ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರ ( MP BY Vijayendra ) ಅವರ ಬ್ಯಾಂಕ್ ಖಾತೆಗೂ, ಆನ್ ಲೈನ್ ವಂಚಕರು ಕನ್ನ ಹಾಕಿದ್ದಾರೆ.  ಮೂಲಕ ಬರೋಬ್ಬರಿ 16 ಲಕ್ಷ ಲಪಟಾಯಿಸಿರೋದಾಗಿ ತಿಳಿದು ಬಂದಿದೆ.

ಈ ಕುರಿತಂತೆ ಮಾತನಾಡಿರುವಂತ ಸಂಸದ ಬಿ.ವೈ ರಾಘವೇಂದ್ರ ಅವರು, ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಗ್ರಾಹಕರು ಕೂಡ ಎಚ್ಚರಿಕೆ ವಹಿಸಬೇಕಿದೆ ಎಂದರು.

BIGG NEWS: BDA ನನಗೆ ಬದಲಿ ನಿವೇಶನ ಕೊಡಲೇಬೇಕು; ಆರಗ ಜ್ಞಾನೇಂದ್ರ

ಬ್ಯಾಂಕ್ ನಲ್ಲಿ ಖಾತೆ ( Bank Account ) ಹೊಂದಿರುವಂತ ಪ್ರತಿಯೊಬ್ಬರು ಆನ್ ಲೈನ್ ವಂಚಕರ ( Online Scam ) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಒಟಿಪಿ ನಂಬರ್ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೇ ಕೊಡಲೇ ಬಾರದು. ಈಗ ವಾಟ್ಸಾಪ್ ಮೂಲಕವೂ ಒಟಿಪಿ ಕೇಳುತ್ತಿದ್ದಾರೆ. ಯಾರೂ ಕೊಡಬಾರದು ಎಂದರು.

ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹೊಂದಿರುವಂತ ಖಾತೆಯಿಂದ 16 ಲಕ್ಷ ಹಣ ದಿಢೀರ್ ವರ್ಗಾವಣೆಗೊಂಡಿತ್ತು. ಹೀಗೆ ವರ್ಗಾವಣೆಗೊಂಡ ಹಣ ನಾನು ಮಾಡಿದ್ದಲ್ಲ. ಈ ಸಂಬಂಧ ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ನನ್ನ ಬ್ಯಾಂಕ್ ಖಾತೆಗೆ ಕನ್ನ ಹಾಕಿದಂತ ಹ್ಯಾಕರ್ ಒಬ್ಬರನ್ನು ಪತ್ತೆ ಹಚ್ಚಿ, ಬಂಧಿಸಿದರು. ಆ ಬಳಿಕ ನನ್ನ ಖಾತೆಯಿಂದ ಲಪಟಾಯಿಸಿದಂತ ಹಣ ವಾಪಾಸ್ ಬಂತು ಎಂದು ಹೇಳಿದರು.

BIGG NEWS : ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್ : ಚಾಲಕ, ಪ್ರಯಾಣಿಕರಿಗೆ ಗಾಯ

Share.
Exit mobile version