ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಫೆಬ್ರವರಿ 13 ರಂದು ಹಾವೇರಿ ಜಿಲ್ಲೆಯಲ್ಲಿ ಕಂದಾಯಗ್ರಾಮ ರಚನೆಯ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ನೋಂದಣಿ ದಾಖಲಾತಿ ಮತ್ತು ಇ-ಸ್ವತ್ತು ವಿತರಿಸಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 94ಡಿ ಅಡಿಯಲ್ಲಿ ನೀಡುವ ಹಕ್ಕುಪತ್ರ ಹಾಗೂ ನೋಂದಣಿ ಪ್ರಗತಿ ಪರಿಶೀಲನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 13 ಫೆಬ್ರವರಿ 2026 ರಂದು ಹಾವೇರಿ ಜಿಲ್ಲೆಯಲ್ಲಿ ಕಂದಾಯಗ್ರಾಮ ರಚನೆಯ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ನೋಂದಣಿ ದಾಖಲಾತಿ ಮತ್ತು ಇ-ಸ್ವತ್ತು ವಿತರಿಸಲು ಉದ್ದೇಶಿಸಲಾಗಿದೆ.
ಈ ಹಿನ್ನಲೆಯಲ್ಲಿ ತಹಶೀಲ್ದಾರರ ಹೆಸರಿಗೆ ಇ-ಸ್ವತ್ತು ತಯಾರಿಸುವಿಕೆ, ನೋಂದಣಿ ಹಾಗೂ ಫಲಾನುಭವಿಗಳ ಹೆಸರಿಗೆ ಇ-ಸ್ವತ್ತು ತಯಾರಿಸುವ ಬಗ್ಗೆ ಚರ್ಚಿಸಲು ಮಾನ್ಯ ಮಾನ್ಯ ಕಂದಾಯ ಸಚಿವರ ಅಧಕ್ಷತೆಯಲ್ಲಿ ದಿನಾಂಕ 29.01.2026 ರಂದು ಪೂರ್ವಾಹ್ನ 10.30 ಗಂಟೆಗೆ, ‘ಕೊಠಡಿ ಸಂಖ್ಯೆ 122, ವಿಕಾಸ ಸೌಧದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಈ ಕೆಳಕಂಡ ಇಲಾಖೆಯ ಪ್ರತಿನಿಧಿಗಳು/ಅಧಿಕಾರಿಗಳು ತಾಂತ್ರಿಕ ತಂಡ ಅಗತ್ಯ ಮಾಹಿತಿಯೊಂದಿಗೆ ಖುದ್ದು ಅಥವಾ ವಿಡಿಯೋ ಸಂವಾದದ ಮೂಲಕ ಹಾಜರಾಗುವಂತೆ ಕೋರಿದೆ.









