ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಲಿಕಾ ಮಟ್ಟ ಉತ್ತಮ ಪಡಿಸಲು ವಿಶಿಷ್ಟ ಯೋಜನೆ ಜಾರಿಗೆ ತರಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ದಾಖಲಾತಿ ಸ್ಥಿತಿ ಮತ್ತು ಅವರ ಮೂಲಭೂತ ಓದುವಿಕೆ ಹಾಗೂ ಅಂಕಗಣಿತದ ಕೌಶಲ್ಯ ಕುರಿತು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅಂದಾಜನ್ನು ಶೈಕ್ಷಣಿಕ ವರದಿ ನೀಡಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಲ್ಲಿ ʼಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆʼ ಪರಿಕಲ್ಪನೆ ಜಾರಿಗೆ ತರಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ದಾಖಲಾತಿ ಸ್ಥಿತಿ ಮತ್ತು ಅವರ ಮೂಲಭೂತ ಓದುವಿಕೆ ಹಾಗೂ ಅಂಕಗಣಿತದ ಕೌಶಲ್ಯ ಕುರಿತು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅಂದಾಜನ್ನು ಶೈಕ್ಷಣಿಕ ವರದಿ ನೀಡಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷದಲ್ಲಿ ʼಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆʼ ಪರಿಕಲ್ಪನೆ… pic.twitter.com/0CqF1csTsM
— DIPR Karnataka (@KarnatakaVarthe) April 7, 2025