Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮಸಾಲಾ ಪುಡಿಯನ್ನು ಡ್ರಗ್ಸ್ ಎಂದು ತಪ್ಪಾಗಿ ಭಾವಿಸಿ 57 ದಿನ ಜೈಲಿಟ್ಟ ಖಾಕಿ: ₹10 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ!

ಮದ್ಯಪಾನ ಮಾತ್ರವಲ್ಲ: ಯುವಕರಲ್ಲಿ ‘ಫ್ಯಾಟಿ ಲಿವರ್’ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು!

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ರಿಸ್ ಮಸ್ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್: ಇಂದಿನಿಂದ ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ
KARNATAKA

ಕ್ರಿಸ್ ಮಸ್ ಹಬ್ಬಕ್ಕೆ ಊರಿಗೆ ತೆರಳೋರಿಗೆ ಗುಡ್ ನ್ಯೂಸ್: ಇಂದಿನಿಂದ ಈ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರ

By ವಸಂತ ಬಿ ಈಶ್ವರಗೆರೆ

ಮುಂಬರುವ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ-ಎಸ್ಎಂವಿಟಿ ಬೆಂಗಳೂರು ಮತ್ತು ವಾಸ್ಕೋ ಡ ಗಾಮಾ-ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ. ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿವೆ:

1. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒನ್-ವೇ ಎಕ್ಸ್ ಪ್ರೆಸ್ ವಿಶೇಷ ರೈಲು:

ಈ ರೈಲು (07305) ಡಿಸೆಂಬರ್ 20, 2024 ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು, ಅದೇ ದಿನ ಎಸ್ಎಂವಿಟಿ ಬೆಂಗಳೂರಿಗೆ ಸಂಜೆ 4:15 ಕ್ಕೆ ತಲುಪಲಿದೆ. ಈ ರೈಲು ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

2. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಎರಡು ಟ್ರಿಪ್ ವಿಶೇಷ (07306/07307) ರೈಲು ಸಂಚಾರ.

ರೈಲು ಸಂಖ್ಯೆ 07306 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 20 ಮತ್ತು 22, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ವಾಸ್ಕೋ ಡ ಗಾಮಾ ನಿಲ್ದಾಣವನ್ನು ಬೆಳಿಗ್ಗೆ 8:45ಕ್ಕೆ ತಲುಪಲಿದೆ.

ಮರಳಿ ಇದೆ ರೈಲು (07307) ಡಿಸೆಂಬರ್ 21 ಮತ್ತು 23, 2024 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಗೆ ಹೊರಟು, ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

3. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಒಂದು ಟ್ರಿಪ್ ವಿಶೇಷ (07308/07309) ರೈಲು ಸಂಚಾರ.

ರೈಲು ಸಂಖ್ಯೆ 07308 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 24, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.

ವಾಪಸು, ರೈಲು ಸಂಖ್ಯೆ 07309 ವಾಸ್ಕೋ ಡ ಗಾಮಾ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 29, 2024 ರಂದು ವಾಸ್ಕೋ ಡ ಗಾಮಾದಿಂದ ಮಧ್ಯಾಹ್ನ 2:30 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15 ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

4. ಎಸ್ಎಂವಿಟಿ ಬೆಂಗಳೂರು-ವಾಸ್ಕೋ-ಡ-ಗಾಮಾ ನಡುವೆ ಒಂದು ಟ್ರಿಪ್ ವಿಶೇಷ (07310/07311) ರೈಲು ಸಂಚಾರ.

ರೈಲು ಸಂಖ್ಯೆ 07310 ಎಸ್ಎಂವಿಟಿ ಬೆಂಗಳೂರು-ವಾಸ್ಕೋ ಡ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 30, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.

ಪುನಃ ಇದೇ ರೈಲು (07311) ಜನವರಿ 1, 2025 ರಂದು ವಾಸ್ಕೋ ಡ ಗಾಮಾದಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ರೈಲುಗಳ ಸಂಖ್ಯೆ 07306/07307, 07308/07309 & 07310/07311 ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲ್ಲಲಿವೆ.

