ಪುರಸಭಾ ವ್ಯಾಪ್ತಿಯ ಸಾರ್ವಜನಿಕರು/ಆಸ್ತಿ ಮಾಲೀಕರಿಗೆ ನಗರ ಸ್ಥಳೀಯ ಸಂಸ್ಥೆಗಳ ಇ-ಖಾತಾ ದಾಖಲೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಅತಿ ಸರಳವಾಗಿ ಇ-ಖಾತಾ ಸೇವೆಯನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗಧಿತ ಕಾಲಾವಧಿಯಲ್ಲಿ ಪಡೆಯಬಹುದಾಗಿದೆ.
ಇ-ಆಸ್ತಿ ತಂತ್ರಾಂಶವನ್ನು ರೂಪಿಸಿದ್ದು, ಅದರಂತೆ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿರುತ್ತದೆ. ಸಾರ್ವಜನಿಕರು ಈ ಮಾಹಿತಿಯನ್ನು ನೇರವಾಗಿ ವೀಕ್ಷಿಸಬಹುದಾಗಿದೆ ಮಾಹಿತಿಗಳ ಬಗ್ಗೆ ತಕರಾರು ಇದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದಾಗಿದ್ದು, ನಮೂದಿಸಿದ ಮಾಹಿತಿಯ ನಿಖರತೆಯನ್ನು ಪುರಸಭೆ ಪರಿಶೀಲಿಸಿ ಅನುಮೋದಿಸುವುದು.
ಅಂತಿಮ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕುಳಿತು ಪಡೆಯಬಹುದಾಗಿದೆ ಸಾರ್ವಜನಿಕರು ಇ-ಖಾತಾ ಪಡೆಯಲು ಮಾಲೀಕರ ಭಾವಚಿತ್ರ ಆಸ್ತಿ ತೆರಿಗೆ ಹಾಗೂ ನೀರಿನ ಕರದ ಚಲನ್, ಸ್ವತ್ತಿನ ನೋಂದಾಯಿತ ದಾಖಲೆಗಳು (ಕ್ರಯ ಪತ್ರ/ದಾನ ಪತ್ರ/ಹಕ್ಕು ಖುಲಾಸೆ ಪತ್ರ ವಿಭಾಗ ಪತ್ರ, ವಿಲ್ ಯಾನೆ ಮರಣ ಶಾಸನ ಪತ್ರ ಹಾಗೂ ಸರ್ಕಾರದ ಇಲಾಖೆಗಳಿಂದ ನೀಡಿರುವ ಹಕ್ಕು ಪತ್ರ) ವಿದ್ಯುತ್ ಆರ್.ಆರ್ ನಂಬರ್, ,ಸ್ವತ್ತಿನ ಛಾಯಾಚಿತ್ರ, ಋಣಭಾರರಾಹಿತ್ಯ ಪ್ರಮಾಣ ಪತ್ರ ನಮೂನೆ-15/16, ಮತದಾರರ ಗುರುತಿನ ಚೀಟಿ/ಪಾನ್ಕಾರ್ಡ್, ಪಹಣೆ, ಮ್ಯುಟೇಶನ್ ಪ್ರತಿ, ಸರ್ವೆ ನಕ್ಷೆ, ಸ್ವತ್ತಿಗೆ ಸಂಬಂಧಿಸಿದಂತೆ ಇತರೆ ಪೂರಕ ದಾಖಲೆಗಳು.
ಹೆಚ್ಚಿನ ಮಾಹಿತಿಗಾಗಿ 9620758441, 9108883323, 9742339925, 9164087417, 9740124515, ಕಛೇರಿಯ ವೇಳೆಯಲ್ಲಿ ಪುರಸಭೆಯ ಕಂದಾಯ ಶಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.








