Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಟ್ಟೆ ಬೇಯಿಸುವಾಗ ನಿಂಬೆಹಣ್ಣಿನ ತುಂಡು ಹಾಕಿದ್ದೀರಾ? ಈ ಕಿಚನ್ ಟಿಪ್ಸ್ ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ!

Gold News: ದೇಶಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಅಚ್ಚರಿಯ ಕರೆ ನೀಡಿದ್ದೇಕೆ? ಇಲ್ಲಿದೆ ಕಾರಣ!

BREAKING: ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ಅವಿರೋಧ ಆಯ್ಕೆ | Udayanidhi Stalin

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಗರ್ಭಿಣಿ ಮಹಿಳೆಯರಿಗೆ’ ಗುಡ್‌ ನ್ಯೂಸ್‌ : 11,000 ರೂ. ಪ್ರೋತ್ಸಾಹಧನದ ʻಮಾತೃವಂದನಾ ಯೋಜನೆʼಗೆ ಅರ್ಜಿ ಅಹ್ವಾನ
KARNATAKA

ರಾಜ್ಯದ `ಗರ್ಭಿಣಿ ಮಹಿಳೆಯರಿಗೆ’ ಗುಡ್‌ ನ್ಯೂಸ್‌ : 11,000 ರೂ. ಪ್ರೋತ್ಸಾಹಧನದ ʻಮಾತೃವಂದನಾ ಯೋಜನೆʼಗೆ ಅರ್ಜಿ ಅಹ್ವಾನ

By kannadanewsnow57

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ನಡೆಯಲಿದೆ.

ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಟಕ್ಕಾಗಿ ನೀಡುವುದಾಗಿದೆ.

ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ರೂ.5 ಸಾವಿರ, ಎರಡನೇ ಮಗು(ಹೆಣ್ಣು ಮಗುವಾಗಿರುವುದಕ್ಕೆ) ರೂ.6 ಸಾವಿರ ನೀಡಲಾಗುತ್ತದೆ. ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಮೊದಲ ಪ್ರಸವದ ಗರ್ಭಿಣಿ ಮತ್ತು ಎರಡನೇ ಹೆಣ್ಣು ಮಗುವಿನ ಬಾಣಂತಿಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ತಾಲ್ಲೂಕಿನ ಫಲಾನುಭವಿಗಳು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್ ಅವರು ತಿಳಿಸಿದ್ದಾರೆ.

ನೋಂದಣಿಗೆ ಬೇಕಾಗುವ ದಾಖಲಾತಿಗಳು

ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆ ಮಾಹಿತಿಯ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್(10 ವರ್ಷ ಕಳೆದಿರುವ ಆಧಾರ್ ಕಾರ್ಡ್ ಅಪ್ಟೇಟ್ ಆಗಿರಬೇಕು), ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್(ಯಾವುದಾದರೂ ಒಂದರ ನಕಲು ಪ್ರತಿ) ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪ್ರಸನ್ನಕುಮಾರ್ ಅವರು ತಿಳಿಸಿದ್ದಾರೆ.

Good news for the state's 'pregnant women': Applications invited for the 'Matruvandana Yojana' with an incentive of Rs. 11000
Share. Facebook Twitter LinkedIn WhatsApp Email

Related Posts

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

2 Mins Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

4 Mins Read

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

2 Mins Read
Recent News

ಮೊಟ್ಟೆ ಬೇಯಿಸುವಾಗ ನಿಂಬೆಹಣ್ಣಿನ ತುಂಡು ಹಾಕಿದ್ದೀರಾ? ಈ ಕಿಚನ್ ಟಿಪ್ಸ್ ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ!

Gold News: ದೇಶಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಅಚ್ಚರಿಯ ಕರೆ ನೀಡಿದ್ದೇಕೆ? ಇಲ್ಲಿದೆ ಕಾರಣ!

BREAKING: ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ಅವಿರೋಧ ಆಯ್ಕೆ | Udayanidhi Stalin

SHOCKING: ತಾಯಂದಿರ ದಿನವೇ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಮಗ

State News
KARNATAKA

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವೊಂದು ಅಕ್ರಮ ಒತ್ತುವರಿಯಾಗುತ್ತಿದ್ದರೂ, ನಗರಸಭೆ ಆಡಳಿತ ಮಂಡಳಿ ಮಾತ್ರ ಕಣ್ಣಿದ್ದೂ…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.