Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಸೇವಾಸಿಂಧು ಫೋರ್ಟಲ್ ಮೂಲಕ `ಬಸ್ ಪಾಸ್‍’ಗೆ ಅರ್ಜಿ ಆಹ್ವಾನ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

BREAKING: ವೈರಲ್ ಆಗಿರುವ ಆಡಿಯೋ ನಕಲಿ: ಮಾಜಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ | Zameer Ahamad Khan

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಶೂ, ಸಾಕ್ಸ್ ವಿತರಣೆಗೆ ಸರ್ಕಾರ ಆದೇಶ
KARNATAKA

GOOD NEWS: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಶೂ, ಸಾಕ್ಸ್ ವಿತರಣೆಗೆ ಸರ್ಕಾರ ಆದೇಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆಗೆ ಸರ್ಕಾರ ಆದೇಶಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಿದ್ದು, 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.74 ಲಕ್ಷ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ.

ಮತ್ತು ಸಾಕ್ಸ್ ವಿತರಣಾ ಯೋಜನೆಯನ್ನು ರಾಜ್ಯದಲ್ಲಿನ ವಿವಿಧ ಭಾಗಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಕೆಲವು ಪರ್ಯಾಯ ಅವಕಾಶ ನೀಡುವ ಅಗತ್ಯತೆಯಿದೆ. ಮಲೆನಾಡು ಮತ್ತು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಅತಿ ಹೆಚ್ಚಿನ ಮಳೆ ಬೀಳುವುದರಿಂದ ವಿದ್ಯಾರ್ಥಿಗಳಿಗೆ ಶೂಗಳು ಸಮರ್ಪಕ ಪಾದರಕ್ಷೆ ಆಗಲಿಕ್ಕಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ ಭಾಗದಲ್ಲಿ ಅತಿ ಹೆಚ್ಚಿನ ಉಷ್ಣಾಂಶದ ವಾತಾವರಣ ಇರುವುದರಿಂದ ಶೂ, ಸೂಕ್ತ ಪಾದರಕ್ಷೆ ಎನಿಸುವುದಿಲ್ಲ. ವಾತಾವರಣದ ಸ್ಥಿತಿಗಳು ಮತ್ತು ಹಾಕಿಕೊಳ್ಳಲು ಹಾಗೂ ತೆಗೆಯಲು ಸುಲಭವಾಗುವ ದೃಷ್ಟಿಯಿಂದ ಇಂತಹ ಭಾಗದಲ್ಲಿನ ವಿದ್ಯಾರ್ಥಿಗಳು ಶೂಗಳ ಬದಲಾಗಿ ಪಾದರಕ್ಷೆ ಧರಿಸಲು ಬಯಸುವುದನ್ನು ಗಮನಿಸಿದೆ. ಈ ನಮ್ಯತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ತೀರ್ಮಾನಕ್ಕೆ ಬಿಡಲು ನಿರ್ಧರಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.68ಲಕ್ಷ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ:2202-01-109-0-03 Vidya Vikasa Scheme for Students Incentive for Students ರಡಿ ನಿಗಧಿಪಡಿಸಿರುವ ರೂ.41000.00 ಲಕ್ಷಗಳ ಅನುದಾನದಿಂದ ರೂ.11188.00 ಲಕ್ಷಗಳ ವೆಚ್ಚದಲ್ಲಿ ಉಚಿತವಾಗಿ 01 ಜೊತೆ ಶೂ ಮತ್ತು 02 ಜೊತೆ ಸಾಕ್ಸ್‌ಗಳನ್ನು ಒದಗಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಇವರಿಗೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿದ್ದಾರೆ.

ಶಿವಮೊಗ್ಗ ಮೆಡಿಕಲ್ ಕಾಲೇಜು ಸಹ ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

BREAKING : 2 ದಿನದಲ್ಲಿ ರಾಜೀನಾಮೆ ಕೊಡಬಹುದು: ಶಾಸಕ ರಾಜು ಕಾಗೆ ಎಚ್ಚರಿಕೆಗೆ CM ಸಿದ್ದರಾಮಯ್ಯ ಹೇಳಿದ್ದೇನು?

Share. Facebook Twitter LinkedIn WhatsApp Email

Related Posts

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಸೇವಾಸಿಂಧು ಫೋರ್ಟಲ್ ಮೂಲಕ `ಬಸ್ ಪಾಸ್‍’ಗೆ ಅರ್ಜಿ ಆಹ್ವಾನ

2 Mins Read

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

3 Mins Read

BREAKING: ವೈರಲ್ ಆಗಿರುವ ಆಡಿಯೋ ನಕಲಿ: ಮಾಜಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ | Zameer Ahamad Khan

1 Min Read
Recent News

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಸೇವಾಸಿಂಧು ಫೋರ್ಟಲ್ ಮೂಲಕ `ಬಸ್ ಪಾಸ್‍’ಗೆ ಅರ್ಜಿ ಆಹ್ವಾನ

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

BREAKING: ವೈರಲ್ ಆಗಿರುವ ಆಡಿಯೋ ನಕಲಿ: ಮಾಜಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ | Zameer Ahamad Khan

ಪಾಕಿಸ್ತಾನದಲ್ಲಿ ಜಸ್ಪ್ರೀತ್ ಬುಮ್ರಾ? ಭಾರತೀಯ ವೇಗಿ ಬುಮ್ರಾ ಹೋಲುವ ಯುವಕನ ವಿಡಿಯೋ ವೈರಲ್ | WATCH VIDEO

State News
KARNATAKA

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ಸೇವಾಸಿಂಧು ಫೋರ್ಟಲ್ ಮೂಲಕ `ಬಸ್ ಪಾಸ್‍’ಗೆ ಅರ್ಜಿ ಆಹ್ವಾನ

By kannadanewsnow57 KARNATAKA 2 Mins Read

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್‍ಗಳ…

ಮದುವೆಯ ಮುಂಚಿನ ವರದಕ್ಷಿಣೆ’ ಒಪ್ಪುವ ಸಮಾಜ, ವಿವಾಹ ಮುರಿದ ನಂತರದ ಜೀವನಾಂಶವನ್ನು ದ್ವೇಷಿಸುವುದೇಕೆ?

BREAKING: ವೈರಲ್ ಆಗಿರುವ ಆಡಿಯೋ ನಕಲಿ: ಮಾಜಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ | Zameer Ahamad Khan

ALERT : ಮೃತ ವ್ಯಕ್ತಿಯ `ATM ಕಾರ್ಡ್’ ಬಳಸಿದ್ರೆ ಜೈಲು ಶಿಕ್ಷೆ ಫಿಕ್ಸ್.! ನಿಯಮಗಳೇನು ತಿಳಿಯಿರಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.