ಬೆಂಗಳೂರು : 2024-25ನೇ ಸಾಲಿನಲ್ಲಿ ಸಂಘದ ವಸತಿ ಶಾಲೆ/ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಬೋಧಕ ಸಿಬ್ಬಂದಿಗಳ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆ/ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ 2024-25 ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಮಾರ್ಗಸೂಚಿಯನ್ನು ಉಲ್ಲೇಖ(1) ರ ಸರ್ಕಾರದ ಆದೇಶದೊಂದಿಗೆ ಹೊರಡಿಸಲಾಗಿರುತ್ತದೆ.
ಉಲ್ಲೇಖ(2)ರ ಸರ್ಕಾರದ ಸಾರ್ವತ್ರಿಕ ವರ್ಗಾವಣಾ ಮಾರ್ಗಸೂಚಿ 2023-24 ರನ್ವಯ ದಿನಾಂಕ: 25.07.2024 ರಿಂದ ದಿನಾಂಕ: 28.07.2024 ರ ಸಂಜೆ 6.00 ರವರೆಗೆ ಸಂಘದ ಎಸ್.ಎಂ.ಎಸ್ ತಂತ್ರಾಂಶದಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಉಲ್ಲೇಖ(3)ರ ಈ ಕಛೇರಿ ಅಧಿಕೃತ ಜ್ಞಾಪನದಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಅದರಂತೆ ಸಂಘದ ಅಧೀನದ ವಸತಿ ಶಾಲೆ/ಕಾಲೇಜುಗಳ ಖಾಯಂ ಬೋಧಕ ಸಿಬ್ಬಂದಿಗಳ ವರ್ಗಾವಣೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ದಾಖಲೆಗಳ ಆಧಾರದ ಮೇಲೆ ಪಡೆದಿರುವ ಅಂಕಗಳ ಪ್ರತ್ಯೇಕ ತಾತ್ಕಾಲಿಕ ಪಟ್ಟಿಯನ್ನು ನಂತರ ಹೊರಡಿಸಲಾಗುವುದು. ಸದರಿ ಪಟ್ಟಿಯನ್ವಯ ಉಲ್ಲೇಖ(1)ರ ಸರ್ಕಾರದ ಆದೇಶದಂತೆ ಶೇ 6% ರಷ್ಟು ವರ್ಗಾವಣೆ ಮಿತಿಗೊಳಿಸಿರುವ ಹಿನ್ನಲೆಯಲ್ಲಿ ಈ ಕೆಳಕಂಡಂತೆ ಜೇಷ್ಠತೆಯ ಆಧಾರದ ಮೇಲೆ ದಿನಾಂಕ:30.07.2024 ರಂದು ಸಂಘದ ಕೇಂದ್ರ ಕಛೇರಿ 1ನೇ ಮಹಡಿ ತಾಂತ್ರಿಕ ಶಾಖೆಯ ಸಭಾಂಗಣ ಇಲ್ಲಿ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗೆ ಹಾಜರಾಗಲು ಈ ಕೆಳಕಂಡ ಷರತ್ತುಗಳನ್ವಯ ಭಾಗವಹಿಸಲು ತಿಳಿಸಿದೆ.
1. ವೇಳಾಪಟ್ಟಿ ಅನುಸಾರ ನಿಗಧಿಪಡಿಸಿದ ಸಮಯ ಹಾಗೂ ಸ್ಥಳದಲ್ಲಿ ಒಂದು ಗಂಟೆ ಮುಂಚಿತವಾಗಿ ವರದಿ ಮಾಡಿಕೊಳ್ಳುವುದು.
2. ಸಾರ್ವತ್ರಿಕ ವರ್ಗಾವಣೆಗೆ ಸಂಘದ ಎಸ್.ಎಂ.ಎಸ್ ತಂತ್ರಾಂಶದಲ್ಲಿ ಲಗತ್ತಿಸಿರುವ ಪೂರಕ ದಾಖಲೆಗಳ ಮೂಲ ಪ್ರತಿಗಳನ್ನು ಕೌನ್ಸಿಲಿಂಗ್ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು, ಒಂದು ವೇಳೆ ಮೂಲ ಪ್ರತಿ ಲಭವಿಲ್ಲದಿದ್ದಲ್ಲಿ ಅಂತಹ ಸಿಬ್ಬಂದಿಗಳ ಅರ್ಹತೆಯನ್ನು ಪರಿಗಣಿಸುವುದಿಲ್ಲ. ಅವುಗಳನ್ನು ಹೊರತುಪಡಿಸಿ ಹೆಚ್ಚುವರಿ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.
3. ಕೌನ್ಸಿಲಿಂಗ್‌ಗೆ ಹಾಜರಾಗುವ ಸಿಬ್ಬಂದಿಗಳು ತಾವು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಪ್ರಾಂಶುಪಾಲರಿಂದ ದೃಢೀಕರಿಸಿರಬೇಕು. ಪತಿ-ಪತ್ನಿ ಪ್ರಕರಣಕ್ಕೆ ಸಂಬಂದಿಸಿದಂತೆ ಹಾಗೂ ನೌಕರರ ಅವಲಂಬಿತರ ಗುರುತಿನ ಪ್ರಮಾಣ ಪತ್ರಗಳನ್ನು ಹಾಜರುಪಡಿಸತಕ್ಕದ್ದು.
