ಬೆಂಗಳೂರು: 2025ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದು, ಆಸಕ್ತರಿಗೆ ತಮಗೆ ಸೂಕ್ತ ಎನಿಸುವ ಛಾಯ್ಸ್ ದಾಖಲಿಸಿ, ಶುಲ್ಕ ಪಾವತಿಸಲು ಜುಲೈ 17 ಕೊನೆ ದಿನವಾಗಿದೆ.
ಛಾಯ್ಸ್-1 ಮತ್ತು 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕು. ಛಾಯ್ಸ್- 1 ಆಯ್ಕೆ ಮಾಡಿದವರು ಜು.16 ಮತ್ತು 17 ರಂದು ಮೂಲ ದಾಖಲೆಗಳ ಸಮೇತ ಕೆಇಎ ಕಚೆರಿಗೆ ಬಂದು ಸಲ್ಲಿಸಿ, ಪ್ರವೇಶ ಪತ್ರಗಳನ್ನು ಪಡೆಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ಜು.18ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದೂ ಅವರು ವಿವರಿಸಿದ್ದಾರೆ.
ಎನ್ ಆರ್ ಐ ವಾರ್ಡ್ ಕ್ಯಾಟಗರಿಯಡಿ ಸೀಟು ಪಡೆದವರ ಶುಲ್ಕವನ್ನು ಪ್ರಾಯೋಜಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದಲೇ ಕೆಇಎ ಖಾತೆಗೆ ಹಣ ಸಂದಾಯ ಮಾಡಬೇಕು. ಒಂದು ವೇಳೆ ಸದ್ಯಕ್ಕೆ ಆ ರೀತಿ ಹಣ ವರ್ಗಾವಣೆ ಮಾಡಿಸಲು ಸಾಧ್ಯವಾಗದಿದ್ದರೆ ಕೆಇಎಗೆ ಡಿ.ಡಿ ಸಲ್ಲಿಸಿ, ಪ್ರವೇಶ ಪತ್ರ ಪಡೆಯಬಹುದು. ಪ್ರಾಯೋಜಕತ್ವ ನೀಡಿದ ವ್ಯಕ್ತಿಯ ಖಾತೆಯಿಂದ ಕೆಇಎ ಅಕೌಂಟ್ ಗೆ ಹಣ ಸಂದಾಯವಾದ ನಂತರ ಆ ಡಿ.ಡಿಯನ್ನು ವಾಪಸ್ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 889 ಎಂಡಿಎಸ್ ಸೀಟು ಲಭ್ಯ ಇದ್ದು, ಮೊದಲ ಸುತ್ತಿನಲ್ಲಿ 636 ಮಂದಿಗೆ ಸೀಟು ಹಂಚಿಕೆ ಮಾಡಲಾಗಿದೆ. ಒಟ್ಟು 1,400 ಮಂದಿ ಸೀಟು ಪಡೆಯಲು ಅರ್ಜಿ ಸಲ್ಲಿಸಿದ್ದರು. ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮಗೆ ಸೂಕ್ತ ಅನಿಸಿದರೆ ಛಾಯ್ಸ್ -1 ಅನ್ನು ಆಯ್ಕೆ ಮಾಡಿಕೊಂಡು ಕಾಲೇಜಿಗೆ ಪ್ರವೇಶ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
BREAKING: ಸರ್ಕಾರಿ ಜಮೀನಿಗೆ ನಿಯಮ ಬಾಹಿರವಾಗಿ ಆದೇಶ: ‘IAS ಅಧಿಕಾರಿ ವಾಸಂತಿ ಅಮರ್’ ವಿರುದ್ಧ FIR ದಾಖಲು
BREAKING: ಉಕ್ರೇನ್ ಪ್ರಧಾನಿ ಹುದ್ದೆಗೆ ಡೆನಿಸ್ ಶ್ಮಿಹಾಲ್ ರಾಜೀನಾಮೆ | Denys Shmyhal resigns