Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮುಡಾ ಕೇಸ್ ನಲ್ಲಿ ಸಿಎಂ ಪತ್ನಿ ಪಾರ್ವತಿ, ಭೈರತಿ ಸುರೇಶ್ ಗೆ ಬಿಗ್ ರಿಲೀಫ್ : ED ಸಲ್ಲಿಸಿದ ಅರ್ಜಿ ವಜಾಗೊಳಿಸಿದ SC

21/07/2025 12:04 PM

Big News: ಆ.8 ರಂದು ಬಿಹಾರದಲ್ಲಿ ಸೀತಾ ದೇವಿಯ ಭವ್ಯ ದೇಗುಲ ನ ನಿರ್ಮಾಣಕ್ಕೆ ಅಮಿತ್ ಶಾ ಶಿಲಾನ್ಯಾಸ

21/07/2025 11:57 AM

ಜುಲೈ 25ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ದೆಹಲಿ ಪ್ರವಾಸ : ಕುತೂಹಲ ಮೂಡಿಸಿದ ಹೈಕಮಾಂಡ್ ಭೇಟಿ

21/07/2025 11:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ‘ಮಾವು ಬೆಳೆಗಾರ’ರಿಗೆ ಸಿಹಿಸುದ್ದಿ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಖರೀದಿಗೆ ಸರ್ಕಾರ ಅನುಮತಿಸಿ ಆದೇಶ
KARNATAKA

BREAKING: ರಾಜ್ಯದ ‘ಮಾವು ಬೆಳೆಗಾರ’ರಿಗೆ ಸಿಹಿಸುದ್ದಿ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಖರೀದಿಗೆ ಸರ್ಕಾರ ಅನುಮತಿಸಿ ಆದೇಶ

By kannadanewsnow0925/06/2025 9:03 PM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ 2025-26ನೇ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿಯಲ್ಲಿ ಮಾವು ಖರೀದಿಸಲು ಅನುಮತಿಸಿ ಅಧಿಕೃತ ಆದೇಶ ಮಾಡಿದೆ.

ಈ ಕುರಿತಂತೆ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಾಲಿನಲ್ಲಿ (Marketing Season) ರಾಜ್ಯದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇತರೆ ಜಿಲ್ಲೆಗಳಲ್ಲಿ ಒಟ್ಟಾರೆ 1.39 ಲಕ್ಷ ಹೆಕ್ಟೇರ್ ಪುದೇಶದಲ್ಲಿ 08 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಅಂದಾಜಿಸಲಾಗಿರುತ್ತದೆ. ರಾಜ್ಯದಲ್ಲಿ ಮಾವು ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಸ್ತುತ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವು ಬೆಳೆಯ ಮಾರುಕಟ್ಟೆ ಧಾರಣೆ ದಿನೇ ದಿನೇ ಕುಸಿಯುತ್ತಿದ್ದು, ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಜಿಲ್ಲಾ ಟಾಸ್ಕ್‌ ಫೋರ್ಸ್ ಸಮಿತಿ ಹಾಗೂ ತೋಟಗಾರಿಕೆ ಇಲಾಖೆಯವರು ಕೋರಿರುವ ಹಿನ್ನೆಲೆಯಲ್ಲಿ ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿಯಲ್ಲಿ (MIS-PDPS) ಮಾವು ಖರೀದಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪುಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದ್ದಾರೆ.

