ಬೆಂಗಳೂರು: ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಈಗಾಗಲೇ ಪ್ರಾಣಿಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಈಗ ಪ್ರಾಣಿಗಳಲ್ಲದೇ ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಇತರೆ ವಸ್ತುಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ವ್ಯಕ್ತಿಯೊಬ್ಬರು ಕೇಳಿದಂತ ಮಾಹಿತಿ ಹಕ್ಕು ಅಧಿನಿಯಮ 2005ರ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ವಾಷಿಂಗ್ ಮೆಷಿನ್, ಫ್ರಿಡ್ಜ್, ಟ್ರಕ್ ಟಯರ್, ಅನ್ಯೂಮಿನಿಯಂ ಪೈಪ್, ಪಾತ್ರೆ, ಕಬ್ಬಿಣದ ಪೈಪ್, ಬೆಕ್ಕು, ನಾಯಿ, ಮೊಲವನ್ನು ಸಾಗಿಸಬಹುದಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಎಷ್ಟು ದರ ನಿಗದಿ?
ಟ್ರಕ್ ಟೈರ್ ಮೂರು ಯೂನಿಟ್ ಗಳೆಂದು ಪರಿಗಣಿಸಲಾಗುತ್ತದೆ. 60 ಕೆಜಿ ವರೆಗಿನವುಗಳು ಕೊಂಡೊಯ್ಯಬಹುದು. ರೆಫ್ರಿಜರೇಟರ್, ಬೈಸಿಕಲ್, ವಾಶಿಂಗ್ ಮೆಷಿನ್, ವೀಣೆ, ಕಾರ್ ಟೈರ್ ಗಳನ್ನು 2 ಯೂನಿಟ್ ಎಂಬುದಾಗಿ ಪರಿಗಣಿಸಲಾಗುತ್ತದೆ.
ಟೇಬಲ್ ಫ್ಯಾನ್, ಹಾರ್ಮೋನಿಯಂ, ಟಿವಿ, ಕಂಪ್ಯೂಟರ್ ಮಾನಿಟರ್, ಸಿಪಿಯು, ಬ್ಯಾಟರಿ, 25 ಲೀಟರ್ ಖಾಲಿ ಕಂಟೈನರ್ ಗಳನ್ನು 20 ಕೆಜಿವರೆಗೆ 1 ಯೂನಿಟ್ ಎಂಬುದಾಗಿ ಪರಿಗಣಿಸಲಾಗುತ್ತದೆ. ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ ಒಂದು ಯೂನಿಟ್ ನಂತೆ ಪರಿಗಣಿಸಲಾಗುತ್ತದೆ.
ನಾನ್ ಎಸಿ ಬಸ್ಸುಗಳಿಗೆ 1 ರಿಂದ 5 ಹಂತದವರೆಗೆ 5 ರೂಪಾಯಿಗಳ ದರವನ್ನು ನಿಗದಿ ಪಡಿಸಲಾಗಿದೆ. ಎಸಿ ಬಸ್ಸುಗಳಲ್ಲಿ 10 ರೂ ನಿಗದಿ ಪಡಿಸಲಾಗಿದೆ. 15 ರಿಂದ 55 ಹಂತದವರೆಗೆ ನಾನ್ ಎಸಿ ಬಸ್ಸಲ್ಲಿ 44 ರೂಪಾಯಿ, ಎಸಿ ಬಸ್ಸಿನಲ್ಲಿ 55 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.
ಸಾಕು ಪ್ರಾಣಿಗಳನ್ನು ಉಚಿತವಾಗಿ ಕೊಂಡೊಯ್ಯೋದಕ್ಕೆ ಅವಕಾಶವಿಲ್ಲ. ನಾಯಿಗೂ ಒಬ್ಬ ವಯಸ್ಕರ ದರವನ್ನು ನಿಗದಿ ಪಡಿಸಲಾಗಿದೆ. ಆ ದರವನ್ನು ನೀಡಿ ಕೊಂಡೊಯ್ಯಬೇಕು. ಇನ್ನೂ ನಾಯಿ ಮರಿ, ಬೆಕ್ಕು, ಪಂಜರದಲ್ಲಿರುವಂತ ಹಕ್ಕಿಗಳಿಗೆ ಮಕ್ಕಳ ದರ ನಿಗದಿ ಪಡಿಸಲಾಗಿದೆ.
ಇನ್ನೂ ಪ್ರಯಾಣಿಕರು 4 ಅಥವಾ 5 ಜನರ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೇ ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತ್ತಿದ್ದರೇ ಉಚಿತ ಸಾಗಾಣೆಯ ಒಬ್ಬ ಪ್ರಯಾಣಿಕರಿಗೆ ಮಾತ್ರ 30 ಕೆಜಿವರೆಗೆ ಅನ್ವಯಿಸುತ್ತದೆ. ಒಬ್ಬರು ಮಾತ್ರವೇ ಉಚಿತವಾಗಿ ಲಗೇಜ್ ಕೊಂಡೊಯ್ಯೋದಕ್ಕೆ ಅವಕಾಶವಿದೆ ಎಂಬುದಾಗಿ ತಿಳಿಸಲಾಗಿದೆ.