Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ
KARNATAKA

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ನ.4ರಿಂದ ಬಳ್ಳಾರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ

By kannadanewsnow5719/10/2025 9:30 AM

ಬಳ್ಳಾರಿ : ಬರುವ ನವೆಂಬರ್ 04 ರಿಂದ 11 ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.

ಶುಕ್ರವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ನಲ್ಲಚೇರುವು ಪ್ರದೇಶದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರ ವಹಿಸಬೇಕು. ವಿವಿಧ ಸಮಿತಿಗಳಲ್ಲಿನ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡಬೇಕು. ತಮಗೆ ವಹಿಸಿದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಸೇನಾ ನೇಮಕಾತಿಗೆ ಸಂಬAಧಿಸಿದAತೆ ಇದೊಂದು ವಿಶೇಷ ರ‍್ಯಾಲಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ನಮ್ಮ ಜಿಲ್ಲೆಯ ವಿದ್ಯಾರ್ಥಿ, ಯುವಜನರಿಗೆ ಸ್ಪೂರ್ತಿ ಸಿಗುವ ಹಾಗೆ ರ‍್ಯಾಲಿಯು ಯಶಸ್ವಿಯಾಗಿ ನಡೆಯಲು ಎಲ್ಲ ಇಲಾಖೆಗಳ ಸಹಕಾರ ಬೇಕಾಗಿದೆ. ಹಾಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹೆಚ್ಚು ಸಮನ್ವಯದಿಂದ ಕಾರ್ಯನಿರ್ವಹಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯ ಭಾಗವಹಿಸುವ ನಿರೀಕ್ಷೆ ಇದ್ದು, ಸಾರ್ವಜನಿಕ ಭದ್ರತೆ, ಕಾನೂನು-ಸುವ್ಯವಸ್ಥೆ ಕಾಪಾಡಲು ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ(ಎಸ್‌ಒಪಿ) ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಸೇನಾ ನೇಮಕಾತಿ ಅಧಿಕಾರಿಗಳಿಗೆ ಸೂಚಿಸಿದರು.ರ‍್ಯಾಲಿಯಲ್ಲಿ ಮುಖ್ಯವಾಗಿ ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ಹೇಳಿದರು.ರ‍್ಯಾಲಿಯಲ್ಲಿ ವೇದಿಕೆ, ಆಸನ ವ್ಯವಸ್ಥೆ, ವಿದ್ಯುತ್ ದೀಪಗಳ ವ್ಯವಸ್ಥೆ, ಮೈದಾನದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಜನರೇಟರ್ ವ್ಯವಸ್ಥೆ, ಆಸನ, ಕುರ್ಚಿಗಳು, ಟೇಬಲ್‌ಗಳು, ಮೈಕ್‌ಸೆಟ್ ಮತ್ತು ಹಾಸಿಗೆ ಹಾಗೂ ತ್ಯಾಜ್ಯದ ತೊಟ್ಟಿಗಳ ವ್ಯವಸ್ಥೆ, ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಜೊತೆಗೆ ವೈಫೈ ಮತ್ತು ಟೆಲಿಫೋನ್, ಎಲ್‌ಎಎನ್ ಸಂಪರ್ಕ, ಫೈಬರ್ ಕೇಬಲ್ ಜೊತೆಗೆ ಟೆಕ್ನಿಕಲ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಊಟ ಉಪಹಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕ್ರೀಡಾಂಗಣದ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮತ್ತು ದೈಹಿಕ ಪರೀಕ್ಷೆಯು ಶಿಸ್ತುಬದ್ಧವಾಗಿ ನಡೆಯುವಂತೆ ಈ ಕುರಿತು ಸಂಬAಧಿಸಿದ ಸಮಿತಿ ಪಾರದರ್ಶಕವಾಗಿ ನಿರ್ವಹಣೆ ಮಾಡಬೇಕು. ರ‍್ಯಾಲಿಯ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಸೇನಾ ನೇಮಕಾತಿಯ ಅಧಿಕಾರಿಗಳಾದ ಕರ್ನಲ್ ವಿವೇಕ್ ಜಮಿಂದಾರ್, ಮೇಜರ್ ಕಪಿಲ್ ಕೆ. ಸೇರಿದಂತೆ ಬಿಎಸ್‌ಎನ್‌ಎಲ್, ಅಗ್ನಿಶಾಮಕ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Good news for those who want to join the army: Agniveer Army recruitment rally in Bellary from November 4th
Share. Facebook Twitter LinkedIn WhatsApp Email

Related Posts

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM3 Mins Read

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM2 Mins Read

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM2 Mins Read
Recent News

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM

BREAKING : “ಹಲವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ” : ವಿಶ್ವಕಪ್ ಗೆಲುವಿನ ಕುರಿತು ಅಂಡರ್-19 ಕ್ರಿಕೆಟ್ ತಂಡಕ್ಕೆ ‘ಪ್ರಧಾನಿ ಮೋದಿ’ ಸಂದೇಶ

06/02/2026 9:41 PM
State News
KARNATAKA

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

By kannadanewsnow0906/02/2026 10:18 PM KARNATAKA 3 Mins Read

ಶಿವಮೊಗ್ಗ: ಇಂದಿನಿಂದ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆರಂಭಗೊಂಡಿದೆ. ಇಲ್ಲಿದ ನಿಗದಿ ಪಡಿಸಿರುವಂತ ದುಡ್ಡಿಗಿಂತ…

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM

ಇದು ಕನ್ನಡ ನ್ಯೂಸ್ ನೌ ಸುದ್ದಿ ಎಫೆಕ್ಟ್: ರೀಲ್ಸ್ ನೋಡುತ್ತ KSRTC ಬಸ್ ಚಾಲನೆ ಮಾಡಿದ ಚಾಲಕ ಸಸ್ಪೆಂಡ್

06/02/2026 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.