ಬೆಂಗಳೂರು : ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಯಾಣಿಕರ ಒತ್ತಾಯದ ಮೆರೆಗೆ ಡಿ. 10ರಿಂದ ಜ. 29ರವರೆಗೆ (ರೈಲು ಸಂಖ್ಯೆ – 06563) ಬೆಂಗಳೂರು-ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚಾರ ಮಾಡಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಲಾಗಿದೆ
ಚುನಾವಣೆ ಗೆಲ್ಲಲು ಯಾವ ತಂತ್ರ ಬೇಡ , ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ : ಸಿದ್ದರಾಮಯ್ಯ
ಈ ರೈಲು ನಿಗದಿತ ಅವಧಿಯಲ್ಲಿ ಬರುವ ಪ್ರತಿ ಶನಿವಾರ ರಾತ್ರಿ 11.55 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದೆ. ಮರುದಿನ ಭಾನುವಾರ ಮಧ್ಯಾಹ್ನ ಸುಮಾರು 12.55ಕ್ಕೆ ಮುರುಡೇಶ್ವರ ತಲುಪುತ್ತದೆ. ಈ ರೀತಿ ಸಾಪ್ತಾಹಿಕ ರೈಲು ಜನವರಿ 29ರವರೆಗೆ ಒಟ್ಟು ಎಂಟು ಭಾರಿ ಸಂಚರಿಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಚುನಾವಣೆ ಗೆಲ್ಲಲು ಯಾವ ತಂತ್ರ ಬೇಡ , ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ : ಸಿದ್ದರಾಮಯ್ಯ
ಯಶವಂತಪುರದಿಂದ ಹೊರಡುವ ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಸಾಗಿ ಮುರುಡೇಶ್ವರ ತಲುಪಲಿದೆ. ಈ ಪ್ರತಿ ನಿಲ್ದಾಣಗಳಲ್ಲಿಯೂ ನಿಲುಗಡೆ ರೈಲಿಗೆ ಇರಲಿದೆ.
ಮರಳಿ ಮುರುಡೇಶ್ವರದಿಂದ ಇದೇ ಮಾರ್ಗವಾಗಿ ರೈಲು (ರೈಲು ಸಂಖ್ಯೆ -06564) ಡಿಸೆಂಬರ್ 11ರಿಂದ ಜನವರಿ 29ರವರೆಗೆ ಪ್ರತಿ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಡಲಿದೆ. ಮರುದಿನ ಸೋಮವಾರ ಬೆಳಗ್ಗೆ 4 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದೆ.
ಚುನಾವಣೆ ಗೆಲ್ಲಲು ಯಾವ ತಂತ್ರ ಬೇಡ , ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ : ಸಿದ್ದರಾಮಯ್ಯ
ಹವಾನಿಯಂತ್ರಿತ ಎರಡನೇ ದರ್ಜೆಯ ಒಂದು ಬೋಗಿ, ಹವಾನಿಯಂತ್ರಿತ ಮೂರನೇ ದರ್ಜೆಯ ಎರಡು ಬೋಗಿಗಳು, ಏಳು ಸ್ಲೀಪರ್ ಕ್ಲಾಸ್, ನಾಲ್ಕು ದ್ವಿತೀಯ ದರ್ಜೆ ಸಾಮಾನ್ಯ ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳನ್ನು ಈ ರೈಲು ಹೊಂದಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಗೆಲ್ಲಲು ಯಾವ ತಂತ್ರ ಬೇಡ , ನಾವು ಸುಮ್ಮನೆ ಇದ್ದರೂ ಗೆಲ್ಲುತ್ತೇವೆ : ಸಿದ್ದರಾಮಯ್ಯ