2024-25ನೇ ಸಾಲಿನಲ್ಲಿ ರಾಜ್ಯದಾದ್ಯಂತ 1.39 ಲಕ್ಷ ಹೆಕ್ಟೇರ್‌ ಪುದೇಶದಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯನ್ನು ಅಂದಾಜಿಸಲಾಗಿರುತ್ತದೆ. ರಾಜ್ಯದಲ್ಲಿ ಮಾವು ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಸ್ತುತ ಪಮುಖ ಮಾರುಕಟ್ಟೆಗಳಲ್ಲಿ ಮಾವು ಬೆಳೆಯ ಮಾರುಕಟ್ಟೆ ಧಾರಣೆ ದಿನೇ ದಿನೇ ಕುಸಿಯುತ್ತಿದ್ದು, ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಹಾಗೂ ತೋಟಗಾರಿಕೆ ಇಲಾಖೆಯವರು ಕೋರಿರುತ್ತಾರೆ. ಅದರಂತೆ, ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ / ಬೆಲೆ ವ್ಯತ್ಯಾಸ ಪಾವತಿ ಯೋಜನೆಯಡಿ ಮಾವು ಖರೀದಿಸಲು ಪುಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು ಮಾವು ಖರೀದಿ ಕುರಿತು ಪ್ರತ್ಯೇಕ ಯಾವ ಯೋಜನೆಯಡಿಯಲ್ಲಿ ಹಾಗೂ ರಾಜ್ಯ ಸರ್ಕಾರದ ಖರೀದಿ ಏಜೆನ್ಸಿ ನೇಮಿಸುವ ಕುರಿತು ಕೋರಿರುವಂತೆ MIS-PDPS (Price Deficit Payment Scheme) ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಇವರನ್ನು ರಾಜ್ಯ ಖರೀದಿ ಏಜೆನ್ಸಿಯನ್ನಾಗಿ ನೇಮಿಸಬಹುದಾಗಿದೆ ಎಂದು ವ್ಯವಸ್ಮಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ರವರು ಸರ್ಕಾರಕ್ಕೆ ಪುಸ್ತಾವನೆ ಸಲ್ಲಿಸಿರುತ್ತಾರೆ ಎಂದು ಹೇಳಿದ್ದಾರೆ.

2025-26ನೇ ಸಾಲಿನಲ್ಲಿ (Marketing Season) ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficiency Payment Scheme-PDPS) ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ದಿನಾಂಕ: 24.06.2025 ರಂದು 2,50,000 ಮೆ. ಟನ್ ಪ್ರಮಾಣ ಮಾವು ಖರೀದಿಸಲು MIP ದರ ರೂ.1,616/- (ಮಾರುಕಟ್ಟೆ ಮಧ್ಯಪ್ರವೇಶ ದರ (MIP) ಮತ್ತು ಪುಚಲಿತ ಮಾರುಕಟ್ಟೆ ಧಾರಣೆಯು ಶೇ.25ರ ಮಿತಿಗೊಳಪಟ್ಟಿರತಕ್ಕದ್ದು) ಪ್ರತಿ ಕ್ವಿಂಟಾಲ್‌ಗೆ ನಿಗದಿಪಡಿಸಿ ಅನುಮೋದನೆ ನೀಡಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficiency Payment Scheme-PDPS) ಯೋಜನೆಯ ಮಾರ್ಗಸೂಚಿಗಳನ್ವಯ, ರಾಜ್ಯದಲ್ಲಿ ಮಾವು ಖರೀದಿಸುವ ಕುರಿತು ಈ ಕೆಳಕಂಡಂತೆ ಆದೇಶಿಸಿದೆ

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ (Marketing Season) ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficiency Payment Scheme-PDPS) ಯೋಜನೆಯ ಮಾರ್ಗಸೂಚಿಗಳನ್ವಯ, ಮಾವು ಉತ್ಪನ್ನವನ್ನು ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ವಹಿವಾಟಾದ ಉತ್ಪನ್ನದ ಧಾರಣೆಯ ಆಧಾರದ ಮೇಲೆ ಬೆಲೆ ವ್ಯತ್ಯಾಸದ ಮೊತ್ತವನ್ನು ರೈತರಿಗೆ ಪಾವತಿಸಲು ಮತ್ತು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಗಲುವ ಒಟ್ಟಾರೆ ವೆಚ್ಚ ರೂ.101.00 ಕೋಟಿಗಳನ್ನು ಆವರ್ತ ನಿಧಿಯಿಂದ ತೋಟಗಾರಿಕೆ ಇಲಾಖೆಯ ಮಾವು ಅಭಿವೃದ್ಧಿ ಮಂಡಳಿಗೆ ಬಿಡುಗಡ ಮಾಡಿ, ತದನಂತರ ಶೇ.50 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಲು ಕ್ರಮವಹಿಸಿ ಆವರ್ತನಿಧಿಗೆ ಮರುಪಾವತಿಸುವ ಷರತ್ತಿನೊಂದಿಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಿದೆ:-

1. 2025-26ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficiency Payment Scheme-PDPS) ಯೋಜನೆಯಡಿಯಲ್ಲಿ 2,50,000 ಮೆ.ಟನ್ ಪ್ರಮಾಣದ ಮಾವು ಖರೀದಿಸಲು ಮಾರುಕಟ್ಟೆ ಮಧ್ಯಪ್ರವೇಶ ದರ (MIP) ರೂ.1,616/- ಗಳು ಪ್ರತಿ ಕ್ವಿಂಟಾಲ್‌ಗೆ ನಿಗದಿಪಡಿಸಲಾಗಿದೆ. (ಮಾರುಕಟ್ಟೆ ಮಧ್ಯಪ್ರವೇಶ ದರ (MIP) ಮತ್ತು ಪುಚಲಿತ ಮಾರುಕಟ್ಟೆ ಧಾರಣೆಯು ಶೇ.25 ರ ಮಿತಿಗೊಳಪಟ್ಟಿರತಕ್ಕದ್ದು.)

2. ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಸಂಸ್ಥೆಯ ಮುಖಾಂತರ ಸದರಿ ಯೋಜನೆಯನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಅನುಷ್ಠಾನಗೊಳಿಸತಕ್ಕದ್ದು.

3. ಈ ಯೋಜನೆಯಡಿ ಪತಿ ಪ್ರತಿ ಎಕರೆಗೆ 20 ಕ್ವಿಂಟಾಲ್‌ನಂತೆ ಗರಿಷ್ಟ 05 ಎಕರೆಗೆ 100 ಕ್ವಿಂಟಾಲ್‌ರವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡತಕ್ಕದ್ದು.

4. ಸದರಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸತಕ್ಕದ್ದು.

5. ಸದರಿ ಯೋಜನೆಯನ್ನು ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ, ಸಮಿತಿ, ಮಾರುಕಟ್ಟೆ ಉಪ ಪ್ರಾಂಗಣ / ಉಪ ಮಾರುಕಟ್ಟೆ, ಡಿ.ಪಿ.ಸಿ ಹಾಗೂ ಕೃಷಿ ಮಾರಾಟ ಇಲಾಖೆಯಿಂದ ಘೋಷಿಸುವ ಮಾವು ಸಂಸ್ಕರಣಾ ಘಟಕಗಳ ಮೂಲಕ ಅನುಷ್ಠಾನಗೊಳಿಸತಕ್ಕದ್ದು.

6. ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ, ನಿಗಮ ನಿಯಮಿತ ಸಂಸ್ಥೆಯು NeML ಸಂಸ್ಥೆಯ ಸಹಯೋಗದೊಂದಿಗೆ NeML ತಂತ್ರಾಂಶದ ಮೂಲಕ MIS-PDPS ಮಾವು ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳತಕ್ಕದ್ದು.

7. ಇ-ಆಡಳಿತ ಇಲಾಖೆಯ FRUITS ತಂತ್ರಾಂಶದಲ್ಲಿ ರೈತರು ನೀಡಿರುವ ವಿವರಗಳನ್ನು ಭೂಮಿ, UIDAI ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ, UMP ತಂತ್ರಾಂಶದ ವಹಿವಾಟು ಪ್ರಕ್ರಿಯೆ ಮೂಲಕ ಖರೀದಿಸಲಾದ ಪ್ರಮಾಣವನ್ನು ನಿಯಮಾನುಸಾರ ಇಂದೀಕರಿಸಿ, ಪಾವತಿಸಲು ಡಿಬಿಟಿ (DBT) ಮೂಲಕ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಕ್ರಮವಹಿಸತಕ್ಕದ್ದು.

8. ರೈತರ ನೋಂದಣಿ ಕಾರ್ಯದ ನಂತರ ಮಾವು ಉತ್ಪನ್ನದ UMP ತಂತ್ರಾಂಶದಡಿಯಲ್ಲಿ ವಹಿವಾಟು ದಾಖಲಿಸುವ ಕಾರ್ಯವನ್ನು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಇವರ ಸಹಯೋಗದೊಂದಿಗೆ ನಿರ್ವಹಿಸತಕ್ಕದ್ದು.

9. ಸರ್ಕಾರದ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯು ಪ್ರಸ್ತುತ ಮಾರುಕಟ್ಟೆ ಧಾರಣೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ನಿಗದಿಪಡಿಸುವ ಮಾರಾಟ ದರವನ್ನು ಪರಿಗಣಿಸುವುದು. ಸದರಿ ದರವು ಮಾರುಕಟ್ಟೆ ಮಧ್ಯಪ್ರವೇಶ ದರ (MIP) ಮತ್ತು ಪುಚಲಿತ ಮಾರುಕಟ್ಟೆ ಧಾರಣೆಯು ಶೇ.25 ರ ಮಿತಿಗೊಳಪಟ್ಟಿರತಕ್ಕದ್ದು.

10. ಸದರಿ ಸಮಿತಿಯು ನಿರ್ಧರಿಸುವ ದರವನ್ನು ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಹಾಗೂ ವ್ಯವಸ್ಯಾಪಕ ನಿರ್ದೇಶಕರು, ಕೃಷಿ ಮಾರಾಟ ಮಂಡಳಿ ಇವರು ಕಾಲಕಾಲಕ್ಕೆ ಪ್ರಕಟಣೆ ಹೊರಡಿಸುವುದು. ಅದರಂತೆ, ಬೆಲೆ ವ್ಯತ್ಯಾಸ ಪಾವತಿ ಯೋಜನೆಯನ್ನು ಜಾರಿಗೊಳಿಸತಕ್ಕದ್ದು.

11. ಸದರಿ ಯೋಜನೆಯ ಅನುಷ್ಠಾನ ಅವಧಿಯು ತಂತ್ರಾಂಶದಲ್ಲಿ ಮಾವು ಉತ್ಪನ್ನದ ಮೊದಲ ವಹಿವಾಟು ತಂತ್ರಾಂಶದಲ್ಲಿ ಆಗುವ ದಿನಾಂಕದಿಂದ ರಾಜ್ಯಾದ್ಯಂತ ಒಂದು ತಿಂಗಳ ಅವಧಿಯವರೆಗೆ ಮಾತ್ರ ಸದರಿ ಯೋಜನೆ ಚಾಲ್ತಿಯಲ್ಲಿರುತ್ತದೆ.

12. ಸದರಿ ಯೋಜನೆಯಡಿಯಲ್ಲಿ ರೈತರ ನೋಂದಣಿ ಕಾರ್ಯವನ್ನು ಮಾರಾಟ ಮಾಡುವ ಪೂರ್ವದಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು.

13. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ತಂತ್ರಾಂಶದಲ್ಲಿ ನೋಂದಾಯಿತ ರೈತರ ಮತ್ತು ಪ್ರಮಾಣದ ಮಾಹಿತಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಇವರಿಗೆ ಸಲ್ಲಿಸುವುದು. ಸದರಿ ಮಾಹಿತಿಯನ್ನು ಪರಿಶೀಲಿಸಿ, ವ್ಯತ್ಯಾಸದ ಮೊತ್ತವನ್ನು ಡಿಬಿಟಿ (DBT) ಮುಖಾಂತರ ರೈತರ ಖಾತೆಗೆ ಪಾವತಿಸಲು ಕ್ರಮವಹಿಸತಕ್ಕದ್ದು,

14. 2025-26ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (Price Deficiency Payment Scheme-PDPS) ಯೋಜನೆ ಪ್ರಕ್ರಿಯೆ ಮುಕ್ತಾಯದ ನಂತರ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಇವರು ಒಂದು ತಿಂಗಳೊಳಗಾಗಿ ಲೆಕ್ಕ ಪರಿಶೋಧನಾ ಕಾರ್ಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಮರುಪಾವತಿಗಾಗಿ ಕ್ಷೇಮ್ ಸಲ್ಲಿಸಲು ಲೆಕ್ಕ ಪರಿಶೋಧನಾ ವರದಿಯೊಂದಿಗೆ ಸರ್ಕಾರಕ್ಕೆ, ಪುಸ್ತಾವನೆ ಸಲ್ಲಿಸತಕ್ಕದ್ದು.

15. ಮಾವು ಉತ್ಪನ್ನವನ್ನು ಕೇಂದ್ರ ಸರ್ಕಾರದ ಮಧ್ಯ ಪ್ರವೇಶ ಯೋಜನೆಯ (MIS-PDPS) ಮಾರ್ಗಸೂಚಿಗಳನ್ವಯ ಖರೀದಿಸತಕ್ಕದ್ದು.

16, ಸದರಿ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ದುರುಪಯೋಗ ಆಗದ ರೀತಿಯಲ್ಲಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿರ್ವಹಿಸತಕ್ಕದ್ದು.

17. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆ, ಕೃಷಿ ಮಾರಾಟ ಇಲಾಖೆ, ತೋಟಗಾರಿಕ ಇಲಾಖೆಗಳ ಅಧಿಕಾರಿ ಗಳನ್ನೊಳಗೊಂಡಂತೆ ಒಂದು ತಂಡವನ್ನು ರಚಿಸಿ, ಮೇಲುಸ್ತುವಾರಿ ವಹಿಸಿ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸತಕ್ಕದ್ದು,

18. ಜಿಲ್ಲಾಧಿಕಾರಿಗಳು ನೀಡುವ ನಿರ್ದೇಶನವನ್ನು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಪಾಲಿಸಿ, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸತಕ್ಕದ್ದು.

19, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರು ದಿನಂಪ್ರತಿ ಆವಕವಾಗುವ ಮಾವು ಉತ್ಪನ್ನದ ಪ್ರಮಾಣ, ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಸರ್ಕಾರಕ್ಕೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಇವರಿಗೆ ಸಲ್ಲಿಸತಕ್ಕದ್ದು.

1.44 ದಶಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ಇನ್ನೂ ಲಸಿಕೆ ಪಡೆಯದೆ ಉಳಿದಿದ್ದಾರೆ: ಲ್ಯಾನ್ಸೆಟ್ ವರದಿ

ಯುಜಿಸಿಇಟಿ: ತಿದ್ದುಪಡಿಗೆ ಕೊನೆ ಅವಕಾಶ ನೀಡಿದ KEA

Share. Facebook Twitter LinkedIn WhatsApp Email

Related Posts

ಜುಲೈ 25ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ದೆಹಲಿ ಪ್ರವಾಸ : ಕುತೂಹಲ ಮೂಡಿಸಿದ ಹೈಕಮಾಂಡ್ ಭೇಟಿ

21/07/2025 11:56 AM1 Min Read

BREAKING: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ ಪರಿಹಾರ ಎತ್ತಿಹಿಡಿದ ಸುಪ್ರೀಂ, ಇಡಿ ಅರ್ಜಿ ವಜಾ

21/07/2025 11:38 AM1 Min Read

BREAKING : ಮಂಡ್ಯದಲ್ಲಿ ಘೋರ ಘಟನೆ : ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ‘MBBS’ ವಿದ್ಯಾರ್ಥಿ ಆತ್ಮಹತ್ಯೆ

21/07/2025 11:17 AM1 Min Read
Recent News

BREAKING : ಮುಡಾ ಕೇಸ್ ನಲ್ಲಿ ಸಿಎಂ ಪತ್ನಿ ಪಾರ್ವತಿ, ಭೈರತಿ ಸುರೇಶ್ ಗೆ ಬಿಗ್ ರಿಲೀಫ್ : ED ಸಲ್ಲಿಸಿದ ಅರ್ಜಿ ವಜಾಗೊಳಿಸಿದ SC

21/07/2025 12:04 PM

Big News: ಆ.8 ರಂದು ಬಿಹಾರದಲ್ಲಿ ಸೀತಾ ದೇವಿಯ ಭವ್ಯ ದೇಗುಲ ನ ನಿರ್ಮಾಣಕ್ಕೆ ಅಮಿತ್ ಶಾ ಶಿಲಾನ್ಯಾಸ

21/07/2025 11:57 AM

ಜುಲೈ 25ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ದೆಹಲಿ ಪ್ರವಾಸ : ಕುತೂಹಲ ಮೂಡಿಸಿದ ಹೈಕಮಾಂಡ್ ಭೇಟಿ

21/07/2025 11:56 AM

UIDAI: ಶೀಘ್ರದಲ್ಲೇ ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ ನವೀಕರಣ ಪ್ರಾರಂಭ

21/07/2025 11:49 AM
State News
KARNATAKA

ಜುಲೈ 25ಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ದೆಹಲಿ ಪ್ರವಾಸ : ಕುತೂಹಲ ಮೂಡಿಸಿದ ಹೈಕಮಾಂಡ್ ಭೇಟಿ

By kannadanewsnow0521/07/2025 11:56 AM KARNATAKA 1 Min Read

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ…

BREAKING: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ ಪರಿಹಾರ ಎತ್ತಿಹಿಡಿದ ಸುಪ್ರೀಂ, ಇಡಿ ಅರ್ಜಿ ವಜಾ

21/07/2025 11:38 AM

BREAKING : ಮಂಡ್ಯದಲ್ಲಿ ಘೋರ ಘಟನೆ : ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ‘MBBS’ ವಿದ್ಯಾರ್ಥಿ ಆತ್ಮಹತ್ಯೆ

21/07/2025 11:17 AM

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಮಾತ್ರೆ ನುಂಗುವಾಗಲೇ ಕುಸಿದುಬಿದ್ದು ಯುವ ವಕೀಲ ಸಾವು!

21/07/2025 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.