ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಬಿಬಿಎಂಪಿ ( BBMP ) ಮತ್ತಿತರ ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಸ್ ಗಳನ್ನು ಹೊರತುಪಡಿಸಿ, ಇತರೆ ಪ್ರದೇಶಗಳ ಭೂಕಬಳಿಕ ವಿವಾದಗಳನ್ನು ತಕ್ಷಣದಿಂದಲೇ ಕೊನೆಗೊಳಿಸುವಂತೆ ರಾಜ್ಯಪತ್ರದಲ್ಲಿ ( Karnataka Gazette ) ಪ್ರಕಟಿಸಿದೆ. ಈ ಮೂಲಕ ಒತ್ತುವರೆ ಸಮಸ್ಯೆ ಎದುರಿಸುತ್ತಿರುವಂತ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದೆ.

BIG NEWS: ಸಂಸದ ಬಿ.ವೈ ರಾಘವೇಂದ್ರೇ ಬ್ಯಾಂಕ್ ಖಾತೆಗೂ ಕನ್ನ ಹಾಕಿದ ಹ್ಯಾಕರ್ಸ್: ಬರೋಬ್ಬರಿ 16 ಲಕ್ಷ ಧೋಖಾ.!

ಈ ಕುರಿತಂತೆ ಕರ್ನಾಟಕ ಭೂ ಕಬಳಿಕ ನಿಷೇಧ ತಿದ್ದುಪಡಿ ವಿಧೇಯಕ 2022ರ ( Karnataka Prohibition of Land Grabbing Amendment Bill, 2022 ) ಅಧಿಕೃತ ರಾಜ್ಯ ಪತ್ರ ಪ್ರಕಟಿಸಿದೆ. ಈ ಗೆಜೆಟ್ ಅಧಿಸೂಚನೆಯಲ್ಲಿ 2014ರ ಕರ್ನಾಟಕ ಅಧಿನಿಯಮ 38ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊರಡಿಸಿರುವಂತ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯ 2022ರ ಅನುಸಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳ ಮಿತಿಗಳನ್ನು ಹೊರತುಪಡಿಸಿ, ಇತರ ಪ್ರದೇಶಗಳಲ್ಲಿನ ಭೂ ಕಬಳಿಕೆಗೆ ಸಂಬಂಧಿಸಿದ ಬಾಕಿ ವಿವಾದಗಳು ತಕ್ಷಣದಿಂದ ಕೊನೆಗೊಳ್ಳತಕ್ಕದ್ದು ಎಂದಿದೆ.

ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಪಕ್ಷ’ ಅಡ್ರೆಸ್ ಗೆ ಇರೋದಿಲ್ಲ – ಯಡಿಯೂರಪ್ಪ

ಸರ್ಕಾರ ಪ್ರಕಟಿಸಿರುವಂತ ರಾಜ್ಯ ಪತ್ರದ ತಿದ್ದುಪಡಿ ನಿಯಮವು ಈ ಕೂಡಲೇ ಜಾರಿಗೆ ಬರುವಂತೆ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಅರಣ್ಯ ಒತ್ತುವರಿ ದಾವೆಯಿಂದ ಬೆಂಗಳೂರು ಅಲೆಯುತ್ತಿದ್ದ ಅಸಂಖಅಯಾತ ರೈತರ ಸಮಸ್ಯೆಗೆ ಪರಿಹಾರ ದೊರೆತಂತೆ ಆಗಿದೆ.

Share.
Exit mobile version