ಮೈಸೂರು: ನೈಋತ್ಯ ರೈಲ್ವೆಯು ಕೆಆರ್ಎಸ್ ರಸ್ತೆಯಲ್ಲಿರುವ ಮೈಸೂರು ರೈಲು ವಸ್ತು ಸಂಗ್ರಹಾಲಯವನ್ನು ದಿನಾಂಕ 26.9.2022 ರಿಂದ 5.10.2022 ರವರೆಗೆ ನಡೆಯುವ ದಸರಾ ಉತ್ಸವಗಳ ಸಮಯದಲ್ಲಿ ಪ್ರಕಾಶಮಾನ ದೀಪದ ವ್ಯವಸ್ಥೆಯೊಂದಿಗೆ ಬೆಳಗಿಸುವುದರ ಜೊತೆಗೆ ಕೆಲಸದ ಸಮಯವನ್ನು 20:00 ಗಂಟೆಗಳವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಲು ಹರ್ಶಿಸುತ್ತದೆ.
ರೈಲು ವಸ್ತುಸಂಗ್ರಹಾಲಯದ ವಿಂಟೇಜ್ ಸ್ಟೀಮ್ ಲೊಕೊಮೊಟಿವ್ಗಳು, ಕೋಚ್ಗಳು, ವ್ಯಾಗನ್ಗಳು, ಆಟಿಕೆ ರೈಲು, ಕೈಯಿಂದ ಚಾಲಿತ ಕ್ರೇನ್, ರೈಲ್ ಬಸ್ ಮತ್ತು ಸ್ಟೀಮ್ ಫೈರ್ ಪಂಪ್ನಂತಹ ದೊಡ್ಡ ಹೊರಾಂಗಣ ಪ್ರದರ್ಶನಗಳ ಅದ್ಭುತ ಪ್ರಕಾಶಿತ ನೋಟವನ್ನು ಪ್ರವಾಸಿಗರು ಹೊಂದಬಹುದು.
ಈ ಅವಧಿಯಲ್ಲಿ ರೈಲು ವಸ್ತುಸಂಗ್ರಹಾಲಯದ ಕೆಲಸದ ಸಮಯವನ್ನು ಸಹ ಎರಡು ಗಂಟೆಗಳಷ್ಟು, ಅಂದರೆ, 20:00 ಗಂಟೆಗಳವರೆಗೆ, ವಿಸ್ತರಿಸಲಾಗುವುದು.
ರೈಲು ವಸ್ತುಸಂಗ್ರಹಾಲಯವು ರಜಾದಿನಗಳಾದ 27.9.2022 ಮತ್ತು 04.10.2022 ರಂದು ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ.
ನಿಗದಿತ ಶುಲ್ಕದ ಪಾವತಿಯೊಂದಿಗೆ ಎಸ್ಎಲ್ಆರ್/ಡಿಎಸ್ಎಲ್ಆರ್ ಕ್ಯಾಮೆರಾಗಳನ್ನು ಛಾಯಾಗ್ರಹಣಕ್ಕೆ ಬಳಸುವ ಅವಕಾಶವಿರುತ್ತದೆ. ರೈಲು ವಸ್ತು ಸಂಗ್ರಹಾಲಯದ ಆವರಣದೊಳಗೆ ತಿಂಡಿ ತಿನಿಸುಗಳನ್ನು ಅನುಮತಿಸಲಾಗುವುದಿಲ್ಲ.