Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅನಿರೀಕ್ಷಿತ ಅತಿಥಿ: ಪಾಕ್ ಡಗೌಟ್‌ನಲ್ಲಿ ಪ್ರತ್ಯಕ್ಷವಾಯ್ತು ದೈತ್ಯ ಹಾವು | Watch video

15/02/2026 11:55 AM

`SBI’ ಗ್ರಾಹಕರೇ ಗಮನಿಸಿ : ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ನಿಯಮಗಳು !

15/02/2026 11:51 AM

ರಾಜ್ಯದ `ಇ –ಸ್ವತ್ತು’ ಅರ್ಜಿದಾರರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಸಲ್ಲಿಕೆಯ ವಿವರಗಳು ಹೀಗಿವೆ !

15/02/2026 11:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ಯಶಸ್ವಿನಿ ಯೋಜನೆ’ ನೋಂದಣಿ ಗಡುವು ಮಾ.31 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ.!
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ಯಶಸ್ವಿನಿ ಯೋಜನೆ’ ನೋಂದಣಿ ಗಡುವು ಮಾ.31 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ.!

By kannadanewsnow5703/02/2025 6:16 AM

ಬೆಂಗಳೂರು : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸರ್ಕಾರ ಹಾಗೂ ಸಹಕಾರ ಇಲಾಖೆ ಪ್ರಕಟಣೆ ಹೊರಡಿಸಿದ್ದು ಹೊಸ ಸದಸ್ಯರನ್ನು ನೋಂದಾಯಿಸಲು/ನವೀಕರಣಗೊಳಿಸುವ ಸಲುವಾಗಿ ಅವಧಿಯನ್ನು ದಿನಾಂಕ:01-02-2025 ರಿಂದ ದಿನಾಂಕ:31-03-2025 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಯಶಸ್ವಿನಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್-2024 ಮತ್ತು ಜನವರಿ-2025 ರ ತಿಂಗಳುಗಳಲ್ಲಿ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ / ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು / ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದರಿಂದಾಗಿ ಯಶಸ್ವಿನಿ ನೋಂದಣಿಯಲ್ಲಿ ಹೆಚ್ಚಿನ ಪ್ರಗತಿ ಆಗಿರುವುದಿಲ್ಲವೆಂದು ಹಾಗೂ ನಿಗದಿಪಡಿಸಿರುವ ಗುರಿಯ ಪೈಕಿ ಇಲ್ಲಿಯವರೆಗೆ ಸುಮಾರು 10 ಲಕ್ಷ ಸದಸ್ಯರ ನೋಂದಣಿ ಮಾತ್ರವಾಗಿದ್ದು, ಇನ್ನೂ ಅನೇಕ ಸದಸ್ಯರು ನೋಂದಾಯಿಸಿಕೊಳ್ಳಲು ಆಸಕ್ತರಾಗಿರುವುದರಿಂದ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಲು 2024-25 ನೇ ಸಾಲಿನ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ/ನವೀಕರಣ ಅವಧಿಯನ್ನು ದಿನಾಂಕ: 01-02-2025 ರಿಂದ ದಿನಾಂಕ: 31-03-2025 ರವರೆಗೆ ವಿಸ್ತರಿಸಲು ನಿಬಂಧಕರು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯರನ್ನು ನೋಂದಾಯಿಸಲು/ನವೀಕರಣಗೊಳಿಸುವ ಸಲುವಾಗಿ ಅವಧಿಯನ್ನು ದಿನಾಂಕ:01-02-2025 ರಿಂದ ದಿನಾಂಕ:31-03-2025 ರವರೆಗೆ ವಿಸ್ತರಿಸಿ ಆದೇಶಿಸಿದೆ.

