Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM

ಚಿನ್ನದ ಸಾಲ ಪಡೆದವರಿಗೆ ಭಾರೀ ಆಘಾತಕಾರಿ ಸುದ್ದಿ! ಏನು ಅಂತ ಗೊತ್ತಾದ್ರೆನೇ ಟೆನ್ಷನ್‌ ಆಗ್ತೀರಾ!

19/04/2026 1:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಇ-ಸ್ವತ್ತು’ ತಂತ್ರಾಂಶ 25 ದಿನಗಳಲ್ಲಿ ಸುಸ್ಥಿತಿಗೆ
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಇ-ಸ್ವತ್ತು’ ತಂತ್ರಾಂಶ 25 ದಿನಗಳಲ್ಲಿ ಸುಸ್ಥಿತಿಗೆ

By kannadanewsnow5731/01/2026 6:03 AM

ಬೆಂಗಳೂರು : ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಖಾತಾ ವಿತರಣೆಗೆ ತಂತ್ರಾಂಶದಲ್ಲಿ ಸಮಸ್ಯೆ ಇದ್ದು, 15 -25 ದಿನಗಳಲ್ಲಿ ಸರಿಪಡಿಸಿ ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬಿಜೆಪಿಯ ಕಿರಣ್ ಕುಮಾರ್ ಕೊಡ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯು ಗ್ರಾಮೀಣ ಭಾಗದ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ಸೌಲಭ್ಯ ದೊರಕುವಂತೆ ಮಾಡಬೇಕು ಎಂಬ ಉದ್ದೇಶದಿಂದ ಇ-ಸ್ವತ್ತು ಅಭಿಯಾನದಡಿ ಇ-ಸ್ವತ್ತು ತಂತ್ರಾಂಶ 2.0 ಅನ್ನು ಆರಂಭಿಸಿದೆ.

ಈ ನೂತನ ಇ-ಸ್ವತ್ತು ತಂತ್ರಾಂಶ 2.0 ಅನ್ನು ಕಳೆದ ಡಿಸೆಂಬರ್ ನಲ್ಲಿ ಪ್ರಾರಂಭಿಸಲಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಇ-ಸ್ವತ್ತು ತಂತ್ರಾಂಶ 1.0 & 2.0 ನಲ್ಲಿ 44,508 ಅರ್ಜಿಗಳ ಸ್ವೀಕೃತ ಮಾಡಲಾಗಿದೆ. ಅದರಲ್ಲಿ 7,978 ಅರ್ಜಿಗಳನ್ನು ಅನುಮೋದನೆ ಮಾಡಲಾಗಿದೆ. ಈ ತಂತ್ರಾಂಶದಲ್ಲಿ ಲೋಪಗಳನ್ನು ಬರುತ್ತಿದ್ದು, ಶೀಘ್ರದಲ್ಲಿಯೇ ಸರಿಪಡಿಸಲಾಗುವುದು.

ನಾವು ಯಾವುದೇ ತಂತ್ರಾಂಶವನ್ನು ಅನುಷ್ಠಾನಕ್ಕೆ ತರಬೇಕು ಎಂದರೆ ಅದಕ್ಕಾಗಿ ನಾವು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತಂಡಕ್ಕೆ ಮನವಿ ಮಾಡಬೇಕು. ಈ ತಂತ್ರಾಂಶದ ಲೋಪವನ್ನು ಸರಿಪಡಿಸಲು, ನಾವು ಅನುದಾನ ಬಿಡುಗಡೆ ಮಾಡಿದ್ದೇವೆ. ಹೆಚ್ಚಿನ ಮಾನವ ಸಂಪನ್ಮೂಲವನ್ನು ಒದಗಿಸಿದ್ದೇವೆ. ಆದರೆ ಕೇಂದ್ರದಿಂದ ಇದುವರೆಗೂ ಯಾವುದೇ ರೀತಿಯ ಸಕಾರಾತ್ಮಕ ಉತ್ತರ ಬಂದಿರುವುದಿಲ್ಲ. ಈ ಲೋಪಗಳನ್ನು ಪರಿಹರಿಸಬೇಕು ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025 ಅಡಿಯಲ್ಲಿ, 97 ಲಕ್ಷಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿಗೆ ಇ-ಖಾತಾ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶಕ್ಕೆ, ಇ-ಸ್ವತ್ತು 2.0 ನಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಇಲಾಖೆಗೆ ಸಮಯದ ಅಗತ್ಯವಿದೆ. ಶೀಘ್ರದಲ್ಲಿಯೇ ಬಾಕಿ ಇರುವ ಲೋಪಗಳನ್ನು ಸರಿ ಪಡಿಸಿ, ಗ್ರಾಮೀಣ ಜನರು ಗ್ರಾಮ ಪಂಚಾಯತಿ ಕಚೇರಿಗಳಿಗೆ ತೆರಳದೆ, ಮನೆಯಲ್ಲಿಯೇ ಕುಳಿತು ಆನ್‌ ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

"ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಖಾತಾ ವಿತರಣೆಗೆ ತಂತ್ರಾಂಶದಲ್ಲಿ ಸಮಸ್ಯೆ ಇದ್ದು, 15 -25 ದಿನಗಳಲ್ಲಿ ಸರಿಪಡಿಸಿ ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು."

– ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು pic.twitter.com/RZmbALJ9Qb

— DIPR Karnataka (@KarnatakaVarthe) January 30, 2026

Good news for the people of the state: `e-Svatthu' software to be up and running in 25 days
Share. Facebook Twitter LinkedIn WhatsApp Email

Related Posts

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM1 Min Read

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM2 Mins Read

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM2 Mins Read
Recent News

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM

ಚಿನ್ನದ ಸಾಲ ಪಡೆದವರಿಗೆ ಭಾರೀ ಆಘಾತಕಾರಿ ಸುದ್ದಿ! ಏನು ಅಂತ ಗೊತ್ತಾದ್ರೆನೇ ಟೆನ್ಷನ್‌ ಆಗ್ತೀರಾ!

19/04/2026 1:42 PM

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM
State News
KARNATAKA

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

By kannadanewsnow0519/04/2026 1:45 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೃಷಿಹೊಂಡದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವನ್ನಪ್ಪಿರುವ ಚಿಕ್ಕಮಗಳೂರು…

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.