ಬೆಂಗಳೂರು : ಸರ್ಕಾರಿ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನು ನೀಡುತ್ತಿದ್ದೂ, ಜಾಗತಿಕ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ ಕರ್ನಾಟಕದ ಕ್ರೀಡಾಪಟುಗಳಿಂದ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಎಂದು ಹೇಳಲಾಗುತ್ತಿದೆ.
ಒಲಿಂಪಿಕ್ಸ್, ಪ್ಯಾರಾ ಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್, ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ಅರ್ಜಿ ಸಲ್ಲಿಸ ಬಹುದಾಗಿದೆ.ಅರ್ಜಿ ನಮೂನೆಯನ್ನು https://dyes.karnataka.gov.in ವೆಬ್ಸೈಟ್ನಲ್ಲಿ ಒದಗಿಸಲಾಗಿದ್ದು, ಫೆ.9ರ ಸಂಜೆ 5 ಗಂಟೆಯ ಒಳಗಾಗಿ ಪೂರಕ ದಾಖಲೆ ಗಳೊಂದಿಗೆ ಕ್ರೀಡಾ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಸಂಸ್ಥೆಗಳಿಂದ ಅರ್ಹ ಸಾಧಕರ ಇತ್ತೀಚೆಗಷ್ಟೇ ಕ್ರೀಡಾ ಇಲಾಖೆಯು ಪಟ್ಟಿ ಸಲ್ಲಿಸುವಂತೆ ಸೂಚಿಸಿತ್ತು.ಇದೀಗ ಸರ್ಕಾರವು ರಾಜ್ಯದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿದ ಕರ್ನಾಟಕದ ಕ್ರೀಡಾಪಟುಗಳಿಂದ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.