ಈ ರೈಲುಗಳಲ್ಲಿ ಎರಡು ಎಸಿ ಟು ಟೈರ್ ಬೋಗಿಗಳು, ಹದಿನೈದು ಎಸಿ ತ್ರಿ ಟೈರ್ ಬೋಗಿಗಳು ಮತ್ತು ಎರಡು ಲಗೇಜ್ / ಜನರೇಟರ್ / ಬ್ರೇಕ್ ವ್ಯಾನ್ ಗಳು ಇರಲಿವೆ.

ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್ಸೈಟ್ ಗೆ ಭೇಟಿ ನೀಡಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಡಿ.22ರಂದು ಕಲಬುರ್ಗಿಯ ‘ಜಯದೇವ ಆಸ್ಪತ್ರೆ’ ಲೋಕಾರ್ಪಣೆ

GOOD NEWS: ಬೆಂಗಳೂರಲ್ಲಿ ಮುಂದಿನ ತಿಂಗಳು USA ಕಾನ್ಸುಲೇಟ್ ಕಚೇರಿ ಕಾರ್ಯಾರಂಭ

Share. Facebook Twitter LinkedIn WhatsApp Email

Related Posts

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

4 Mins Read

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

3 Mins Read

BREAKING: ಇನ್ಮುಂದೆ ರಾಜ್ಯದಲ್ಲಿ ತೆರೆದ ವಾಹನದಲ್ಲಿ ಸಫಾರಿಗೆ ಅವಕಾಶವಿಲ್ಲ: ಸಚಿವ ಈಶ್ವರ್ ಖಂಡ್ರೆ ಆದೇಶ

1 Min Read
Recent News

​ಮಸಾಲಾ ಪುಡಿಯನ್ನು ಡ್ರಗ್ಸ್ ಎಂದು ತಪ್ಪಾಗಿ ಭಾವಿಸಿ 57 ದಿನ ಜೈಲಿಟ್ಟ ಖಾಕಿ: ₹10 ಲಕ್ಷ ಪರಿಹಾರ ನೀಡಲು ಹೈಕೋರ್ಟ್ ಆದೇಶ!

ಮದ್ಯಪಾನ ಮಾತ್ರವಲ್ಲ: ಯುವಕರಲ್ಲಿ ‘ಫ್ಯಾಟಿ ಲಿವರ್’ ಹೆಚ್ಚಳಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ವೈದ್ಯರು!

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

State News
KARNATAKA

ಬಿಜೆಪಿ ನಾಯಕರು ಫೋಟೋ ಶೂಟ್ ಬಿಟ್ಟು ನಿತ್ಯ ಸಾರ್ವಜನಿಕ ಸಾರಿಗೆ ಬಳಸುತ್ತಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಬೆಂಗಳೂರು :“ಬಿಜೆಪಿ ನಾಯಕರು ಒಂದು ದಿನದ ಫೋಟೋ ಶೂಟ್ ಬಿಟ್ಟು ಪ್ರತಿನಿತ್ಯ ಮೆಟ್ರೋ, ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುತ್ತಾರಾ?” ಎಂದು ಡಿಸಿಎಂ…

ಕರ್ನಾಟಕದ ಶಿಕ್ಷಣ ರಂಗದಲ್ಲಿ ಕ್ರಾಂತಿ: 15,000 ಶಿಕ್ಷಕರ ಭರ್ತಿ, ‘800 KPS ಶಾಲೆ’ಗಳ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್!

BREAKING: ಇನ್ಮುಂದೆ ರಾಜ್ಯದಲ್ಲಿ ತೆರೆದ ವಾಹನದಲ್ಲಿ ಸಫಾರಿಗೆ ಅವಕಾಶವಿಲ್ಲ: ಸಚಿವ ಈಶ್ವರ್ ಖಂಡ್ರೆ ಆದೇಶ

Apple Store: ಬೆಂಗಳೂರಲ್ಲಿ ಎರಡನೇ ಸ್ಟೋರ್ ತೆರೆಯಲು ಆಪಲ್ ಸಿದ್ಧತೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.