ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಹೊಸದಾಗಿ ಘೋಷಿಸಲಾದ ತಾಲೂಕಿನಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು Non FRU CHC ( Block PHC) ಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ಹೊಸ 8 ತಾಲ್ಲೂಕಿನ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು, 2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ 138 (ii) ರಲ್ಲಿ “ಹೊಸದಾಗಿ ಘೋಷಿಸಲಾಗಿರುವ ತಾಲ್ಲೂಕುಗಳಾದ ಹನೂರು, ಅಳ್ಳಾವರ, ಅಣ್ಣಿಗೇರಿ, ಮಸ್ಕಿ ಸಿರಿವಾರ, ಕಾಪು ಬಬಲೇಶ್ವರ, ಕೊಲಾರ ಬೇಳೂರು ಮತ್ತು ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ. ಆರ್ಥಿಕ ಇಲಾಖೆಯು ಆಯವ್ಯಯ ಘೋಷಣೆಗಳ ಅನುಷ್ಠಾನದ ಮಾರ್ಗಸೂಚಿಯಲ್ಲಿ ಈ ಯೋಜನೆಗೆ KKRDB, KMERC ಹಾಗೂ NHHI 15ನೇ ಹಣಕಾಸು ಆಯೋಗದಿಂದ ವೆಚ್ಚ ಭರಿಸಲು ತಿಳಿಸಲಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾದ ಅನುದಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾದ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ, ಹಾಗೂ ಇವುಗಳಿಗೆ ಅಗತ್ಯವಿರುವ ವಿವಿಧ ವೃಂದದೆ ಹುದ್ದೆಗಳನ್ನು ಸೃಜಿಸಲು ಮತ್ತು ಕಡಿಮೆ ಒತ್ತಡ ಇರುವ ಸ್ಥಳಗಳಿಂದ ಅವಶ್ಯವಿರುವ ಕೇಂದ್ರಗಳಿಗೆ ಸ್ಥಳಾಂತರಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ಇದರಲ್ಲಿ ಸಿರಿವಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ: 3 ರಲ್ಲಿ ಓದಲಾದ ಆದೇಶದಲ್ಲಿ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳನ್ನು ಅಗತ್ಯ ಹುದ್ದೆಗಳೊಂದಿಗೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ, ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ರೂ.2058.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ.
2025-26 ನೇ ಸಾಲಿನ ಆಯವ್ಯಯ ಕಂಡಿಕೆ 138 (ii) ರನ್ವಯ ಹೊಸದಾಗಿ ಘೋಷಣೆಯಾಗಿರುವ ತಾಲ್ಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ / ಸ್ಥಾಪಿಸುವ ಕುರಿತು ಘೋಷಿಸಲಾಗಿದೆ. ಆದರೆ ಆಯವ್ಯಯ ಘೋಷಣೆಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುವ ಪರಿಕಲ್ಪನೆ ಬದಲಿಗೆ non-FRU CHC (Block PAC) ಯನ್ನಾಗ ಉನ್ನತೀಕರಿಸಲು, ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರೆಗಳ ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವುದರೊಂದಿಗೆ Of ಘಟಕಗಳನ್ನು ಕಡಿಮೆ ಮಾಡಿ ಅಕ್ಕ-ಪಕ್ಕದ ಸ್ಥಳ ಲಭ್ಯವಿರುವುದನ್ನು ಬೆಳಸಿಕೊಂಡು ವಿನ್ಯಾಸಗೊಳಿಸಬಹುದು. ಪ್ರಸ್ತುತ, ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ NHM ಮತ್ತು ರಾಜ್ಯ ಅನುದಾನದಲ್ಲಿ ತೆಗೆದುಕೊಳ್ಳಲು ಪರಿಶೀಲನೆಯಲ್ಲಿದೆ. ಆದ್ದರಿಂದ, ಉಳಿದ 08 ತಾಲ್ಲೂಕುಗಳಲ್ಲಿ ಪೊನಂಪೇಟೆಯಲ್ಲಿ ಸ್ಥಾಪಿಸಲಾಗುವ ಹೊಸ ಸಮುದಾಯ ಆರೋಗ್ಯ ಕೇಂದ್ರದ ಬದಲಾಗಿ ಪೊನ್ನಂಪೇಟೆ ತಾಲ್ಲೂಕಿನ ಹುದುಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸುತ್ತಾ ಆಯವ್ಯಯ ಘೋಷಣೆಯಲ್ಲಿನ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು hon-FRU CHC (Block PHC) ಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸ್ವೀಕೃತವಾಗಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಈ ಹಿಂದಿನ ಪದ್ಧತಿಯ ಬದಲಾಗಿ non-FRU CHC (Block PHC ಗಳು) ಮಾತ್ರ ಸ್ಥಾಪಿಸುವ ಪ್ರಸ್ತಾವನೆಯ ನೆರೆಯ ತಮಿಳುನಾಡು ರಾಜ್ಯದಲ್ಲಿ ಅನುಸರಿಸುತ್ತಿರುವ non-FRU CHC (Block PHC) ಮಾದರಿಯಲ್ಲಿದ್ದು, ಪ್ರತಿ Block PHC ಯಲ್ಲಿ 5 ಎಂಬಿಬಿಎಸ್ ವೈದ್ಯರು ಇದ್ದರೆ, CHC ಯಲ್ಲಿ 1 ಎಂಬಿಬಿಎಸ್ ವೈದ್ಯರು + 3 ಅಥವಾ 4 ತಜ್ಞರು (ಸ್ತ್ರೀ ರೋಗ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು) ಇರುತ್ತಾರೆ. Block PHC ಯಲ್ಲಿ Major OT ಅಗತ್ಯವಿಲ್ಲದ ಕಾರಣ ನಿರ್ಮಾಣ ವೆಚ್ಚ ಕಡಿಮೆ ಇರುತ್ತದೆ. ಆದ್ದರಿಂದ, ಸದರಿ non FRU CHC (Block PHC) ಮಾದರಿಯನ್ನು ಪರಿಗಳು, ಆಯವ್ಯಯ ಘೋಷಣೆಯ ಬಾಕಿಯಿರುವೆ 08 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ non-FRU CHC (Block PHC) ಗಳನ್ನಾಗಿ ಮೇಲ್ದರ್ಜೆಗೇರಿಸಲು ಪರಿಗಣಿಸಿದಾಗ, ಅಸ್ತಿತ್ವದಲ್ಲಿರುವ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಗಣನೆಗೆ ತೆಗೆದುಕೊಂಡು ಕಟ್ಟಡ ಕಾಮಗಾರಿಗೆ ಅಂದಾಜು ಮೊತ್ತ ರೂ.575.00 ಲಕ್ಷಗಳಿಗೆ ಸೀಮಿತದಲ್ಲಿ, Minor OT, Labour room, preparation, scrub and sterile, 4-bed ward for women & 2 bed ward for Men, Office, Triage room, wellness centre, OPD consultation, BHE/LHV room, Injection Room, Dressing, Laboratory, Dispensary/Store, Toilet for male & female and 24 bed ward, staff room, ramp, staircase, Mortuary block, fire fighting, Medical gas pipeline, ಪೀಠೋಪಕರಣ ಮತ್ತು ಉಪಕರಣಗಳನ್ನು ಒಳಗೊಂಡಿರುತ್ತವೆ. ಸದರಿ ಕಟ್ಟಡ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನದಡಿ ನಿಗದಿಪಡಿಸಿರುವ ಪ್ರತಿ ಘಟಕದ ವೆಚ್ಚದ ಮಿತಿಯೊಳಗೆ ಕೈಗೊಳ್ಳಲು ತೀರ್ಮಾನಿಸಿ ಈ ಕೆಳಕಂಡಂತ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಆಯವ್ಯಯ ಕಂಡಿಕೆ 138 (1) ರಲ್ಲಿ “ಹೊಸದಾಗಿ ಘೋಷಿಸಲಾಗಿರುವ ತಾಲ್ಲೂಕುಗಳಾದ ಅರವರ, ಅಣಿಗೇರಿ, ಕಾಪು, ಬಬಲೇಶ್ವರ, ಕೊಲ್ದಾರ, ಚೇಳೂರು, ತೇರದಾಳದ ಮತ್ತು ಹುದುಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು non-FAUCHC (Non-First Referral Unit Community Health Centre) ಅಥವಾ Block PHC ಗಳನ್ನಾಗಿ ಮೇಲ್ದರ್ಜೆಗೇರಿಸಿ, ಪ್ರತಿ ಕಾಮಗಾರಿಗೆ ರೂ. 575.00 ಲಕ್ಷಗಳಿಗೆ ಮಿತಿಗೊಳಿಸಿ ಒಟ್ಟಾರ ರೂ.46.00 ನಲವತ್ತಾರು ಕೋಟಿ ರೂಪಾಯಿಗಳು ಮಾತ್ರ) ಕೋಟಿಗಳನ್ನು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಭರಿಸಿ ಕ್ರಮಕೈಗೊಳ್ಳಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಷರತ್ತುಗಳು-
1. Jeparedsen seagre non-FRU CHC (Non-First Referral Unit Community Health Centre) ಅಥವಾ Block PHC ಗಳನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆಯನ್ನು ಪಡೆಯತಕ್ಕದ್ದು.
2. ಮೇಲ್ದರ್ಜೆಗೇರಿಸುವ ಪ್ರತಿ ಕಟ್ಟಡ ಕಾಮಗಾರಿಗಳ ವಿವರವಾದ ಅಂದಾಜು ಪಟ್ಟಿಗಳೊಂದಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸತಕ್ಕದ್ದು,
3. ಈ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಹಾಗೂ ನಿಯಮಗಳನ್ನು ಅನುಸರಿಸಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸತಕ್ಕದ್ದು.
4. non-FRU CHC (Non-First Referral Unit Community Health Centre) epe Block PHC ne ಕಟ್ಟಡ ಕಾಮಗಾರಿ ಮತ್ತು ಮೂಲಭೂತ ಸೌಕರ್ಯಗಳಿಗೆ 15 ನೇ ಹಣಕಾಸು ಆಯೋಗದಡಿ ಅನುದಾನ ಭರಿಸತಕ್ಕದ್ದು.
5. non-FRU CHC (Non-First Referral Unit Community Health Centre) ope Block PHC ren ಅವಶ್ಯವಿರುವ ಹುದ್ದೆಗಳ ಸೃಜಿಸುವ ಸಂಬಂಧ ಹಾಗೂ ಇದಕ್ಕಾಗಿ ತಗಲುವ ವೆಚ್ಚ ರೂ.21.34 ಕೋಟಿಗಳನ್ನು ರಾಜ್ಯ ಸರ್ಕಾರದಿಂದ ಭರಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆ 294 ವೆಚ್ಚ-5/2025, ದಿನಾಂಕ: 17.6.2025 ಮತ್ತು ಸಚಿವ ಸಂಪುಟದ ಪ್ರಕರಣ ಸಂಖ್ಯೆ: ಸಿ.481/2025 ದಿನಾಂಕ: 02.7.2025 ರಲ್ಲಿನ ಅನುಮೋದನೆಯನ್ವಯ ಹೊರಡಿಸಲಾಗಿದೆ.
KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