Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಹೀಗಿವೆ ಲೈಂಗಿಕವಾಗಿ ಹರಡುವ ಸೋಂಕುಗಳು, ಮುನ್ನೆಚ್ಚರಿಕೆ ಕ್ರಮಗಳು

15/04/2026 9:44 PM

ವೈದ್ಯಕೀಯ ಚಿಕಿತ್ಸೆಯಿಲ್ಲದೇ ನಿಮ್ಮ ‘ಲೈಂಗಿಕ ಸಾಮರ್ಥ್ಯ’ ಹೆಚ್ಚಿಸಲು ಇಲ್ಲಿದೆ ಟಿಪ್ಸ್

15/04/2026 9:33 PM

BREAKING: ಇನ್ಮುಂದೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘EVM’ ಬದಲು ‘ಬ್ಯಾಲೆಟ್ ಪೇಪರ್’ ಬಳಕೆ: ರಾಜ್ಯ ಸರ್ಕಾರ ಆದೇಶ

15/04/2026 9:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದ ಸಣ್ಣ ವ್ಯಾಪಾರಸ್ಥರಿಗೆ ಗುಡ್ ನ್ಯೂಸ್: ಸಿಗಲಿದೆ 24 ಗಂಟೆಗಳ ‘ಜಿಯೋ ಏಜೆಂಟಿಕ್ AI’ ಸಹಾಯಕ
INDIA

ಭಾರತದ ಸಣ್ಣ ವ್ಯಾಪಾರಸ್ಥರಿಗೆ ಗುಡ್ ನ್ಯೂಸ್: ಸಿಗಲಿದೆ 24 ಗಂಟೆಗಳ ‘ಜಿಯೋ ಏಜೆಂಟಿಕ್ AI’ ಸಹಾಯಕ

By kannadanewsnow0912/10/2025 6:29 PM

ನವದೆಹಲಿ : ಸಣ್ಣ ಪ್ರಮಾಣದಲ್ಲಿ ಅಂಗಡಿ ನಡೆಸುತ್ತಿರುವವರು ಮತ್ತು ಕಿರು ಉದ್ಯಮಗಳು ಸಹ ಈಗ ದೊಡ್ಡ ಪ್ರಮಾಣದ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳ ಜೊತೆಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಸಣ್ಣ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವುದಕ್ಕಾಗಿ ರಿಲಯನ್ಸ್ ಜಿಯೋ ಎಐ ಸಹಾಯಕವನ್ನು ಪರಿಚಯಿಸಿದೆ. ಈ ಎಐ ಸಹಾಯಕವು ದಿನದ ಇಪ್ಪತ್ನಾಲ್ಕು ಗಂಟೆಯೂ ನೆರವಾಗುತ್ತದೆ. ಅದು ಹೇಗೆಂದರೆ ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್ ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಆರ್ಡರ್ ಗಳನ್ನು ಪ್ರೊಸೆಸ್ ಮಾಡುವುದು, ವಿತರಣೆಗಳನ್ನು ಖಚಿತಪಡಿಸುವುದು, ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸುವುದು ಮತ್ತು ದೃಢೀಕರಣ ಸಂದೇಶಗಳನ್ನು ಕಳುಹಿಸುವುದು- ಹೀಗೆ ಎಲ್ಲವನ್ನೂ ತಪ್ಪದೆ ಮಾಡುತ್ತದೆ. ರಿಲಯನ್ಸ್ ಜಿಯೋ ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಪ್ರದರ್ಶಿಸಿತು.

