ಬೆಂಗಳೂರು: ಮೀನುಗಾರಿಕಾ ಇಲಾಖೆ ಶಿವಮೊಗ್ಗ ವತಿಯಿಂದ 2022-23 ರಿಂದ 2024-25 ನೇ ಸಾಲಿನವರೆಗೆ ಮರುಹಂಚಿಕೆಯಾಗಿರುವ ಪ್ರಧಾನಮಂತ್ರಿ ಮತ್ಸ್ಯ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಮೀನು ಕೃಷಿಕೊಳಗಳ ನಿರ್ಮಾಣ ಒಟ್ಟು 4.03 ಹೆಕ್ಟೇರ್‌ಗುರಿ ಇದ್ದು, ಸಾಮಾನ್ಯರಿಗೆ 2.39 ಮತ್ತು ಪರಿಶಿಷ್ಟ ಜಾತಿ 1.64 ಹೆಕ್ಟೇರ್ ನೀಡಲಾಗುವುದು.
ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯಕ್ಕೆ ಒಟ್ಟು 8.60 ಹೆಕ್ಟೇರ್ ಗುರಿ ನಿಗದಿಪಡಿಸಿದ್ದು, ಸಾಮಾನ್ಯರಿಗೆ 4.80, ಸಾಮಾನ್ಯ ಮಹಿಳೆರಿಗೆ 1.80, ಪರಿಶಿಷ್ಟ ಜಾತಿಗೆ 1 ಹಾಗೂ ಪರಿಶಿಷ್ಟ ಪಂಗಡಕ್ಕೆ 1 ಹೆಕ್ಟೇರ್ ನೀಡಲಾಗುವುದು.
ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಯೋಜನೆಯಡಿ ಸಾಂಪ್ರದಾಯಿಕ ಮೀನುಗಾರರಿಗೆ ಎಫ್‌ಆರ್‌ಪಿ ಬದಲಿ ದೋಣಿ ನಿರ್ಮಾಣಕ್ಕಾಗಿ ಸಹಾಯ-01 ಘಟಕ ಗುರಿ ಇದ್ದು ಸಾಮಾನ್ಯರಿಗೆ ನೀಡಲಾಗುವುದು
ಮೀನುಮರಿ ಪಾಲನಾ ಘಟಕ ನಿರ್ಮಾಣ ಸಹಾಯ ಒಟ್ಟು 7.198 ಹೆಕ್ಟೇರ್ ಗುರಿ ಇದ್ದು, ಸಾಮಾನ್ಯರಿಗೆ 2.03, ಮಹಿಳೆಯರಿಗೆ 2,228 ಪರಿಶಿಷ್ಟ ಜಾತಿಗೆ 1 ಹಾಗೂ ಪರಿಶಿಷ್ಟ ಪಂಗಡಕ್ಕೆ 1.94 ಹೆಕ್ಟೇರ್ ನೀಡಲಾಗುವುದು.
ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 1 ಗುರಿ, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕೆ ಘಟಕ ಪರಿಶಿಷ್ಟ ಜಾತಿ 01 ಗುರಿ, ಹೊಸತಾದ ಅಲಂಕಾರಿಕಾ ಮೀನುಮಾರಾಟ ಮಳಿಗೆ ಸೇರಿದಂತೆ ಸಹಾಯ ಪರಿಶಿಷ್ಟ ಜಾತಿ 01 ಘಟಕ ನೀಡಲಾಗುವುದು.
ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತರು ಸೆ. 20 ರೊಳಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಬಹುದೆಂದು ಮೀನುಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
Watch Video: ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪನ: 600ಕ್ಕೂ ಹೆಚ್ಚು ಜನರು ಸಾವು, ಬೆಚ್ಚಿ ಬೀಳಿಸೋ ವೀಡಿಯೋ ಇಲ್ಲಿವೆ