ಬೆಂಗಳೂರು : ಬೆಂಗಳೂರು ಜನತೆಗೆ ನಮ್ಮ ಮೆಟ್ರೋ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 2023ರಲ್ಲಿ ನನಮ್ಮ ಮೆಟ್ರೋ ಐಟಿ ಕಾರಿಡಾರ್ನಲ್ಲಿ ಮೆಟ್ರೋ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಹೌದು, ಮುಂದಿನ ವರ್ಷವೇ ನಮ್ಮ ಮೆಟ್ರೋ ಐಟಿ ಕಾರಿಡಾರ್ ನಲ್ಲಿ ವಾಣಿಜ್ಯ ರೈಲುಗಳು ಸಂಚರಿಸಲಿವೆ. ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ ನಡುವಿನ ಮಾರ್ಗವನ್ನು ಬೆಂಗಳೂರು ಮೆಟ್ರೋದಲ್ಲಿ ಐಟಿ ಕಾರಿಡಾರ್ ಎಂದು ಗುರುತಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾದರೆ ಪ್ರಯಾಣಿಕರಿಗೆ ಅನುಕೂಲ ಆಗಲಿದ್ದು, ಟ್ರಾಫಿಕ್ ಕಿರಿ ಕಿರಿ ತಪ್ಪಲಿದೆ. ಈ ಮಾರ್ಗದಲ್ಲಿ ಕಾಮಗಾರಿ ಈಗಾಗಲೇ ಮುಗಿಯುತ್ತಾ ಬಂದಿದ್ದು, . ಬಿಎಂಆರ್ಸಿಎಲ್ ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ.
ಇನ್ನೂ, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಬೆಂಗಳೂರಿಗೆ ಆಗಮಿಸಲಿದ್ದು, ನಮ್ಮ ಮೆಟ್ರೋ ಐಟಿ ಕಾರಿಡಾರ್ಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.