ಶಿವಮೊಗ್ಗ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ತೆರಳುವಂತ ನಿರೀಕ್ಷೆಯಲ್ಲಿರುವಂತ ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ನೈರುತ್ಯ ರೈಲ್ವೆ ಇಲಾಖೆಯಿಂದ ಶಿವಮೊಗ್ಗ ಟು ಪ್ರಯಾಗ್ ರಾಜ್ ಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಭಕ್ತರು ತೆರಳುತ್ತಿದ್ದಾರೆ. ಇವರ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ದಿನಾಂಕ 22-02-2025ರಂದು ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿದೆ ಎಂದಿದೆ.
ವಿಶೇಷ ರೈಲು ಸಂಖ್ಯೆ 06223 ದಿನಾಂಕ 22-02-2025ರಂದು ಶನಿವಾರ ಸಂಜೆ 4.40ಕ್ಕೆ ಶಿವಮೊಗ್ಗದಿಂದ ಹೊರಟು, ದಿನಾಂಕ 24-02-2025 ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರಯಾಗ್ ರಾಜ್ ತಲುಪಲಿದೆ.
ಇನ್ನೂ ಇದೇ 06224 ರೈಲು ದಿನಾಂಕ 25-02-2025ರಂದು ಬೆಳಿಗ್ಗೆ 5.40ಕ್ಕೆ ಪ್ರಯಾಗ್ ರಾಜ್ ನಿಂದ ಹೊರಟು, ದಿನಾಂಕ 24-02-2025ರ ಬೆಳಿಗ್ಗೆ 6.40ಕ್ಕೆ ಶಿವಮೊಗ್ಗ ತಲುಪಲಿದೆ.
ಉತ್ತರ ಪ್ರದೇಶದ ಮಹಾಕುಂಭ ಮೇಳಕ್ಕೆ ತೆರಳೋ ಇಚ್ಛೆ ಇರುವಂತ ಶಿವಮೊಗ್ಗ ಜನರು https://equery.irctc.co.in ಗೆ ಭೇಟಿ ನೀಡಿ, ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
ALERT : ರಾಜ್ಯದ ಕಾರ್ಮಿಕರೇ ಎಚ್ಚರ : ಮೋಸದ ಕರೆಗಳು ಬಂದ್ರೆ ತಕ್ಷಣ ಅಧಿಕಾರಿಗಳ ಗಮನಕ್ಕೆ ತನ್ನಿ.!
BREAKING: ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕರ ಮೇಲೆ ಆಟೋ ಚಾಲಕನಿಂದ ಹಲ್ಲೆ: ಕುಸಿದು ಬಿದ್ದು ಸಾವು