Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಬಿಎ ಗುಂಡಿಕ್ಕಿ ಬರ್ಬರ ಹತ್ಯೆ

06/05/2026 11:45 PM

BIG BREAKIN: ಪಶ್ಚಿಮ ಬಂಗಾಳದಲ್ಲಿ ಹೈ ಪ್ರೊಫೈಲ್ ರಾಜಕೀಯ ಭೀಕರ ಹತ್ಯೆ; ಸುವೇಂದು ಅಧಿಕಾರಿ ಪಿಎ ಗುಂಡಿಕ್ಕಿ ಕೊಲೆ

06/05/2026 11:32 PM

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

06/05/2026 9:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ
KARNATAKA

ರಾಜ್ಯದ `ಕಿಡ್ನಿ ವೈಫಲ್ಯ ರೋಗಿಗಳಿಗೆ’ ಗುಡ್ ನ್ಯೂಸ್ : `ಕಿಡ್ನಿ ಕಸಿ’ಗೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟ

By kannadanewsnow5708/04/2026 12:51 PM

ಬೆಂಗಳೂರು: ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವ ಸಾವಿರಾರು ರೋಗಿಗಳ ಪಾಲಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಿಡ್ನಿ ದಾನಿಗಳು ಲಭ್ಯವಿದ್ದರೂ, ರಕ್ತದ ಗುಂಪು ಅಥವಾ ಅಂಗಾಂಶಗಳು ಹೊಂದಾಣಿಕೆಯಾಗದ (Incompatibility) ಕಾರಣ ಕಸಿ ಸಾಧ್ಯವಾಗದೆ ಪರದಾಡುತ್ತಿದ್ದ ರೋಗಿಗಳ ನೆರವಿಗೆ ಧಾವಿಸಿರುವ ಸರ್ಕಾರ, ‘ಕರ್ನಾಟಕ ಬಹು-ಜೋಡಿ ಮೂತ್ರಪಿಂಡ ವಿನಿಮಯ ಕಸಿ ಮಾರ್ಗಸೂಚಿಗಳು, 2026’ ಅನ್ನು ಬಿಡುಗಡೆ ಮಾಡಿದೆ.

ಈ ನೂತನ ನಿಯಮಾವಳಿಯಿಂದಾಗಿ ಇನ್ನು ಮುಂದೆ ದ್ವಿಮುಖ (ಇಬ್ಬರು ದಾನಿಗಳು), ತ್ರಿಮುಖ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜೋಡಿಗಳು ಪರಸ್ಪರ ಕಿಡ್ನಿಗಳನ್ನು ವಿನಿಮಯ ಮಾಡಿಕೊಂಡು ಮರುಜೀವ ಪಡೆಯಲು ಕಾನೂನುಬದ್ಧ ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ : ಯುಪಿಐ ಪಾವತಿ ವಿಫಲವಾದರೆ ಹಣ ಮರಳಿ ಪಡೆಯಲು ಇಲ್ಲಿದೆ ಮಾರ್ಗದರ್ಶಿ

ಏನಿದು ‘ಬಹು-ಜೋಡಿ’ ವಿನಿಮಯ?
ಸಾಮಾನ್ಯವಾಗಿ ರೋಗಿಯ ಕುಟುಂಬದವರೇ ಕಿಡ್ನಿ ದಾನ ಮಾಡಲು ಮುಂದೆ ಬಂದರೂ, ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೆ ಕಸಿ ಮಾಡುವುದು ಕಷ್ಟವಾಗುತ್ತಿತ್ತು. ಈಗ ಜಾರಿಗೆ ಬಂದಿರುವ ‘ಸ್ವಾಪ್’ (Swap) ವ್ಯವಸ್ಥೆಯಲ್ಲಿ, ಎ ಎಂಬ ರೋಗಿಯ ದಾನಿಯು ಬಿ ಎಂಬ ರೋಗಿಗೆ ಮತ್ತು ಬಿ ರೋಗಿಯ ದಾನಿಯು ಎ ರೋಗಿಗೆ ಕಿಡ್ನಿ ನೀಡಬಹುದು. ಈ ಹೊಸ ಮಾರ್ಗಸೂಚಿಯಡಿ ಕೇವಲ ಇಬ್ಬರಷ್ಟೇ ಅಲ್ಲದೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಜೋಡಿಗಳು ಒಟ್ಟಾಗಿ ಈ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು:
ಸಮೀಪ ಸಂಬಂಧಿಗಳಿಗೆ ಮಾತ್ರ ಅವಕಾಶ: 1994ರ ಮಾನವ ಅಂಗಾಂಗ ಕಸಿ ಕಾಯ್ದೆಯಡಿ (THOTA) ವ್ಯಾಖ್ಯಾನಿಸಲಾದ ‘ಸಮೀಪ ಸಂಬಂಧಿಗಳು’ ಮಾತ್ರ ಈ ವಿನಿಮಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು.