ಕಿರು ಉದ್ಯಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಯೋ ಏಜೆಂಟಿಕ್ ಎಐ ಸಹಾಯಕವು ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲದು. ಪರೀಕ್ಷಾರ್ಥವಾಗಿ ಶೀಘ್ರದಲ್ಲಿಯೇ ತೆಲುಗು ಮತ್ತು ಕನ್ನಡದಲ್ಲಿ ಪ್ರಾರಂಭ ಆಗಲಿದೆ. ಕಂಪನಿಯು ಇದನ್ನು 10 ಭಾರತೀಯ ಭಾಷೆಗಳಲ್ಲಿ ಪ್ರಾರಂಭಿಸಲು ಯೋಜಿಸಿದೆ. ಭಾರತೀಯ ಭಾಷೆಯ ಪರಿಚಯವಿರುವ ಜಿಯೋ ಏಜೆಂಟ್ ಎಐ ಸಹಾಯಕದ ಉಚ್ಚಾರಣೆ ಮತ್ತು ಪದಗಳ ಆಯ್ಕೆಯು ಎಷ್ಟು ನಿಖರವಾಗಿತ್ತೆಂದರೆ, ಗ್ರಾಹಕರು ತಾವು ಎಐ ಜೊತೆ ಮಾತನಾಡುತ್ತಿದ್ದೇವೆಯೇ ಅಥವಾ ಮನುಷ್ಯರ ಜೊತೆಗೆ ಮಾತನಾಡುತ್ತಿದ್ದೇವೆಯೇ ಎಂಬುದನ್ನು ಗುರುತಿಸುವುದು ಸಹ ಕಷ್ಟವಾಗುತ್ತದೆ.

ಸಣ್ಣ ಅಂಗಡಿಯವರು ಮತ್ತು ಸಣ್ಣ ವ್ಯವಹಾರಗಳಿಗಾಗಿ ಜಿಯೋ ಏಜೆಂಟ್ ಎಐ ಮಾರಾಟಗಾರರ ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ನೀವು ಹೊಸ ಉತ್ಪನ್ನವನ್ನು ಮಾರಾಟ ಮಾಡಬೇಕಾದರೆ ಜಿಯೋ ಏಜೆಂಟ್ ಎಐ ಸಹಾಯಕ ಸಹಾಯ ಮಾಡುತ್ತದೆ. ಇದು ಉತ್ಪನ್ನಗಳು ಮತ್ತು ಆಫರ್ ಗಳ ಕುರಿತು ಮಾಹಿತಿಯೊಂದಿಗೆ ಗ್ರಾಹಕರಿಗೆ ಕರೆ ಮಾಡಬಹುದು, ಅವರ ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಅಂಗಡಿ ಅಥವಾ ವ್ಯವಹಾರದ ವಿಳಾಸವನ್ನು ಸಹ ಒದಗಿಸಬಹುದು.

ಜಿಯೋದ ಎಐ ಸಹಾಯಕ ಎಂದಿಗೂ ರಜೆ ತೆಗೆದುಕೊಳ್ಳುವುದಿಲ್ಲ. ಇದು ದಿನದ 24 ಗಂಟೆಯೂ ಯಾವುದೇ ಸಮಯದಲ್ಲಿ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಿದ್ಧವಾಗಿರುತ್ತದೆ. ಮತ್ತು ಹೌದು, ಒಂದೇ ಸಮಯದಲ್ಲಿ ಬಹು ಗ್ರಾಹಕರು ಕರೆ ಮಾಡುತ್ತಿದ್ದರೆ ಚಿಂತಿಸಬೇಕಾಗಿಲ್ಲ. ಎಐ ಸಹಾಯಕವು ಎಲ್ಲ ಕರೆಗಳಿಗೆ ಏಕಕಾಲದಲ್ಲಿ ಉತ್ತರಿಸುತ್ತದೆ ಮತ್ತು ಅವರ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಪರಿಹಾರಗಳನ್ನು ಒದಗಿಸುತ್ತದೆ.

ಕಂಪನಿಯ ಪ್ರಕಾರ, “ತಂತ್ರಜ್ಞಾನ ಮೂಲಸೌಕರ್ಯದ ಬಗ್ಗೆ ಜ್ಞಾನದ ಕೊರತೆ ಮತ್ತು ಡಿಜಿಟಲ್ ವ್ಯವಹಾರ ಅಥವಾ ಇ-ಕಾಮರ್ಸ್‌ನ ಸೀಮಿತ ಬಳಕೆಯಿಂದಾಗಿ ಸಣ್ಣ ವ್ಯವಹಾರಗಳು ಬೆಳೆಯುವುದನ್ನು ತಡೆಯುತ್ತದೆ. ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ಅವರಿಗೆ ಸೀಮಿತ ಸಂಪನ್ಮೂಲಗಳಿವೆ.” “ಜಿಯೋ ಏಜೆಂಟ್ ಎಐ” ಸಣ್ಣ ಅಂಗಡಿಯವರಿಗೆ ಹೊಸ ವ್ಯವಹಾರ ಮಾರ್ಗಗಳನ್ನು ತೋರಿಸುತ್ತದೆ, ಈ ಹೊಸ ಡಿಜಿಟಲ್ ಜಗತ್ತಿನೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.”

