು: ರಾಜ್ಯ ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುತ್ತಿರುವಂತ ಇ-ಶ್ರಮ್ ವಯೋಮಿತಿಯನ್ನು 70 ವರ್ಷಕ್ಕೆ ಏರಿಕೆಯ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾಹಿತಿ ಹಂಚಿಕೊಂಡಿದ್ದು, ಪತ್ರಿಕಾ ಏಜೆಂಟರು ಮತ್ತು ವಿತರಕರಿಗೆ ಇ-ಶ್ರಮ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ವಿಮಾ ಯೋಜನೆಯಡಿ ಪರಿಹಾರವನ್ನು ನೀಡಲಾಗುತ್ತಿದೆ ಎಂದರು.
ಇ-ಶ್ರಮ್ ಯೋಜನೆಗೆ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳೋದಕ್ಕೆ ಈ ಮೊದಲು 59 ವರ್ಷ ಕೊನೆಯಾಗಿತ್ತು. ಇದನ್ನು ಕಾರ್ಮಿಕರ ಹಿತದೃಷ್ಠಿಯಿಂದ 70 ವರ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.
ಈಗಾಗಲೇ ಪತ್ರಿಕಾ ವಿತರಕರು ಹಾಗೂ ಏಜೆಂಟರುಗಳನ್ನು ಇ-ಶ್ರಮ್ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಮುಂದುವರೆದು ಸಾರಿಗೆ ವ್ಯಾಪ್ತಿಗೆ ಬರುವ ಆಟೊ ಚಾಲಕರು, ಟೈರ್ ಅಂಗಡಿಯವರು, ಮೆಕ್ಯಾನಿಕ್, ಗ್ಯಾರೇಜ್ ಮಾಲೀಕರು ಸೇರಿದಂತೆ ಸುಮಾರು 40 ಲಕ್ಷ ಮಂದಿ ಅಸಂಘಟಿತ ಕಾರ್ಮಿಕರನ್ನು ‘ಇ-ಶ್ರಮ್’ ಯೋಜನೆಯಡಿ ತರಲು ಚಿಂತಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.