ವೈದ್ಯಕೀಯ ದೃಢೀಕರಣ ಕಡ್ಡಾಯ: ದಾನಿ ಮತ್ತು ಸ್ವೀಕರಿಸುವವರ ನಡುವೆ ರಕ್ತದ ಗುಂಪು ಅಥವಾ ಅಂಗಾಂಶಗಳ ಅಸಾಮರಸ್ಯ (ABO/HLA Incompatibility) ಇರುವುದು ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟಿರಬೇಕು.

ಜಂಟಿ ಒಪ್ಪಂದ: ವಿನಿಮಯ ಗುಂಪಿನಲ್ಲಿರುವ ಎಲ್ಲಾ ದಾನಿಗಳು ಮತ್ತು ಸ್ವೀಕರಿಸುವವರು ಒಟ್ಟಾಗಿ ದಾನ ನೀಡಲು ಮತ್ತು ಸ್ವೀಕರಿಸಲು ಒಂದೇ ಜಂಟಿ ಒಪ್ಪಂದಕ್ಕೆ ಸಹಿ ಮಾಡುವುದು ಕಡ್ಡಾಯ.

ವಾಣಿಜ್ಯ ವ್ಯವಹಾರಕ್ಕೆ ನಿಷೇಧ: ಯಾವುದೇ ಹಂತದಲ್ಲಿ ಹಣದ ವ್ಯವಹಾರ ಅಥವಾ ವಾಣಿಜ್ಯ ವಹಿವಾಟು ನಡೆದರೆ ಅಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಅಧಿಕಾರ ಸಮಿತಿಯ ನಿಗಾ: ಪ್ರತಿಯೊಂದು ಕಸಿ ಪ್ರಕ್ರಿಯೆಗೂ ಮುನ್ನ ‘ರಾಜ್ಯ ಮಟ್ಟದ ಅಧಿಕಾರ ಸಮಿತಿ’ಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಇಡೀ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು.

ಪಾರದರ್ಶಕತೆಗೆ ಆದ್ಯತೆ:
ಈ ಕಸಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. NABL ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದಲೇ ರಕ್ತದ ಅಡ್ಡ-ಹೊಂದಾಣಿಕೆ ಪರೀಕ್ಷೆ ನಡೆಸಬೇಕು ಮತ್ತು ಅಗತ್ಯವಿದ್ದಲ್ಲಿ DNA ಪ್ರೊಫೈಲಿಂಗ್ ವರದಿಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪರಿಣಾಮ:
ಸರ್ಕಾರದ ಈ ನಿರ್ಧಾರದಿಂದಾಗಿ ಕಿಡ್ನಿ ದಾನಿಗಳ ಕೊರತೆ ನೀಗಲಿದ್ದು, ಅಕ್ರಮ ಅಂಗಾಂಗ ದಾನ ಜಾಲಕ್ಕೆ ಬ್ರೇಕ್ ಬೀಳುವ ನಿರೀಕ್ಷೆಯಿದೆ. ಈ ಆದೇಶವು ಹೊರಡಿಸಿದ ದಿನಾಂಕದಿಂದಲೇ ಜಾರಿಗೆ ಬರಲಿದ್ದು, ರಾಜ್ಯದ ಎಲ್ಲಾ ನೋಂದಾಯಿತ ಕಿಡ್ನಿ ಕಸಿ ಆಸ್ಪತ್ರೆಗಳಿಗೆ ಅನ್ವಯವಾಗಲಿದೆ.