ಬೇಕಾದ ಅಗತ್ಯ ದಾಖಲೆಗಳು

ನವೀಕರಣ ಮಾಡಲು
1.ಯಶಸ್ವಿನಿ ಐಡಿ ಕಾರ್ಡು,

2.ಆಧಾರ್ ಕಾರ್ಡ್ ಜೆರಾಕ್ಸ್ (ನೋಂದಣಿ ಮಾಡಿಸುವ ಪ್ರತಿಯೋಬ್ಬ ಸದಸ್ಯರದ್ದು)

3.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಢದವರಿಗೆ ಜಾತಿ ಪ್ರಮಾಣ ಪತ್ರದ ನಕಲು.(ಕುಟುಂಬದ ಒಬ್ಬರದ್ದು)

ಹೋಸದಾಗಿ ನೋದಾಯಿಸಲು:-

1.ಸಹಕಾರ ಸಂಘದಲ್ಲಿ ಸದಸ್ಯತ್ವ ಹೋದಿರಬೇಕು.

2.ಕುಟುಂಬದ ರೇಷನ್ ಕಾರ್ಡ್ ಪ್ರತಿ ಜೆರಾಕ್ಸ್,

3.ಆಧಾರ್ ಕಾರ್ಡ್ ಜೆರಾಕ್ಸ್ (ನೋದವಣಿ ಮಾಡಿಸುವ ಪ್ರತಿಯೋಬ್ಬ ಸದಸ್ಯರದ್ದು)

4.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಢದವರಿಗೆ ಜಾತಿ ಪ್ರಮಾಣ ಪತ್ರದ ನಕಲು. (ಕುಟುಂಬದ ಒಬ್ಬರದ್ದು)

5. ಪ್ರತಿಯೊಬ್ಬರದ್ದು 2 ಕಾಪೀ ಪೋಟೊ.

ಸಹಕಾರ ಇಲಾಖೆ ವತಿಯಿಂದ ರಾಜ್ಯದ ಯಶಸ್ವನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಯಶಸ್ವಿನಿ ಯೋಜನೆಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು. ದಿ: 1/1/2024 ರಿಂದ ಯಶಸ್ವಿನಿ ನೋಂದಣಿ ಆರಂಭಗೊಂಡಿದ್ದು, ದಿ: 01-04-2025 ರಿಂದ 31/3/2026 ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ. ಸಹಕಾರ ಸಂಘದ ಸದಸ್ಯರು ಆದಷ್ಟು ಬೇಗ ಗ್ರಾಮಾಂತ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.500, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.100 ಹಾಗೂ ನಗರದ 4 ಸದಸ್ಯರ ಕುಟಂಬಕ್ಕೆ ವಾರ್ಷಿಕ ರೂ.1000 ನಿಗದಿ ಮಾಡಿದ್ದು, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.200 ಗಳಂತೆ ಮೊತ್ತ ಪಾವತಿಸಿ ನೊಂದಣಿ ಮಾಡಿಕೊಳ್ಳಬೇಕು.

ಯಶಸ್ವಿನಿ ಯೋಜನೆಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬAಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬAಧಿಸಿದ, ಕಣ್ಣಿನ, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬAಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯವಿರುತ್ತದೆ.

ಈ ಯೋಜನೆಯಡಿಯಲ್ಲಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು ರೂ.5 ಲಕ್ಷಕ್ಕೆ ನಿಗದಿಪಡಿಸಿಲಾಗಿರುತ್ತದೆ. ಸಹಕಾರ ಸಂಘದ ಸದಸ್ಯರಿಗೆ ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದ್ದು, ಫಲಾನುಭವಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆÀ ದಾಖಲಾಗುವ ಸಂದರ್ಭದಲ್ಲಿ ನೆಟ್‌ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ಮತ್ತು ಯೋಜನೆ ಅನ್ವಯವಾಗಿರುವುದನ್ನು ಆಸ್ಪತ್ರೆಗಳಲ್ಲಿ ಖಚಿತ ಪಡೆಸಿಕೊಂಡು ಚಿಕಿತ್ಸೆ ಪಡೆಯತಕ್ಕದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸದಸ್ಯರು ಚಿಕಿತ್ಸೆ ಪಡೆಯುವಾಗ ಪ್ರತಿಯೊಬ್ಬರು ತಮ್ಮ ಜಾತಿ ಪ್ರಮಾಬದ ಆರ್‌ಡಿ ನಂಬರ್ ತರುವುದು ಕಡ್ಡಾಯವಾಗಿದೆ.

