ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ 08-10-2024ರಿಂದ ದಿನಾಂಕ 04-12-2024ರವರೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಭಾಗವಹಿಸಿ, ಮತವನ್ನು ಚಲಾಯಿಸುವ ನೌಕರರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುಮತಿ ನೀಡಲಾಗಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ದಿನಾಂಕ: 08.10.2024 ರಿಂದ 04.12.2024 ರವರೆಗೆ ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸುವ ಸರ್ಕಾರಿ ನೌಕರರಿಗೆ ಕಛೇರಿ ವೇಳೆಯಲ್ಲಿ ತೆರಳಿ ಮತದಾನ ಮಾಡಲು ವಿಶೇಷ ಅನುಮತಿ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ತಾಲ್ಲೂಕು ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗಳು, ಜಿಲ್ಲೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನದ ಚುನಾವಣೆಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ವಿವಿಧ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗಳು ದಿನಾಂಕ: 08.10.2024 ರಿಂದ 04.12.2024 ರವರೆಗೆ, ಸಮಯ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಸದರಿ ಚುನಾವಣೆಯಲ್ಲಿ ಮತ ಚಲಾಯಿಸ ಬಯಸುವ ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ‘ಎರಡು ಗಂಟೆಗಳ ವಿಶೇಷ ಅನುಮತಿ’ ನೀಡಲಾಗಿದೆ (ಭೋಜನ ವಿರಾಮದ ಮಧ್ಯಾಹ್ನ 1.30 ರಿಂದ 2.10ರ ವೇಳೆಯನ್ನು ಒಳಗೊಂಡಂತೆ) ಎಂದು ಹೇಳಿದೆ.
ಸದರಿ ಸಂಘದ ಸದಸ್ಯರಾಗಿ, ಮತದಾರರ ಪಟ್ಟಿಯಲ್ಲಿ ಹೆಸರಿರುವ ನೌಕರರಿಗೆ ಮಾತ್ರ ವಿಶೇಷ ಅನುಮತಿಯನ್ನು ನೀಡಲಾಗಿದೆ. ಈ ಅಧಿಕೃತ ಜ್ಞಾಪನದನ್ವಯ ನೀಡಲಾಗಿರುವ ವಿಶೇಷ ಅನುಮತಿಯನ್ನು ಉಪಯೋಗಿಸಿಕೊಂಡು ಮತ ಚಲಾಯಿಸಲು ತೆರಳುತ್ತಿರುವ ಬಗ್ಗೆ ನೌಕರರು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ, ತಂದು ಮತ ಚಲಾಯಿಸಬಹುದಾಗಿದ್ದು, ಮತದಾನದ ನಂತರ ಪುನಃ ಕಚೇರಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಸಂಬಂಧಿತ ಮೇಲಾಧಿಕಾರಿಗಳು ಈ ವಿಶೇಷ ಅನುಮತಿಯಿಂದ ಕಚೇರಿ ಕೆಲಸಗಳಿಗೆ ತೊಡಕಾಗದಂತೆ ಹಾಗೂ ವಿಧಾನ ಮಂಡಲದ ಕಾರ್ಯಕಲಾಪಗಳಿಗೆ ಅಡಚಣೆಯಾಗದಂತೆಯೂ ಎಚ್ಚರವಹಿಸುವಂತೆ ಈ ಮೂಲಕ ಸೂಚಿಸಿದ್ದಾರೆ.
ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 791 ವೆಚ್ಚ-12/2024, ದಿನಾಂಕ:09.10.2024ರನ್ವಯ ನೀಡಿಲಾದ ಸಹಮತಿಯ ಮೇರೆಗೆ ಈ ವಿಶೇಷ ಅನುಮತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು