ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಶುಕ್ರವಾರ ಬಿಡುಗಡೆಯಾಗಬೇಕಿದ್ದಂತ ಹೆಚ್ಚುವರಿ ಶಿಕ್ಷಕರ ಅಂತಿಮ ಕಡು ಪಟ್ಟಿಯನ್ನು ಜನವರಿ 10ರಂದು ಪ್ರಕಟಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಸಂಬಂಧ ಮಾಹಿತಿ ನೀಡಿರುವಂತ ಶಿಕ್ಷಣ ಇಲಾಖೆಯು, ತಾಂತ್ರಿಕ ಕಾರಣದಿಂದಾಗಿ ಶಿಕ್ಷಕರ ವರ್ಗಾವಣೆ ಪಟ್ಟಿಯನ್ನು ಪ್ರಕಚಿಸಲು ಸಾಧ್ಯವಾಗಿಲ್ಲ. ಡಿಸೆಂಬರ್ 12ರಂದೇ ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ಇದೀಗ ವಿಭಾಗಿಯ ಸಹ ನಿರ್ದೇಶಕರು ಹಾಗೂ ಅಹವಾಲು ಸ್ವೀಕಾರ ಪ್ರಾಧಿಕಾರಗಳು ಅಹವಾಲು ಪರಿಶೀಲಿಸಿ, ಅಂತಿಮ ಪಟ್ಟಿ ಪ್ರಕಟಿಸಲಿದೆ.
ಹೀಗಾಗಿ ತಾಂತ್ರಿಕ ಕಾರಣದಿಂದ ವಿಳಂಬವಾದಂತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಹೆಚ್ಚುವರಿ ಶಿಕ್ಷಕರ ಅಂತಿಮ ಪಟ್ಟಿಯು ಜನವರಿ 10ರಂದು ಪ್ರಕಟವಾಗಲಿದೆ.
BIGG NEWS : ಜ.12 ರಂದು `ರಾಷ್ಟ್ರೀಯ ಯುವಜನ ಉತ್ಸವ’ : ಸಿಎಂ ಬೊಮ್ಮಾಯಿರಿಂದ ಲೋಗೋ ಮತ್ತು ಮ್ಯಾಸ್ಕಾಟ್ ಬಿಡುಗಡೆ
ಮುಕ್ತ ವಿವಿ ವ್ಯಾಸಂಗದ ನಿರೀಕ್ಷೆಯಲ್ಲಿದ್ದ ಮಹಳೆಯರಿಗೆ ಗುಡ್ ನ್ಯೂಸ್: KSOUನಿಂದ ಶೇ.15ರಷ್ಟು ಶುಲ್ಕ ವಿನಾಯಿತಿ