ಕೊಪ್ಪಳ: 2024-25 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಟ್ಟು 21,786 ರೈತರಿಗೆ ರೂ. 30.05 ಕೋಟಿ ಬೆಳೆವಿಮೆ ಪರಿಹಾರ ಮಂಜೂರಾಗಿದ್ದು, ಹಂತ ಹಂತವಾಗಿ ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮಾ ಆಗುವುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ರೈತರು ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ರಾಘವೇಂದ್ರ(9148442314) ಇವರನ್ನು ದೂರವಾಣಿ ಮೂಲಕ ಅಥವಾ ಕೊಪ್ಪಳದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಂಪರ್ಕಿಸಬಹುದು.
ರೈತರು ತಮ್ಮ ಮೊಬೈಲ್ ಒಳಗಡೆ ಗೂಗಲ್‌ನಲ್ಲಿ(Google) ಸಂರಕ್ಷಣೆ ಪೋರ್ಟಲ್ ನಲ್ಲಿಯೂ ಬೆಳೆವಿಮೆ ಅರ್ಜಿ ಸಂಖ್ಯೆ ಅಥವಾ ರೈತರು ಬೆಳೆವಿಮೆ ನೋಂದಣಿಯಲ್ಲಿ ನೀಡಿರುವ ಮೊಬೈಲ್ ನಂಬರ್ ನಿಂದ ಮಾಹಿತಿ ಪರಿಶೀಲಿಸಬಹುದು. ಅಲ್ಲದೇ, ರೈತರು ತಮ್ಮ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಕೊಪ್ಪಳ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.