Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

ಅಂಚೆ ಇಲಾಖೆ ಜೊತೆ ಫ್ಲಿಪ್‌ಕಾರ್ಟ್ ಮೆಗಾ ಒಪ್ಪಂದ: ಇನ್ಮುಂದೆ ಹಳ್ಳಿ ಹಳ್ಳಿಗೂ ತಲುಪಲಿದೆ ‘ಇ-ಕಾಮರ್ಸ್ ಪಾರ್ಸೆಲ್’!

ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ‘ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ’ ಹೆಚ್ಚಿಸಿ ಸರ್ಕಾರ ಆದೇಶ
KARNATAKA

GOOD NEWS: ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ‘ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚ’ ಹೆಚ್ಚಿಸಿ ಸರ್ಕಾರ ಆದೇಶ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆಯ ವೆಚ್ಚವನ್ನು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಮಾಡಿದೆ.

ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜರಲ್ ಆಫ್ ಪೊಲೀಸ್ ಅವರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ವೆಚ್ಚ ರೂ. 1000/- ಗಳಿಂದ ರೂ. 1500/- (ಒಂದು ಸಾವಿರದ ಐದು ನೂರು ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸದರಿ ಸರ್ಕಾರದ ಆದೇಶವನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಉಲ್ಲೇಖಿತ (4)ರ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055-00-001-0-01-021 (ವೈದ್ಯಕೀಯ ವೆಚ್ಚ ಮರುಪಾವತಿ)ಗಳ ಅಡಿಯಲ್ಲಿ ಭರಿಸತಕ್ಕದ್ದು ಎಂದು ನಮೂದಿಸಲಾಗಿರುತ್ತದೆ. ಆದರೆ ಸದರಿ ಲೆಕ್ಕ ಶೀರ್ಷಿಕೆ Direction & Administration ರಡಿಯಲ್ಲಿರುವ ಘಟಕಗಳಿಗೆ ಮಾತ್ರ ಸಂಬಂಧಿಸಿದ್ದು, ಇತರ ಘಟಕಗಳು ಒಳಗೊಂಡಿರುವುದಿಲ್ಲ.

ಆದ್ದರಿಂದ ಸರ್ಕಾರವು ಉಲ್ಲೇಖಿತ (5)ರ ನಡವಳಿ ಆದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ವೆಚ್ಚವನ್ನು ಮುಖ್ಯ ಲೆಕ್ಕ ಶೀರ್ಷಿಕೆ 2055ರ ಉಪಶೀರ್ಷಿಕೆ 021 ವೈದ್ಯಕೀಯ ವೆಚ್ಚ ಮರುಪಾವತಿಯಡಿಯಲ್ಲಿ ಭರಿಸತಕ್ಕದ್ದು, ಎಂದು ಆದೇಶಿಸಲಾಗಿರುತ್ತದೆ. ಆದೇಶದ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ಘಟಕಾಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್‌ ಸಿಬ್ಬಂದಿಗಳು ಸದರಿ ವೆಚ್ಚದಲ್ಲಿ ಈ ಕೆಳಕಂಡ ಪರೀಕ್ಷೆಗಳನ್ನು ಮಾಡಿಸತಕ್ಕದ್ದು.
1) Blood Pressure (BP)
2) Blood & Urine Sugar Test
3) Kidney Function Test
4) Ultrasound Test
5) ECG
6) Cholestrol Test
7) Liver Function Test
8) Optholmic Investigation 9) CBC
10) Urine Analysis

11) Chest X-ray
12) Echo Cardiogram
13) TMT – Tread Mill Test
14) Physician consultation

2. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2055ರ ಉಪ ಶೀರ್ಷಿಕೆ 021 (ವೈದ್ಯಕೀಯ ವೆಚ್ಚ ಮರುಪಾವತಿ) ಗಳ ಅಡಿಯಲ್ಲಿ ಭರಿಸತಕ್ಕದ್ದು.

3. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರುವ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಅಡಿಯಲ್ಲಿ ಗುರುತಿಸಲಾದ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಮಾಡಿಸುವುದು, ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಸರ್ಕಾರಿ ಮಾನ್ಯತೆ ಹೊಂದಿರದ ಆಸ್ಪತ್ರೆಗಳಲ್ಲಿ ಅಥವಾ ಎಬಿವೈ ಯೋಜನೆಯಡಿ ಗುರುತಿಸದೇ ಇರುವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸತಕ್ಕದ್ದಲ್ಲ.

4. ಘಟಕಾಧಿಕಾರಿಗಳು ಈ ಮೊತ್ತವನ್ನು ಡ್ರಾ ಮಾಡಿ ನೇರವಾಗಿ ವೈದ್ಯಕೀಯ ಆಸ್ಪತ್ರೆಗಳಿಗೆ ನೀಡುವುದು. ಯಾವುದೇ ಕಾರಣಕ್ಕು ಹಣವನ್ನು ಡ್ರಾ ಮಾಡಿ ನಗದಾಗಿ ಸಿಬ್ಬಂದಿಗಳಿಗೆ ನೀಡುವಂತಿಲ್ಲ.

5. ವಾರ್ಷಿಕ ರಹಸ್ಯ ವರದಿಯನ್ನು ಬರೆಯುವಾಗ ವೈದ್ಯಕೀಯ ತಪಾಸಣೆ ವರದಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕಾಲಂ ಅಡಿಯಲ್ಲಿ ತಪಾಸಣೆ ಮಾಡಿಸಿದ ಬಗ್ಗೆ ದಾಖಲಿಸುವುದು.

ಘಟಕಾಧಿಕಾರಿಗಳು ವೈದ್ಯಕೀಯ ತಪಾಸಣೆಯನ್ನು ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಈ ಸರ್ಕಾರಿ ಆದೇಶದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು.

Share. Facebook Twitter LinkedIn WhatsApp Email

Related Posts

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

2 Mins Read

‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ

1 Min Read
Recent News

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

ಅಂಚೆ ಇಲಾಖೆ ಜೊತೆ ಫ್ಲಿಪ್‌ಕಾರ್ಟ್ ಮೆಗಾ ಒಪ್ಪಂದ: ಇನ್ಮುಂದೆ ಹಳ್ಳಿ ಹಳ್ಳಿಗೂ ತಲುಪಲಿದೆ ‘ಇ-ಕಾಮರ್ಸ್ ಪಾರ್ಸೆಲ್’!

ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!

Happy Marriage: ಸುಖಿ ದಾಂಪತ್ಯಕ್ಕೆ ಗಂಡ-ಹೆಂಡತಿ ನಡುವೆ ಎಷ್ಟು ವಯಸ್ಸಿನ ಅಂತರ ಇರಬೇಕು? ವಿಜ್ಞಾನ ಹೇಳುವ ಅಸಲಿ ಸತ್ಯ ಇಲ್ಲಿದೆ!

State News
KARNATAKA

ಪರೀಕ್ಷೆ ಮುಗಿದ 10 ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಸೃಷ್ಟಿಸಿದ VTU

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಅಂತಿಮ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ…

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

‘IPS ಅಧಿಕಾರಿ ಡಾ.ಬೆನಕ ಪ್ರಸಾದ್’ ವರ್ಗಾವಣೆ ರದ್ದು; ‘ಸಾಗರ ಎಎಸ್ಪಿ’ಯಾಗಿ ಮುಂದುವರೆಸಿ ಸರ್ಕಾರ ಆದೇಶ

BREAKING: ಇಬೋಲಾ ವೈರಸ್ ಭೀತಿ: ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಗಾ, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.