ಬೆಂಗಳೂರು: ನಗರದ ಜನತೆಯ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ಬಿಎಂಟಿಸಿಯಿಂದ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಈ ಮೂಲಕ ಆ ಭಾಗದ ಜನರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ದಿನಾಂಕ: 17.10.2024 ರಿಂದ ಪರಿಚಯಿಸುತ್ತಿದ್ದು ವಿವರ ಕೆಳಕಂಡಂತಿದೆ :
ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ |
289-ಎಸ್ | ಕೆಂಪೇಗೌಡ ಬಸ್ ನಿಲ್ದಾಣ | ಬಾಗಲೂರು | ಹೆಬ್ಬಾಳ, ಯಲಹಂಕ, ವೆಂಕಟಾಲ, ಸಾತನೂರು | 2 |
ಸದರಿ ಮಾರ್ಗದ ವೇಳಾಪಟ್ಟಿ ಕೆಳಕಂಡಂತಿದೆ.
ಬಿಡುವ ವೇಳೆ | ||
ಕೆಂಪೇಗೌಡ ಬಸ್ ನಿಲ್ದಾಣ | ಬಾಗಲೂರು | |
0635, 0700, 1000, 1030, 1630, 1700, 2030, 2100 | 0515, 0535, 0800, 0830, 1455, 1525, 1830, 1900 |
ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲತಾಂಶ ಸುಧಾರಿಸಲು ‘ಶಿಕ್ಷಣ ಕೋಪೈಲಟ್ ಯೋಜನೆ’ ಜಾರಿ: ಸಚಿವ ಮಧು ಬಂಗಾರಪ್ಪ
ಬಾಲ್ಯ ವಿವಾಹ ತಡೆಗಟ್ಟುವ ಕಾನೂನನ್ನು ವೈಯಕ್ತಿಕ ಕಾನೂನುಗಳಿಂದ ತಡೆಯಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್