Good news for the people of the state: The state government has extended the deadline for registration of 'Yashaswini Yojana' till March 31. ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇಂದು ಎರಡು ಹೊಸ ʻವಂದೇ ಭಾರತ್ ರೈಲುʼಗಳಿಗೆ ಪ್ರಧಾನಿ ಮೋದಿ ಚಾಲನೆ
Share. Facebook Twitter LinkedIn WhatsApp Email

Related Posts

ರಾಜ್ಯದ `ಇ –ಸ್ವತ್ತು’ ಅರ್ಜಿದಾರರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಸಲ್ಲಿಕೆಯ ವಿವರಗಳು ಹೀಗಿವೆ !

15/02/2026 11:40 AM2 Mins Read

BREAKING : ಮಹಾಶಿವರಾತ್ರಿಯಂದೇ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಸಾವು !

15/02/2026 11:26 AM1 Min Read
BREAKING NEWS

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

15/02/2026 11:26 AM1 Min Read
Recent News

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅನಿರೀಕ್ಷಿತ ಅತಿಥಿ: ಪಾಕ್ ಡಗೌಟ್‌ನಲ್ಲಿ ಪ್ರತ್ಯಕ್ಷವಾಯ್ತು ದೈತ್ಯ ಹಾವು | Watch video

15/02/2026 11:55 AM

`SBI’ ಗ್ರಾಹಕರೇ ಗಮನಿಸಿ : ಇಂದಿನಿಂದ ಜಾರಿಗೆ ಬರಲಿದೆ ಈ ಹೊಸ ನಿಯಮಗಳು !

15/02/2026 11:51 AM

ರಾಜ್ಯದ `ಇ –ಸ್ವತ್ತು’ ಅರ್ಜಿದಾರರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಸಲ್ಲಿಕೆಯ ವಿವರಗಳು ಹೀಗಿವೆ !

15/02/2026 11:40 AM

ಫಾಸ್ಟ್‌ಟ್ಯಾಗ್ ಬಳಕೆದಾರರೇ ಗಮನಿಸಿ: ವಾರ್ಷಿಕ ಪಾಸ್ ಹೆಸರಲ್ಲಿ ನಡೆಯುತ್ತಿದೆ ಭಾರೀ ವಂಚನೆ | Fake FASTag annual pass scam

15/02/2026 11:31 AM
State News
KARNATAKA

ರಾಜ್ಯದ `ಇ –ಸ್ವತ್ತು’ ಅರ್ಜಿದಾರರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಸಲ್ಲಿಕೆಯ ವಿವರಗಳು ಹೀಗಿವೆ !

By kannadanewsnow5715/02/2026 11:40 AM KARNATAKA 2 Mins Read

ಇ-ಸ್ವತ್ತು ಹೊಸ ನಿಯಮಗಳು ಜಾರಿಗೊಳ್ಳುವ ಮುನ್ನ ಸೃಜನೆಯಾಗಿರುವ ಕಟ್ಟಡಗಳು ಹಾಗೂ ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದು, ಇದರಿಂದ…

BREAKING : ಮಹಾಶಿವರಾತ್ರಿಯಂದೇ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಸಾವು !

15/02/2026 11:26 AM
BREAKING NEWS

BREAKING : ಮಂಡ್ಯದಲ್ಲಿ ಘೋರ ದುರಂತ : ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣ!

15/02/2026 11:26 AM

ವಾಹನ ಮಾಲೀಕರೇ ಗಮನಿಸಿ : `Fake FASTag’ ವಾರ್ಷಿಕ ಪಾಸ್ ಹಗರಣದ ಬಗ್ಗೆ `NHAI’ ಎಚ್ಚರಿಕೆ !

15/02/2026 11:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.