ಬೆಂಗಳೂರು: ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ ಅವರ ಶವಸಂಸ್ಕಾರಕ್ಕೆ ಸಮರ್ಪಕ ಜಾಗ ಕೊಡದೆ ಕಾಂಗ್ರೆಸ್ಸಿಗರು ಅವಮಾನ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ( Siddaramaiah ) ಮತ್ತು ರಾಹುಲ್ ಗಾಂಧಿಯವರು ( Rahul Gandhi ) ಉತ್ತರ ಕೊಡಬೇಕು. ಕಾಂಗ್ರೆಸ್ಸಿಗರಿಗೆ ಪರಿಶಿಷ್ಟ ಜಾತಿ, ಪಂಗಡದ ಜನರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ( BS Yediyurappa ) ಅವರು ತಿಳಿಸಿದರು.

ವಿಜಯನಗರದ ಹೊಸಪೇಟೆಯಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಸರ್ವೇ ಪ್ರಕಾರ ದೇಶದ ಶೇ 73ರಷ್ಟು ಜನರು ಮೋದಿಜಿ ಅವರ ಪರವಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ( Karnataka Assembly Election ) ಕಾಂಗ್ರೆಸ್ ( Congress ) ಅಡ್ರೆಸ್ ಇರುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.

BIGG NEWS: BDA ನನಗೆ ಬದಲಿ ನಿವೇಶನ ಕೊಡಲೇಬೇಕು; ಆರಗ ಜ್ಞಾನೇಂದ್ರ

ಇಡೀ ಪ್ರಪಂಚವೇ ಮೆಚ್ಚುವ ನರೇಂದ್ರ ಮೋದಿಜಿ ಅವರ ಎದುರು ರಾಹುಲ್ ಗಾಂಧಿ ಅವರು ಒಬ್ಬ ಬಚ್ಚಾ ಇದ್ದಂತೆ ಎಂದ ಅವರು, ಭಾಷಣದಲ್ಲಿ ಕಾಂಗ್ರೆಸ್‍ನ ರಾಹುಲ್ ಗಾಂಧಿಯವರ ಹೆಸರು ಹೇಳಲು ನಾನು ಸಿದ್ಧನಿರಲಿಲ್ಲ. ವಿಶ್ವವೇ ಮೆಚ್ಚಿಕೊಂಡ ಮಹಾನ್ ನಾಯಕ ಮೋದಿಜಿ ಅವರ ಬಗ್ಗೆ ರಾಹುಲ್ ಗಾಂಧಿ ಅವರು ಹಗುರವಾಗಿ ಮಾತನಾಡಿದ್ದಾರೆ. ಅದಕ್ಕಾಗಿ ಈ ರೀತಿ ಮಾತನಾಡಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಉತ್ತರ ಕೊಟ್ಟರು.

ಮೋದಿಜಿ ದೇವದುರ್ಲಭ ನಾಯಕರು. ಅವರ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಪ್ರಪಂಚವೇ ಅಚ್ಚರಿ ಮತ್ತು ಗೌರವದಿಂದ ನೋಡುತ್ತಿದೆ. ಅವರ ವಿರುದ್ಧ ಯಾರಾದರೂ ಹಗುರವಾಗಿ ಮಾತನಾಡಿದರೆ ಅದನ್ನು ಪ್ರತಿಭಟಿಸಬೇಕು; ಉತ್ತರ ಕೊಡಬೇಕು ಎಂದು ಅವರು ಕಾರ್ಯಕರ್ತರಿಗೆ ಸೂಚಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ. ಈ ಭಾಗದ ಎಲ್ಲ 10 ಅಸೆಂಬ್ಲಿ ಸ್ಥಾನಗಳು ನಮ್ಮದಾಗಬೇಕು. ಅದಕ್ಕಾಗಿ ಮಹಿಳೆಯರು, ಯುವಕರ ಸಂಘಟನೆ ಅನಿವಾರ್ಯ. ಪರಿಶಿಷ್ಟ ಜಾತಿ, ಪಂಗಡದ ಜನರ ವಿಶ್ವಾಸ ಗಳಿಸಿಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಚುನಾವಣೆ ಸಂಬಂಧ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಂದು ತಿಳಿಸಿದರು.

BIGG NEWS : ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್ : ಚಾಲಕ, ಪ್ರಯಾಣಿಕರಿಗೆ ಗಾಯ

ಮೀಸಲಾತಿ ಸಂಬಂಧ ಬಸವರಾಜ ಬೊಮ್ಮಾಯಿಯವರು ಐತಿಹಾಸಿಕ ತೀರ್ಮಾನ ಮಾಡಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದ ಅವರು, ಮೀಸಲಾತಿ ಕುರಿತ ನಿರ್ಧಾರವನ್ನು ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ತಿಳಿಸಬೇಕು ಎಂದರು.

ಬಿಜೆಪಿ ಸಾಧನೆ ಮತ್ತು ಕಾರ್ಯಕ್ರಮಗಳ ಕುರಿತು ಮನೆಮನೆಗೆ ತಿಳಿಸುವ ಕಾರ್ಯವನ್ನು ಮುಖಂಡರು ಮತ್ತು ಕಾರ್ಯಕರ್ತರು ಮಾಡಬೇಕು. ಆಗ ಮಾತ್ರ ನಾವು 150 ಕ್ಷೇತ್ರ ಗೆಲ್ಲಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯನಗರ ಜಿಲ್ಲೆ ಮಾಡಿದ್ದೇವೆ. 10ಕ್ಕೆ 10 ಕ್ಷೇತ್ರಗಳನ್ನು ನಮ್ಮದೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Share.
Exit mobile version