ಬೆಂಗಳೂರು: ದಿನಾಂಕ: 05.01.2025 ರ ಭಾನುವಾರದಂದು ಆಯೋಜಿಸಿರುವ ಚಿತ್ರಸಂತೆ ಆಯೋಜಿಸಲಾಗಿದೆ. ಬೆಂಗಳೂರಿನ ಚಿತ್ರಸಂತೆಗೆ ತೆರಳೋರಿಗೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಅದರಲ್ಲಿ ಬಿಎಂಟಿಸಿಯಿಂದ ಮೆಟ್ರೋ ಫೀಡರ್ ಸೇವೆಯನ್ನು ಒದಗಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಧ್ಯೇಯದೊಂದಿಗೆ ಪ್ರಯಾಣಿಕರಿಗೆ ದಕ್ಷ, ಉತ್ತಮ ಮತ್ತು ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ಮುಂದುವರೆದು, ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ದಿನಾಂಕ: 05.01.2025 ರ ಭಾನುವಾರದಂದು ಆಯೋಜಿಸಿರುವ ಚಿತ್ರಸಂತೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಮಸಾಸಂಸ್ಥೆಯಿಂದ ಬೆಳಗ್ಗೆ 05:00 ಗಂಟೆಯಿಂದ ರಾತ್ರಿ 21:00 ಗಂಟೆಯವರೆಗೆ ರೂ.15.00 ವಿಶೇಷ ದರ (Flat Fare) ಗಳೊಂದಿಗೆ ಮೆಟ್ರೋ ಫೀಡರ್ ಸಾರಿಗೆಗಳನ್ನು ಆಚರಣೆಗೊಳಿಸಲು ಉದ್ದೇಶಿಸಿದ್ದು, ವಿವರಗಳು ಕೆಳಕಂಡಂತೆ ಇರುತ್ತವೆ.
ಕ್ರ.ಸಂ | ಎಲ್ಲಿಂದ-ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ | ಸಮಯ |
1 | ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ | ಆನಂದರಾವ್ ಸರ್ಕಲ್, ಶಿವಾನಂದ ಸ್ಟೋರ್ಸ. | 4 | ಪ್ರತಿ 10 ನಿಮಿಷಕ್ಕೊಂದರಂತೆ |
2 | ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ-ವಿಧಾನಸೌಧ | ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ, ಶಿವಾನಂದ ಸ್ಟೋರ್ಸ್. | 4 | ಪ್ರತಿ 10 ನಿಮಿಷಕ್ಕೊಂದರಂತೆ |
ಪಾರ್ಟ್ ಟೈಂ ಉದ್ಯೋಗದ ಆಸೆಗೆ ಬಿದ್ದು 57 ಲಕ್ಷ ಕಳೆದುಕೊಂಡ 27 ವರ್ಷದ ಯುವಕ | Part-time job scam