4. ಪ್ರಸ್ತುತ ಸಿದ್ದಪಡಿಸಿರುವ ಪಟ್ಟಿಯನ್ನು ಸಲ್ಲಿಸಿರುವ ದಾಖಲೆಗಳನುಸಾರ ಮಾಡಲಾಗಿದ್ದು, ಮೂಲ ದಾಖಲಾತಿ ಪರಿಶೀಲನೆಯ ಸಮಯದ ನಂತರ ಪಟ್ಟಿ ಬದಲಾವಣೆಯಾಗುವ ಸಂಭವವಿದ್ದು, ಇದಕ್ಕೆ ಎಲ್ಲಾ ಸಿಬ್ಬಂದಿಗಳು ಸಹಕರಿಸಲು ತಿಳಿಸಿದೆ.
5. ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗೆ ಹಾಜರಾಗುವ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ದಿನಾಂಕದಂದು ಮಾತ್ರ ಒ.ಒ.ಡಿ ಎಂದು ಪರಿಗಣಿಸುವುದು.
6. ಅರ್ಜಿ ಸಲ್ಲಿಸಿ, ಪಟ್ಟಿಯಲ್ಲಿ ಜೇಷ್ಠತೆ ಹೊಂದಿರುವ ಸಿಬ್ಬಂದಿಗಳು ಮಾತ್ರ ಕೌನ್ಸಿಲಿಂಗ್ ಸಮಯದಲ್ಲಿ ಭಾಗವಹಿಸಬೇಕು, ಅರ್ಜಿ ಸಲ್ಲಿಸಿ ಜೇಷ್ಠತೆ ಹೊಂದದೇ ಇರುವ ಯಾವುದೇ ಸಿಬ್ಬಂದಿ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಅಲ್ಲದೇ ಸದರಿ ಸಿಬ್ಬಂದಿಗಳ ಕೌನ್ಸಿಲಿಂಗ್ ಕೊಠಡಿ ಹಾಗೂ ಪ್ರಾಂಗಣದಲ್ಲಿ ಪೋಷಕರನ್ನಾಗಲೀ ಅಥವಾ ಇತರರನ್ನಾಗಲೀ ಕರೆತರತಕ್ಕದ್ದಲ್ಲ.
7. ಕೌನ್ಸಿಲಿಂಗ್ ಪ್ರಕ್ರಿಯೆಗೆ ನಿಗದಿತ ಸ್ಥಳ ಹಾಗೂ ಸಮಯದಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಗೈರು ಹಾಜರಾದಲ್ಲಿ ಅಂತಹ ಸಿಬ್ಬಂದಿಗಳಿಗೆ ಮರು ಅವಕಾಶ ನೀಡುವುದಿಲ್ಲ.
8. ಕೌನ್ಸಿಲಿಂಗ್ ಪ್ರಕ್ರಿಯೆಗೆ ಸಿಬ್ಬಂದಿಯ ಪರವಾಗಿ ಯಾವುದೇ ಕಾರಣಕ್ಕೂ ಬೇರೊಬ್ಬ ನೌಕರ /ವ್ಯಕ್ತಿ ಹಾಜರಾಗಲು ಅವಕಾಶವಿರುವುದಿಲ್ಲ.
9. ಕೌನ್ಸಿಲಿಂಗ್ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಜರಾತಿ ವಹಿಯಲ್ಲಿ ಹಾಗೂ ಸ್ಥಳವನ್ನು ಆಯ್ಕೆ ಮಾಡಿಕೊಂಡ ನಂತರ ಸ್ಥಳ ನಿಯುಕ್ತಿ ವಹಿಯಲ್ಲಿ ತಾವು ಆಯ್ಕೆ ಮಾಡಿಕೊಂಡಿರುವ ಸ್ಥಳದ ಬಗ್ಗೆ ಖಚಿತ ಪಡಿಸಿಕೊಂಡು ಸ್ವೀಕೃತಿ ಪಡೆದು ಸಹಿ ಮಾಡುವುದು.
10. ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಸಂದರ್ಭದಲ್ಲಿ ಒಮ್ಮೆ ಆಯ್ಕೆ ಮಾಡಿಕೊಂಡ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಯಾವುದೇ ರೀತಿಯ ಒತ್ತಡ ತಂದಲ್ಲಿ ಅವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು.
11. ಸರ್ಕಾರವು ನಿಗಧಿಪಡಿಸಿದ ಮಾನದಂಡಗಳ ಅನ್ವಯ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಸ್ಥಳಗಳನ್ನು ನಮೂದಿಸಿದ್ದು, ಸದರಿ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುವುದು, ಯಾವುದೇ ಕಾರಣಕ್ಕೂ ವಾಗ್ವಾದಕ್ಕೆ ಅವಕಾಶವಿರುವುದಿಲ್ಲ.
12. ಕೌನ್ಸಿಲಿಂಗ್ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಯಾವುದೇ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಗಳನ್ನು ಪಾವತಿಸುವುದಿಲ್ಲ.