ಬೆಂಗಳೂರು : ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ (AB PMJAY CM’s Ark) ಅಡಿಯಲ್ಲಿ ಕರೋನರಿ ಆಂಜಿಯೋಗ್ರಾಮ್ ಚಿಕಿತ್ಸಾ ವಿಧಾನವನ್ನು ಸೇರ್ಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY CM’s Ark) ಯೋಜನೆಯನ್ನು 30.10.2018 ರಿಂದ 1650 ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ. ಯೋಜನೆಯ ಬಳಕೆಯ ಆಧಾರದ ಮೇಲೆ ಕಾರ್ಯವಿಧಾನಗಳ ಸಕಾಲಿಕ ಪರಿಷ್ಕರಣೆ ಮತ್ತು ಮಾರ್ಪಾಡುಗಳು ಅವಶ್ಯವಿರುತ್ತದೆ.
ಪರ್ಕ್ಯುಟೇನಿಯಸ್ ಟ್ರಾನ್ಸ್ಲ್ಯುಮಿನಲ್ ಕರೋನರಿ ಆಂಜಿಯೋಪ್ಲಾಸ್ಟಿ (PTCA) ಮತ್ತು ಕರೋನರಿ ಆರ್ಟರಿ ಬೈಪಾಸ್ ಸರ್ಜರಿ (CABG) ನಂತಹ ಹೃದ್ರೋಗ ವಿಶೇಷ ಕಾರ್ಯವಿಧಾನಗಳಿಗೆ ಪ್ರಾಥಮಿಕ ಹಂತದಲ್ಲಿ ರೋಗನಿರ್ಣಯಕ್ಕಾಗಿ ಕರೋನರಿ ಆಂಜಿಯೋಗ್ರಾಮ್ (CAG) ಅಗತ್ಯವಿರುತ್ತದೆ. ಪ್ರಸ್ತುತ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY CM’s Ark) ಯೋಜನೆಯ ಚಿಕಿತ್ಸಾ ವಿಧಾನದ ಪಟ್ಟಿಯಲ್ಲಿ ಕರೋನರಿ ಆಂಜಿಯೋಗ್ರಾಮ್ (CAG) ಚಿಕಿತ್ಸಾ ವಿಧಾನವು ಪ್ರತ್ಯೇಕವಾಗಿ ಲಭ್ಯವಿರುವುದಿಲ್ಲ. PTCA/CABG ಚಿಕಿತ್ಸಾ ವಿಧಾನಗಳ ಪ್ಯಾಕೇಜ್ ಅಡಿಯಲ್ಲಿಯ ಕರೋನರಿ ಆಂಜಿಯೋಗ್ರಾಮ್ (CAG) ಚಿಕಿತ್ಸಾ ವಿಧಾನವನ್ನು ಸೇರಿಸಲಾಗಿದೆ. ವಿರಳ ಮತ್ತು ಹೆಚ್ಚಿನ ವೆಚ್ಚದ ಕಾಯಿಲೆಗಳ (Rare and high cost diseases) ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ (SC/ST) ಫಲಾನುಭವಿಗಳಿಗೆ ಕರೋನರಿ ಆಂಜಿಯೋಗ್ರಾಮ್ (CAG) ಚಿಕಿತ್ಸಾ ವಿಧಾನವನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳಲಾಗಿದ್ದು ದಿನಾಂಕ 01.07.2024 ರಂದು ಸರ್ಕಾರದ ಆದೇಶ ಸಂಖ್ಯೆ: HFW 332 CGE 2023 ನ್ನು ಹೊರಡಿಸಲಾಗಿದೆ.
ಕರೋನರಿ ಆಂಜಿಯೋಗ್ರಾಮ್ (CAG) ಚಿಕಿತ್ಸಾ ವಿಧಾನವನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY CM’s Ark) ಯೋಜನೆಯಡಿಯಲ್ಲಿ ಆದ್ಯತಾ ಮನೆ ಮಂದಿ (PHH) ಫಲಾನುಭವಿಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ಚಿಕಿತ್ಸಾ ವಿಧಾನವಾಗಿ ಸೇರಿಸಲು ಪ್ರಸ್ತಾಪಿಸಲಾಗಿದೆ. ಈ ಮೊತ್ತವನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY CM’s Ark) ಯೋಜನೆಯಡಿಯ ಉಳಿತಾಯವಾಗುವ (Savings) ಅನುದಾದಡಿ ಭರಿಸಲು ಪ್ರಸ್ತಾಪಿಸಲಾಗಿದೆ.
ದಿನಾಂಕ: 14.10.2025 ರಂದು ನಡೆದ ತಾಂತ್ರಿಕ ಸಭೆಯಲ್ಲಿ ಹೃದ್ರೋಗ ತಜ್ಞರ ಶಿಫಾರಸ್ಸುಗಳು ಈ ಕೆಳಕಂಡಂತಿರುತ್ತದೆ.









