ದೆಹಲಿ : ಮುಂಬರುವ ದಿನಗಳಲ್ಲಿ ಟ್ಟಿಟರ್ ಬ್ಲೂ ಬಳಕೆದಾರರು ತಮ್ಮ ಪೋಸ್ಟ್ ಎಡಿಟ್ ಮಾಡಬಹುದಾಗಿದೆ. ಯಾವುದೇ ಅಂಶಗಳನ್ನು ಪೋಸ್ಟ್ ಮಾಡಿದ ಅರ್ಧ ಗಂಟೆ ಒಳಗಾಗಿ ತಮ್ಮ ಟ್ವೀಟ್ ಅನ್ನು ಎಡಿಟ್ ಮಾಡಬಹುದಾಗಿದೆ.
ಈ ವೇಳೆ ಎಡಿಟೆಡ್ ಟ್ವೀಟ್ ಎಂದು ಡಿಸ್ಪ್ಲೇ ಇಂಡಿಕೇಟರ್ ಮೂಡಲಿದೆ. ಈ ಹಿಂದಿನ ಪೋಸ್ಟ್ ಮತ್ತು ಎಡಿಟ್ ಮಾಡಲಾದ ಪೋಸ್ಟ್ ಅನ್ನು ನೋಡಬಹುದಾಗಿದೆ. ಈ ಸೌಲಭ್ಯವೂ ಪರೀಕ್ಷಾ ಹಂತದಲ್ಲಿದೆ ಎಂದು ಟ್ವಿಟರ್ ತಿಳಿಸಿದೆ.