Government Order Regarding : Administrative Guidelines for Multi-Pair Kidney Paired Exchange (Swap) Transplantation under Section 9(3A) of the Transplantation of Human Organs and Tissues Act (THOTA), 1994.@CMofKarnataka @DKShivakumar @KarnatakaVarthe pic.twitter.com/DcRoPxYDZn

— Karnataka Health Department (@DHFWKA) April 6, 2026

Good news for the state's 'kidney failure patients': Government publishes official guidelines for 'kidney transplant'
Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

06/05/2026 9:02 PM2 Mins Read

BREAKING: ರಾಸಲೀಲೆ ವಿಡಿಯೋ ಕೇಸ್: ರಾಜ್ಯ ಸರ್ಕಾರದಿಂದ ರಾಮಚಂದ್ರ ರಾವ್ ಅಮಾನತು ವಾಪಸ್

06/05/2026 8:45 PM1 Min Read

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM1 Min Read
Recent News

BREAKING: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಬಿಎ ಗುಂಡಿಕ್ಕಿ ಬರ್ಬರ ಹತ್ಯೆ

06/05/2026 11:45 PM

BIG BREAKIN: ಪಶ್ಚಿಮ ಬಂಗಾಳದಲ್ಲಿ ಹೈ ಪ್ರೊಫೈಲ್ ರಾಜಕೀಯ ಭೀಕರ ಹತ್ಯೆ; ಸುವೇಂದು ಅಧಿಕಾರಿ ಪಿಎ ಗುಂಡಿಕ್ಕಿ ಕೊಲೆ

06/05/2026 11:32 PM

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

06/05/2026 9:02 PM

ಅಮೆರಿಕ-ಇರಾನ್ ನಡುವೆ ‘ಒಂದು ಪುಟದ’ ಸಂಧಾನ ಸೂತ್ರ: ಒಪ್ಪಂದಕ್ಕೆ ಬರಲು ಟ್ರಂಪ್ ಗಡುವು; ಮಾತುಕತೆ ವಿಫಲವಾದರೆ ಮತ್ತೆ ಬಾಂಬ್ ದಾಳಿಯ ಎಚ್ಚರಿಕೆ!

06/05/2026 8:50 PM
State News
KARNATAKA

BIG NEWS: ರಾಜ್ಯದಲ್ಲೊಂದು ‘ಅರಣ್ಯ ಇಲಾಖೆಯ ನಡುತೋಪು’ ಅಕ್ರಮ ಕಡಿತಲೆ: ಕಣ್ಮುಚ್ಚಿ ಕುಳಿತ ‘ಅರಣ್ಯಾಧಿಕಾರಿ’ಗಳು!

By kannadanewsnow0906/05/2026 9:02 PM KARNATAKA 2 Mins Read

ಶಿವಮೊಗ್ಗ: ಅರಣ್ಯ ಇಲಾಖೆಯ ಸಿಬ್ಬಂದಿ ಕಣ್ಣಿದ್ದೂ ಕುರುಡಾದರೇ ಅಥವಾ ಇದು ವ್ಯವಸ್ಥಿತ ಕರ್ಮಕಾಂಡವೇ? ಇಂತಹದೊಂದು ಪ್ರಶ್ನೆ ಮೂಡುವಂತೆ ಸಾಗರ ತಾಲ್ಲೂಕಿನ…

BREAKING: ರಾಸಲೀಲೆ ವಿಡಿಯೋ ಕೇಸ್: ರಾಜ್ಯ ಸರ್ಕಾರದಿಂದ ರಾಮಚಂದ್ರ ರಾವ್ ಅಮಾನತು ವಾಪಸ್

06/05/2026 8:45 PM

BREAKING: ಮಂಡ್ಯದಲ್ಲಿ ರೈಲ್ವೆ ಗೇಟ್ ಮೆನ್ ಗೆ ಮೂವರು ಅನ್ಯಕೋಮಿನ ಯುವಕರಿಂದ ಚಾಕುವಿನಿಂದ ಹಲ್ಲೆ!?

06/05/2026 8:40 PM

Watch video: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಯುವಕನ ಹುಚ್ಚಾಟ; ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

06/05/2026 8:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.