ಬ್ಯಾಕ್ ಎಂಡ್ ನಲ್ಲಿ ಈ ಎಐ ಸಹಾಯಕವು ಜಿಯೋದ ಸುರಕ್ಷಿತ ಸರ್ವರ್‌ಗಳನ್ನು ಬಳಸುತ್ತದೆ. ಡೇಟಾ ಸುರಕ್ಷತೆ ಮತ್ತು ವೇಗಕ್ಕಾಗಿ, ಇದು ಜಿಯೋ ಕ್ಲೌಡ್ ಮತ್ತು ಜಿಯೋದ ಸ್ವಂತ ಟ್ರೂ 5ಜಿ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತದೆ.

BREAKING: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಅಂತಿಮ: ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ | Bihar Election 2025

BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion

Share. Facebook Twitter LinkedIn WhatsApp Email

Related Posts

ಹಾರ್ಮುಜ್ ಬಿಕ್ಕಟ್ಟು: ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುವುದು ಅಕ್ಷಮ್ಯ; ಸುರಕ್ಷಿತ ಮಾರ್ಗಕ್ಕೆ ಭಾರತ ಆಗ್ರಹ

15/04/2026 9:04 PM1 Min Read

‘ಸಾಮಾಜಿಕ ಸುಧಾರಣೆಯ ಹೆಸರಲ್ಲಿ ಧರ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ’: ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಮಾತು

15/04/2026 8:44 PM1 Min Read

ಗುಜರಾತ್ ಕರಾವಳಿಯಲ್ಲಿ ಅನಾಮಧೇಯ ಇರಾನ್ ತೈಲ ನೌಕೆ ಪ್ರತ್ಯಕ್ಷ: ತೈಲ ಖರೀದಿಸಲು ಭಾರತದ ಕಂಪನಿಗಳ ನಿರಾಕರಣೆ!

15/04/2026 8:34 PM1 Min Read
Recent News

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಹೀಗಿವೆ ಲೈಂಗಿಕವಾಗಿ ಹರಡುವ ಸೋಂಕುಗಳು, ಮುನ್ನೆಚ್ಚರಿಕೆ ಕ್ರಮಗಳು

15/04/2026 9:44 PM

ವೈದ್ಯಕೀಯ ಚಿಕಿತ್ಸೆಯಿಲ್ಲದೇ ನಿಮ್ಮ ‘ಲೈಂಗಿಕ ಸಾಮರ್ಥ್ಯ’ ಹೆಚ್ಚಿಸಲು ಇಲ್ಲಿದೆ ಟಿಪ್ಸ್

15/04/2026 9:33 PM

BREAKING: ಇನ್ಮುಂದೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘EVM’ ಬದಲು ‘ಬ್ಯಾಲೆಟ್ ಪೇಪರ್’ ಬಳಕೆ: ರಾಜ್ಯ ಸರ್ಕಾರ ಆದೇಶ

15/04/2026 9:22 PM

ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣಗೊಳಿಸಿದ ಸಚಿವ ಎನ್.ಎಸ್ ಬೋಸರಾಜು

15/04/2026 9:15 PM
State News
KARNATAKA

BREAKING: ಇನ್ಮುಂದೆ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘EVM’ ಬದಲು ‘ಬ್ಯಾಲೆಟ್ ಪೇಪರ್’ ಬಳಕೆ: ರಾಜ್ಯ ಸರ್ಕಾರ ಆದೇಶ

By kannadanewsnow0915/04/2026 9:22 PM KARNATAKA 2 Mins Read

ಬೆಂಗಳೂರು: ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಇತಿಹಾಸದಲ್ಲಿ 2026ರ ಏಪ್ರಿಲ್ 15 ಒಂದು ಮಹತ್ವದ ದಿನವಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು…

ದೇಶದ ಮೊಟ್ಟಮೊದಲ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನಾವರಣಗೊಳಿಸಿದ ಸಚಿವ ಎನ್.ಎಸ್ ಬೋಸರಾಜು

15/04/2026 9:15 PM

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026’ ಕ್ಕೆ ರಾಜ್ಯಪಾಲರ ಅಂಕಿತ

15/04/2026 8:01 PM

ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’

15/04/2026 7:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.