ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಎಸ್ ಎಸ್ ಎಲ್, ಪಿಯುಸಿ, ಡಿಪ್ಲೋಮಾ, ಪದವಿ ಸೇರಿದಂತೆ ಇತರೆ ಪರೀಕ್ಷೆಯಲ್ಲಿ ಉತ್ತೀರ್ಣರಾದಂತ ಎಸ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ. ಅದೇ ಪ್ರೋತ್ಸಾಹ ಧನ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದಿದೆ.
ಎಸ್ ಎಸ್ ಎಲ್ ಸಿಯಲ್ಲಿ ಶೇ.60ರಿಂದ ಶೇ.75ರಷ್ಟು ಅಂಕ ಪಡೆದಂತ ವಿದ್ಯಾರ್ಥಿಗಳಿಗೆ ರೂ.7,500 ಹಾಗೂ ಶೇ.75ಕ್ಕಿಂತ ಮೇಲ್ಪಟ್ಟವರಿಗೆ ರೂ.15,000 ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಿದೆ.
ಇನ್ನೂ ಪಿಯುಸಿ, ಡಿಪ್ಲೋಮ ವಿದ್ಯಾರ್ಥಿಗಳಿಗೆ ರೂ.20,000, ಪದವಿಗೆ ರೂ.25,000, ಸ್ನಾತಕೋತ್ತರ ಪದವಿಗೆ ರೂ.30,000, ವೃತ್ತಿಪರ ಪದವಿಗೆ ರೂ.35,000 ಹಾಗೂ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪಿಜಿ ಕೋರ್ಸ್ ಗಳ ವಿವಿಧ ವಿಷಯಗಳಲ್ಲಿ 1 ರಿಂದ 5ನೇ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ರೂ.50,000 ನೀಡುವುದಾಗಿ ತಿಳಿಸಿದೆ.








